ಹಾಪುರ್ : ಕೇವಲ ತಿಂಡಿ ಅಥವಾ ಸಣ್ಣಪುಟ್ಟ ವಸ್ತುಗಳನ್ನು ಕದ್ದಿದ್ದಾನೆ ಎಂಬ ಶಂಕೆಯ ಮೇಲೆ ಏಳು ವರ್ಷದ ಪುಟ್ಟ ಬಾಲಕನೊಬ್ಬನನ್ನು ಅಂಗಡಿಯ ಮಾಲೀಕನೊಬ್ಬ ಸುಮಾರು ಐದು ಗಂಟೆಗಳ ಕಾಲ ಡೀಪ್ ಫ್ರೀಜರ್‌ನಲ್ಲಿ ಕೂಡಿಟ್ಟ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಶೇಖ್‌ಪುರ ಖಿಚ್ರಾ ಗ್ರಾಮದಲ್ಲಿ ನಡೆದಿದೆ.
ಆರೋಪಿ ಮೊಹಮ್ಮದ್ ಆಜಾದ್ ಎಂಬಾತ ತನ್ನ ವರ್ಕ್‌ಶಾಪ್‌ನಲ್ಲಿ ಬಾಲಕನು ಏನೋ ಕಳ್ಳತನ ಮಾಡಿದ್ದಾನೆ ಎಂದು ಸಂಶಯ ವ್ಯಕ್ತಪಡಿಸಿದ್ದನು. ಬಾಲಕನಿಗೆ ಪಾಠ ಕಲಿಸಬೇಕೆಂದು ನಿರ್ಧರಿಸಿದ ಆತ, ಅಮಾನವೀಯವಾಗಿ ಬಾಲಕನನ್ನು ಡೀಪ್ ಫ್ರೀಜರ್‌ನೊಳಗೆ ತಳ್ಳಿ ಬೀಗ ಹಾಕಿದ್ದಾನೆ. ಸುಮಾರು ಐದು ಗಂಟೆಗಳ ಕಾಲ ಆ ಪುಟ್ಟ ಜೀವ ಕೊರೆಯುವ ಚಳಿಯಲ್ಲಿ ನರಳಿದೆ.

ಇಲ್ಲಿದೆ ನೋಡಿ ವಿಡಿಯೋ:
In UP’s Hapur, a minor boy was locked inside deep freeze on the suspicion of theft. pic.twitter.com/QLozL0IJ7M
— Piyush Rai (@Benarasiyaa) March 31, 2026
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಬಾಲಕನು ಫ್ರೀಜರ್‌ನಿಂದ ಹೊರಬಂದ ನಂತರ ಪ್ರಾಣಭಯದಿಂದ ತೀವ್ರವಾಗಿ ಅಳುತ್ತಿರುವುದು ಕಂಡುಬಂದಿದೆ. ಅರೋಪಿ ಆಜಾದ್ ಬಾಲಕನಿಗೆ ಚಾಕು ತೋರಿಸಿ ಬೆದರಿಕೆ ಹಾಕುತ್ತಿರುವುದು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಒಂದು ಬಾಟಲಿ ವೈನ್ ಬೆಲೆ 7.63 ಕೋಟಿ ರೂಪಾಯಿ! ಹರಾಜಿನಲ್ಲಿ ವಿಶ್ವ ದಾಖಲೆ ಬರೆದ 1945ರ ರೋಮನಿ-ಕಾಂಟಿ ವೈನ್
ವಿಡಿಯೋ ಗಮನಿಸಿದ ಪೊಲೀಸರು ಸ್ವಯಂಪ್ರೇರಿತ ದೂರು (Suo-moto) ದಾಖಲಿಸಿಕೊಂಡಿದ್ದಾರೆ. ಆರೋಪಿ ಮೊಹಮ್ಮದ್ ಆಜಾದ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಬಾಲಕನಿಗೆ ಸದ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ಆತ ತೀವ್ರ ಆಘಾತಕ್ಕೊಳಗಾಗಿದ್ದಾನೆ ಎಂದು ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


