ದ್ವಿತೀಯ ಪಿಯುಸಿ ಫಲಿತಾಂಶದ ನಡುವೆ ವಿದ್ಯಾರ್ಥಿಗಳಿಗೆ ಅದೃಷ್ಟ ತರಲಿದ್ದಾನೆ ಗುರುರಾಯ

ಇಂದು ಶಾಲಿವಾಹನ ಶಕವರ್ಷ 1949, ಶ್ರೀ ಪರಾಭವನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷದ ಅಷ್ಟಮೀ ತಿಥಿ. ಇಂದು ಮೂಲ ನಕ್ಷತ್ರ ಮತ್ತು ಗುರುವಾರವಾಗಿದ್ದು, ವಿದ್ಯಾ ಕಾರಕನಾದ ಗುರುವಿನ ಅನುಗ್ರಹ ವಿಶೇಷವಾಗಿದೆ.

ವಿದ್ಯಾರ್ಥಿಗಳಿಗೆ ಇಂದು ಏನೆಲ್ಲಾ ಲಾಭ?

Advertisement

ಮೇಷ ರಾಶಿ: ವಿದ್ಯಾರ್ಥಿಗಳಿಗೆ ಇಂದು ಅತ್ಯಂತ ಶುಭ ದಿನ. ಪರಿಶ್ರಮದ ಓದಿಗೆ ತಕ್ಕ ಫಲ ಸಿಗಲಿದೆ. ವಿಶೇಷವಾಗಿ ಕಾಂಪಿಟೇಟಿವ್ ಎಕ್ಸಾಮ್ ಬರೆಯುವವರಿಗೆ ಶುಭ ವಾರ್ತೆ ಕೇಳಿಬರಲಿದೆ. ತಾಯಿಯ ಕಡೆಯಿಂದ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಹಕಾರ ಸಿಗಲಿದೆ.

ಮಿಥುನ ರಾಶಿ: ಮಿಥುನ ರಾಶಿಯ ವಿದ್ಯಾರ್ಥಿಗಳಿಗೆ ಇಂದು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶ ಸಿಗಲಿದೆ. ನೀವು ಇಷ್ಟಪಡುವ ವಿಷಯಗಳಲ್ಲಿ ಹೆಚ್ಚಿನ ಸಾಧನೆ ಮಾಡುವ ಯೋಗವಿದೆ. ಆದರೆ ಹಿರಿಯರ ಸಲಹೆಯನ್ನು ನಿರ್ಲಕ್ಷಿಸಬೇಡಿ.

Advertisement

ತುಲಾ ರಾಶಿ: ವಿದ್ಯಾಭ್ಯಾಸದಲ್ಲಿ ಉಂಟಾಗಿದ್ದ ಅಡೆತಡೆಗಳು ನಿವಾರಣೆಯಾಗಲಿವೆ. ಅಧಿಕಾರಿಗಳು ಅಥವಾ ಶಿಕ್ಷಕರಿಂದ ನಿಮಗೆ ಶೈಕ್ಷಣಿಕವಾಗಿ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ. ಇಂದು ನೀವು ಹೊಸ ಕೌಶಲ್ಯಗಳನ್ನು ಕಲಿಯಲು ಆಸಕ್ತಿ ತೋರುತ್ತೀರಿ.

ಧನಸ್ಸು ರಾಶಿ: ಉನ್ನತ ವಿದ್ಯಾಭ್ಯಾಸಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಇಂದು ದಾರಿ ಸುಗಮವಾಗಲಿದೆ. ವಿದೇಶಿ ಶಿಕ್ಷಣದ ಕನಸು ಕಾಣುತ್ತಿರುವವರಿಗೆ ಶುಭ ಸೂಚನೆಗಳು ಸಿಗಬಹುದು. ಆರ್ಥಿಕವಾಗಿ ಅಲ್ಪ ಚೇತರಿಕೆ ಇರಲಿದೆ.

Advertisement

ಕಟಕ ಮತ್ತು ಸಿಂಹ: ಈ ರಾಶಿಯ ವಿದ್ಯಾರ್ಥಿಗಳು ಓದಿನಲ್ಲಿ ಸ್ವಲ್ಪ ಹೆಚ್ಚು ಗಮನ ಹರಿಸಬೇಕಾದ ಅಗತ್ಯವಿದೆ. ಮಾನಸಿಕ ಒತ್ತಡ ಹೆಚ್ಚಾಗಬಹುದು, ಆದರೆ ಏಕಾಗ್ರತೆಯಿಂದ ಓದಿದರೆ ಯಶಸ್ಸು ಕಚಿತ.

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು