ದಾಸವಾಳದ ಹೂವು ನುಂಗಿ ಆರೂವರೆ ತಿಂಗಳ ಮಗು ಸಾವು: ಮೈಸೂರಿನಲ್ಲಿ ನಡೆದ ದಾರುಣ ಘಟನೆ!

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಅತ್ಯಂತ ಕರುಣಾಜನಕ ಘಟನೆಯೊಂದು ನಡೆದಿದೆ. ಆಟವಾಡುತ್ತಾ ಒಣಗಿದ ದಾಸವಾಳದ ಹೂವನ್ನು ನುಂಗಿದ ಆರೂವರೆ ತಿಂಗಳ ಹಸುಗೂಸು ಉಸಿರುಗಟ್ಟಿ ಸಾವನ್ನಪ್ಪಿದೆ.

ದೊಡ್ಡಹೆಜ್ಜೂರಿನ ಸುದರ್ಶನ್ ಮತ್ತು ನವ್ಯ ದಂಪತಿಯ ಎರಡನೇ ಪುತ್ರ ಚಿನ್ಮಯಿಗೌಡ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಮಗು. ಮನೆಯ ಹೊಸಲಿನಲ್ಲಿ ಪೂಜೆಗಾಗಿ ಇರಿಸಿದ್ದ ದಾಸವಾಳದ ಹೂವನ್ನು ಮಗು ಆಟವಾಡುತ್ತಾ ಬಾಯಿಗೆ ಹಾಕಿಕೊಂಡಿದೆ. ತನ್ನ ಅಣ್ಣ ಹೂವನ್ನು ಕಿತ್ತುಕೊಳ್ಳುತ್ತಾನೆಂಬ ಧಾವಂತದಲ್ಲಿ ಮಗು ಅದನ್ನು ನುಂಗಲು ಯತ್ನಿಸಿದೆ. ಈ ವೇಳೆ ಒಣಗಿದ ಹೂವು ಗಂಟಲಿನಲ್ಲಿ ಸಿಲುಕಿಕೊಂಡು ಮಗುವಿಗೆ ತೀವ್ರ ಉಸಿರಾಟದ ತೊಂದರೆಯಾಗಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಹಾಲಿನ ಪ್ಯಾಕೆಟ್ ಒಳಗೆ ಮೊಬೈಲ್! ಡಿಜಿಪಿ ಹೆಸರೇಳಿ ವಿಡಿಯೋ ಮಾಡಿದ ಕೈದಿಗಳು!

ಮಗು ಅಸ್ವಸ್ಥಗೊಳ್ಳುತ್ತಿದ್ದಂತೆಯೇ ಪೋಷಕರು ತಕ್ಷಣವೇ ಹನಗೋಡಿನ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ. ಕಣ್ಣೆದುರೇ ಆಟವಾಡುತ್ತಿದ್ದ ಕಂದಮ್ಮ ಮೃತಪಟ್ಟಿದ್ದರಿಂದ ಕುಟುಂಬದಲ್ಲಿ ಮೌನ ಆವರಿಸಿದ್ದು, ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು