ಹನುಮ ಜಯಂತಿ ಮತ್ತು ಚೈತ್ರ ಪೌರ್ಣಮಿಯ ಶುಭ ಸಂಗಮ: ಆಂಜನೇಯನ ಕೃಪೆಗೆ ಪಾತ್ರರಾಗಲು ಇಂದು ಮರೆಯದೇ ಈ ಕೆಲಸ ಮಾಡಿ.

ಚೈತ್ರ ಮಾಸದ ಈ ಪೌರ್ಣಮಿಯು ಹಿಂದೂ ಪಂಚಾಂಗದ ಹೊಸ ವರ್ಷದ ಮೊದಲ ಹುಣ್ಣಿಮೆಯಾಗಿದ್ದು, ಆಧ್ಯಾತ್ಮಿಕವಾಗಿ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಇದನ್ನು ದವನದ ಹುಣ್ಣಿಮೆ ಅಥವಾ ಚಿತ್ರ ಪೌರ್ಣಮಿ ಎಂದೂ ಕರೆಯಲಾಗುತ್ತದೆ.

ಮುಂಜಾನೆ ಬೇಗ ಎದ್ದು ಪವಿತ್ರ ನದಿಗಳಲ್ಲಿ ಅಥವಾ ಮನೆಯಲ್ಲೇ ಗಂಗಾಜಲ ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದು ಪಾಪನಿವಾರಕ ಎಂದು ನಂಬಲಾಗಿದೆ. ಈ ದಿನ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಕಥೆಯನ್ನು ಓದುವುದು ಅಥವಾ ಕೇಳುವುದು ಅತ್ಯಂತ ಮಂಗಳಕರ.

Advertisement

ಶ್ರೀಹರಿ ವಿಷ್ಣು, ಚಂದ್ರ ದೇವ ಮತ್ತು ಹನುಮಂತನನ್ನು ಆರಾಧಿಸಲಾಗುತ್ತದೆ. ಇಂದು ಹನುಮ ಜಯಂತಿ ಕೂಡ ಆಗಿರುವುದರಿಂದ ಆಂಜನೇಯನಿಗೆ ಮಲ್ಲಿಗೆ ಎಣ್ಣೆ ಮತ್ತು ಸಿಂದೂರ ಅರ್ಪಿಸುವುದು ವಿಶೇಷ. ಮನುಷ್ಯರ ಪಾಪ-ಪುಣ್ಯಗಳ ಲೆಕ್ಕ ಇಡುವ ಚಿತ್ರಗುಪ್ತನನ್ನು ಇಂದು ವಿಶೇಷವಾಗಿ ಪೂಜಿಸಲಾಗುತ್ತದೆ.

ಇಂದು ಈ ಕೆಳಗಿನ ಮಂತ್ರಗಳನ್ನು ಜಪಿಸುವುದು ಉತ್ತಮ ಫಲ ನೀಡುತ್ತದೆ:

Advertisement

“ಓಂ ನಮೋ ಭಗವತೇ ವಾಸುದೇವಾಯ” (ವಿಷ್ಣು ಮಂತ್ರ)

“ಓಂ ಶ್ರಾಂ ಶ್ರೀಂ ಶ್ರೌಂ ಸಃ ಚಂದ್ರಮಸೇ ನಮಃ” (ಚಂದ್ರ ಮಂತ್ರ)

Advertisement

ಹನುಮಾನ್ ಚಾಲೀಸಾ ಮತ್ತು ಸುಂದರಕಾಂಡ ಪಠಣ.

ಇದನ್ನೂ ಓದಿ: ಮನೆಯ ಲಕ್ಷ್ಮಿ ಕಣ್ಣೀರು ಹಾಕಿದರೆ ದರಿದ್ರ ಲಕ್ಷ್ಮಿ ಮನೆ ಸೇರುತ್ತಾಳೆ: ಸ್ತ್ರೀ ಹಲ್ಲೆಯ ಬಗ್ಗೆ ಶಾಸ್ತ್ರ ಹೇಳುವ ಕಟು ಸತ್ಯ

ದಾನದ ಮಹತ್ವ

ಈ ಪವಿತ್ರ ದಿನದಂದು ಅನ್ನದಾನ, ವಸ್ತ್ರದಾನ ಅಥವಾ ಬಾಯಾರಿದವರಿಗೆ ಪಾನಕ-ಮಜ್ಜಿಗೆ ವಿತರಿಸುವುದು ಕರ್ಮಫಲಗಳನ್ನು ಕಳೆದು ಪುಣ್ಯವನ್ನು ತರುತ್ತದೆ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು