ಕರ್ನಾಟಕದಲ್ಲಿ ಏಪ್ರಿಲ್ 1 ರಿಂದ ಮೊದಲ ಹಂತದ ಗಣತಿ ಆರಂಭ! ಮನೆಯಲ್ಲೇ ಕುಳಿತು ನೀವೇ ಮಾಹಿತಿ ನೀಡಬಹುದು

ಬೆಂಗಳೂರು: ದೇಶದ ಮಹತ್ವದ ಜನಗಣತಿ ಪ್ರಕ್ರಿಯೆಗೆ ಕರ್ನಾಟಕದಲ್ಲಿ ಚಾಲನೆ ಸಿಗುತ್ತಿದೆ. 2027ರ ಜನಗಣತಿಯ ಮೊದಲ ಹಂತವಾಗಿ ಏಪ್ರಿಲ್ 1 ರಿಂದ ‘ಸ್ವಯಂ ಗಣತಿ’ (Self-Enumeration) ಪ್ರಕ್ರಿಯೆ ಆರಂಭವಾಗಲಿದ್ದು, ಸಾರ್ವಜನಿಕರು ಆನ್‌ಲೈನ್ ಮೂಲಕ ತಮ್ಮ ಮಾಹಿತಿಯನ್ನು ತಾವೇ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಮೊದಲ ಹಂತದ ಗಣತಿಯು ಏಪ್ರಿಲ್ 1, 2026 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ.ಗಣತಿದಾರರು ಮನೆಗೆ ಬರುವ ಮೊದಲೇ ನಾಗರಿಕರು ಸರ್ಕಾರಿ ಪೋರ್ಟಲ್ ಮೂಲಕ ತಮ್ಮ ಕುಟುಂಬದ ಸದಸ್ಯರ ವಿವರ, ಮನೆಯ ಸ್ಥಿತಿಗತಿ ಮತ್ತು ಇತರೆ ಮಾಹಿತಿಗಳನ್ನು ತಾವೇ ಅಪ್‌ಲೋಡ್ ಮಾಡಬಹುದು.

Advertisement

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಗಮನಕ್ಕೆ: ಮಾ. 30ರ ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ!

ಅಧಿಕೃತ ಜನಗಣತಿ ಪೋರ್ಟಲ್‌ಗೆ ಲಾಗಿನ್ ಆಗಿ, ಮೊಬೈಲ್ ಸಂಖ್ಯೆ ನೀಡಿ ಒಟಿಪಿ (OTP) ಮೂಲಕ ನೋಂದಾಯಿಸಿಕೊಳ್ಳಬೇಕು. ಅಲ್ಲಿ ಕೇಳಲಾದ ಪ್ರಶ್ನೆಗಳಿಗೆ ನಿಖರ ಮಾಹಿತಿ ನೀಡಿ ಸಬ್‌ಮಿಟ್ ಮಾಡಬೇಕು.ಈ ಬಾರಿ ಕಾಗದ ರಹಿತ ಗಣತಿಗೆ ಆದ್ಯತೆ ನೀಡಲಾಗುತ್ತಿದ್ದು, ಇದು ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ನಿಖರತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.ನಾಗರಿಕರು ನೀಡುವ ಎಲ್ಲಾ ಮಾಹಿತಿಗಳನ್ನು ಅತ್ಯಂತ ಗೌಪ್ಯವಾಗಿಡಲಾಗುವುದು ಎಂದು ಗಣತಿ ಇಲಾಖೆ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು