ಪರೀಕ್ಷೆಯ ಹಿಂದಿನ ದಿನವೇ ಮೊಬೈಲ್ ಸ್ಫೋಟ: ಯುಪಿಎಸ್‌ಸಿ ಅಭ್ಯರ್ಥಿಗೆ 1.5 ಲಕ್ಷ ರೂ. ಪರಿಹಾರ ನೀಡಲು ರಿಯಲ್‌ಮಿಗೆ ಕೋರ್ಟ್ ಸೂಚನೆ

ದೆಹಲಿ: ಪರೀಕ್ಷೆಯ ಹಿಂದಿನ ದಿನವೇ ಮೊಬೈಲ್ ಫೋನ್ ಸ್ಫೋಟಗೊಂಡು ಗಾಯಗೊಂಡಿದ್ದ ಯುಪಿಎಸ್‌ಸಿ (UPSC) ಆಕಾಂಕ್ಷಿಯೊಬ್ಬರಿಗೆ ದೆಹಲಿ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು 1.5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಿಯಲ್‌ಮಿ ಮೊಬೈಲ್ ಕಂಪನಿಗೆ ಆದೇಶಿಸಿದೆ. ಕೋಟಿ ಸಾಯಿ ಪವನ್ ಎಂಬ ವಿದ್ಯಾರ್ಥಿ 2019ರಲ್ಲಿ ರಿಯಲ್‌ಮಿ XT ಫೋನ್ ಖರೀದಿಸಿದ್ದರು. ಜೂನ್ 5, 2022 ರಂದು ಅವರ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಇತ್ತು. ಆದರೆ ಜೂನ್ 4 ರಂದು ಮುಂಜಾನೆ ಅವರು ಮಲಗಿದ್ದಾಗ ಪಕ್ಕದಲ್ಲಿದ್ದ ಫೋನ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ.

ಈ ಸ್ಫೋಟದಿಂದಾಗಿ ಪವನ್ ಅವರ ಕೈ ಮತ್ತು ಹಣೆಗೆ ತೀವ್ರ ಸುಟ್ಟ ಗಾಯಗಳಾಗಿದ್ದವು. ಕೂಡಲೇ ಆಸ್ಪತ್ರೆಗೆ ದಾಖಲಾದ ಕಾರಣ ಅವರಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಇದರಿಂದ ಅವರ ಒಂದು ವರ್ಷದ ಕಠಿಣ ಪರಿಶ್ರಮ ಮತ್ತು ಲಕ್ಷಾಂತರ ರೂಪಾಯಿ ಕೋಚಿಂಗ್ ಫೀಸು ವ್ಯರ್ಥವಾಯಿತು.

ಇದನ್ನೂ ಓದಿ: ರ‍್ಯಾಂಕ್ ಪಟ್ಟಿಯಲ್ಲಿ ಅಂಬಿಕಾ ವಿದ್ಯಾರ್ಥಿಗಳ ಪಾರುಪತ್ಯ; ವಿಜ್ಞಾನ ಮತ್ತು ವಾಣಿಜ್ಯ ಎರಡೂ ವಿಭಾಗಗಳಲ್ಲಿ ನೂರಕ್ಕೆ ನೂರು ಸಾಧನೆ

ಗಾಯಗೊಂಡ ವಿದ್ಯಾರ್ಥಿ ಸರ್ವಿಸ್ ಸೆಂಟರ್‌ಗೆ ಹೋದಾಗ, “ಇದು ಬಳಕೆದಾರನ ತಪ್ಪು” ಎಂದು ಬರೆದಿರುವ ಪತ್ರಕ್ಕೆ ಸಹಿ ಹಾಕುವಂತೆ ಕಂಪನಿಯು ಒತ್ತಾಯಿಸಿತ್ತು. ಇದನ್ನು ನಿರಾಕರಿಸಿದ ವಿದ್ಯಾರ್ಥಿ ನ್ಯಾಯಾಲಯದ ಮೊರೆ ಹೋಗಿದ್ದರು. “ದೋಷಪೂರಿತ ಬ್ಯಾಟರಿ ಒದಗಿಸಿರುವುದು ಗಂಭೀರ ಸುರಕ್ಷತಾ ಲೋಪ” ಎಂದು ನ್ಯಾಯಾಲಯ ರಿಯಲ್‌ಮಿ ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಪವನ್ ಅವರಿಗೆ ಆಗಿರುವ ದೈಹಿಕ ಮತ್ತು ಮಾನಸಿಕ ನೋವಿಗೆ 1 ಲಕ್ಷ ರೂ., ಹಾನಿಗಾಗಿ 25 ಸಾವಿರ ರೂ. ಹಾಗೂ ಕಾನೂನು ವೆಚ್ಚಕ್ಕಾಗಿ 25 ಸಾವಿರ ರೂ. ಸೇರಿ ಒಟ್ಟು 1.5 ಲಕ್ಷ ರೂ. ಪಾವತಿಸಲು ಸೂಚಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು