ನಿರ್ಮಾಪಕರ ಜೊತೆ ಮಲಗಲು ಡಿಮ್ಯಾಂಡ್: ಚಿತ್ರರಂಗದ ಕಾಸ್ಟಿಂಗ್ ಕೌಚ್ ಜಾಲ ಬಿಚ್ಚಿಟ್ಟ ‘ವಡಾ ಪಾವ್ ಗರ್ಲ್’ ಚಂದ್ರಿಕಾ ದೀಕ್ಷಿತ್!

ಮುಂಬೈ: ಸೋಶಿಯಲ್ ಮೀಡಿಯಾ ಮೂಲಕ ರಾತ್ರೋರಾತ್ರಿ ಪ್ರಸಿದ್ಧಿ ಪಡೆದು, ನಂತರ ಬಿಗ್ ಬಾಸ್ ಮನೆಗೂ ಎಂಟ್ರಿ ಕೊಟ್ಟಿದ್ದ ದೆಹಲಿಯ ‘ವಡಾ ಪಾವ್ ಗರ್ಲ್’ ಚಂದ್ರಿಕಾ ದೀಕ್ಷಿತ್ ಈಗ ಚಿತ್ರರಂಗದ ಕರಾಳ ಮುಖವನ್ನು ಬಯಲು ಮಾಡಿದ್ದಾರೆ. ತಮಗೆ ಬಂದಿರುವ ಅಸಭ್ಯ ಫೋನ್ ಕರೆಯ ಆಡಿಯೋ ಕ್ಲಿಪ್ ಅನ್ನು ಹಂಚಿಕೊಳ್ಳುವ ಮೂಲಕ ‘ಕಾಸ್ಟಿಂಗ್ ಕೌಚ್’ (Casting Couch) ಹಾವಳಿಯ ಬಗ್ಗೆ ಆತಂಕಕಾರಿ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಹಂಚಿಕೊಂಡಿರುವ ವಿಡಿಯೋದಲ್ಲಿ ಚಂದ್ರಿಕಾ ಅವರು ವ್ಯಕ್ತಿಯೊಬ್ಬರ ಜೊತೆಗಿನ ಫೋನ್ ಸಂಭಾಷಣೆಯನ್ನು ಪ್ಲೇ ಮಾಡಿದ್ದಾರೆ. ಅದರಲ್ಲಿ ಆ ವ್ಯಕ್ತಿಯು, “ನಿಮಗೆ ಚಿತ್ರರಂಗದಲ್ಲಿ ದೊಡ್ಡ ಅವಕಾಶ ಬೇಕೆಂದರೆ ರಾಜಿ (Compromise) ಮಾಡಿಕೊಳ್ಳಬೇಕು. ನೀವು ಇಬ್ಬರು ನಿರ್ಮಾಪಕರ ಜೊತೆ ಹಾಸಿಗೆ ಹಂಚಿಕೊಳ್ಳಬೇಕು. ಇದಕ್ಕೆ ನಿಮ್ಮ ರೇಟ್ ಎಷ್ಟು?” ಎಂದು ನೇರವಾಗಿ ಕೇಳಿರುವುದು ದಾಖಲಾಗಿದೆ.

Advertisement

ಇಲ್ಲಿದೆ ನೋಡಿ ಎಕ್ಸ್​​​ ಪೋಸ್ಟ್

Advertisement

ಈ ಆಡಿಯೋ ಬಗ್ಗೆ ಮಾತನಾಡಿರುವ ಚಂದ್ರಿಕಾ, “ನಟಿಯಾಗಬೇಕೆಂದು ಕನಸು ಹೊತ್ತು ಬರುವ ಹೆಣ್ಣುಮಕ್ಕಳನ್ನು ಇಲ್ಲಿನ ಕೆಲವು ರಾಕ್ಷಸರು ಹೇಗೆ ಬಳಸಿಕೊಳ್ಳಲು ಕಾಯುತ್ತಿರುತ್ತಾರೆ ಎಂಬುದಕ್ಕೆ ಇದು ಸಾಕ್ಷಿ. ಹಣ ಮತ್ತು ಅವಕಾಶಕ್ಕಾಗಿ ಇಲ್ಲಿ ಹಾಸಿಗೆ ಹಂಚಿಕೊಳ್ಳುವಂತೆ ಒತ್ತಾಯಿಸುತ್ತಾರೆ. ಚಿತ್ರರಂಗಕ್ಕೆ ಬರುವ ಮೊದಲು ಇಂತಹ ಕಹಿ ಅನುಭವಗಳನ್ನು ಎದುರಿಸಬೇಕಾದ ಪರಿಸ್ಥಿತಿ ಅನೇಕರಿಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ಯಾಂಟ್ ಸಡಿಲಿಸಿ ತನ್ನ ಗುಪ್ತಾಂಗವನ್ನು ಮಹಿಳೆಯ ಕಿವಿಗೆ ತಾಗಿಸಿದ ವ್ಯಕ್ತಿ

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಚಂದ್ರಿಕಾ ಅವರು, “ನನ್ನ ಮಗನ ಭವಿಷ್ಯಕ್ಕಾಗಿ ನಾನು ಹಣಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯೇ ಇಂತಹ ಅಸಭ್ಯ ಕರೆಗಳು ಬರಲು ಕಾರಣವಾಗಿರಬಹುದು ಎಂದು ಕೆಲವು ನೆಟ್ಟಿಗರು ಟೀಕಿಸುತ್ತಿದ್ದರೆ, ಇನ್ನು ಕೆಲವರು ಅವರ ಧೈರ್ಯವನ್ನು ಮೆಚ್ಚಿ ಬೆಂಬಲ ಸೂಚಿಸಿದ್ದಾರೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು