ಬೆಂಗಳೂರು : ಹಿರಿಯ ಕನ್ನಡ ಹೋರಾಟಗಾರ ಹಾಗೂ ಮಾಜಿ ಶಾಸಕರಾದ ವಾಟಾಳ್ ನಾಗರಾಜ್ ಅವರನ್ನು ಬುಧವಾರ ನಾಟಕೀಯ ಬೆಳವಣಿಗೆಯ ನಡುವೆ ಪೊಲೀಸರು ಬಂಧಿಸಿದ್ದಾರೆ.
ವಾಟಾಳ್ ನಾಗರಾಜ್ ಅವರನ್ನು ಅವರ ಡಾಲರ್ಸ್ ಕಾಲೊನಿಯ ನಿವಾಸದಿಂದ ಬಸವೇಶ್ವರ ನಗರ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದರು.

ಇದನ್ನೂ ಓದಿ ದ್ವಿತೀಯ ಪಿಯುಸಿ ಫಲಿತಾಂಶದ ನಡುವೆ ವಿದ್ಯಾರ್ಥಿಗಳಿಗೆ ಅದೃಷ್ಟ ತರಲಿದ್ದಾನೆ ಗುರುರಾಯ
2021ರಲ್ಲಿ ನಡೆದ ಪ್ರತಿಭಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಹೊರಡಿಸಿದ್ದ ವಾರಂಟ್ ಆಧಾರದ ಮೇಲೆ ಬಂಧನ ನಡೆದಿದೆ. ವಾರಂಟ್ ಇಂಗ್ಲಿಷ್‌ನಲ್ಲಿ ನೀಡಿರುವುದಕ್ಕೆ ವಾಟಾಳ್ ನಾಗರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕನ್ನಡದಲ್ಲಿ ನೀಡಬೇಕು ಎಂದು ಒತ್ತಾಯಿಸಿದರು.

ಬಂಧನದ ವೇಳೆ ಅವರು ಪೊಲೀಸರೊಂದಿಗೆ ಸಹಕರಿಸಲು ನಿರಾಕರಿಸಿ, ಪರಿಸ್ಥಿತಿ ಕೆಲಕಾಲ ಉದ್ವಿಗ್ನಗೊಂಡಿತು. ಪೊಲೀಸ್ ವಾಹನದಲ್ಲಿ ಹೋಗುವುದಕ್ಕೂ ನಿರಾಕರಿಸಿದ ಅವರು, ಬಳಿಕ ಆಟೋ ರಿಕ್ಷಾದಲ್ಲಿ ನ್ಯಾಯಾಲಯಕ್ಕೆ ಕರೆದೊಯ್ಯಲ್ಪಟ್ಟರು.
ಕೋವಿಡ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಉತ್ತೀರ್ಣತೆ ನೀಡಬೇಕು ಎಂದು ಆಗಿನ ಶಿಕ್ಷಣ ಸಚಿವರ ನಿವಾಸದ ಎದುರು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣವೇ ಈ ಬಂಧನಕ್ಕೆ ಕಾರಣವಾಗಿದೆ.

ಬಂಧನದ ನಂತರ ವೈದ್ಯಕೀಯ ಪರೀಕ್ಷೆ ನಡೆಸಿ, ಬಳಿಕ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವುದಾಗಿ ತಿಳಿದುಬಂದಿದೆ.
ರಾಜ್ಯದ ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

