ನಾಳೆ ಕರಾವಳಿ ಕರ್ನಾಟಕದಲ್ಲಿ ಜನರ ನೆತ್ತಿ ಸುಡಲಿದೆ ಬಿಸಿಲು!, ಬೀಸಲಿದೆ ಗಾಳಿ 

ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಕರಾವಳಿ ಕರ್ನಾಟಕದಲ್ಲಿ ಬಿಸಿಲು ಮತ್ತು ಗಾಳಿಯ ಆದ್ರತೆ ಹೆಚ್ಚಾಗುವ ಬಗ್ಗೆ ಎಚ್ಚರಿಕೆ ನೀಡಿದೆ.ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿನ ಜನರು ಹೆಚ್ಚು ಉಷ್ಣತೆ ಮತ್ತು ಗಾಳಿಯಲ್ಲಿನ ತೇವಾಂಶದಿಂದ ಉಂಟಾಗುವ ತೀವ್ರ ಬಿಸಿಗಾಳಿ ಅನುಭವಿಸಬಹುದು ಎಂದು ಇಲಾಖೆ ಸೂಚಿಸಿದೆ.

ಹವಾಮಾನ ಇಲಾಖೆಯ ಪ್ರಕಾರ, ಆದ್ರತೆ ಹೆಚ್ಚಾಗುವುದರಿಂದ ತಾಪಮಾನ ಹೆಚ್ಚು ಅನಿಸುವ ಸಾಧ್ಯತೆ ಇದ್ದು, ದಿನದ ವೇಳೆ ಅಸಹನೀಯ ವಾತಾವರಣ ನಿರ್ಮಾಣವಾಗಬಹುದು.

ಇದನ್ನೂ ಓದಿ ಹಿಂದಿ ತೆಗೆದುಹಾಕಿಲ್ಲ: ಹೈಕೋರ್ಟ್ ಸ್ಪಷ್ಟ

ಹಿರಿಯರು, ಮಕ್ಕಳು ಹಾಗೂ ಆರೋಗ್ಯ ಸಮಸ್ಯೆ ಹೊಂದಿರುವವರು ವಿಶೇಷ ಜಾಗ್ರತೆ ವಹಿಸಬೇಕು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಜನರು ಹೊರಗೆ ಹೋಗುವಾಗ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು, ಸಾಕಷ್ಟು ನೀರು ಕುಡಿಯಬೇಕು ಹಾಗೂ ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆದಿಡಬಾರದು ಎಂದು ಸಲಹೆ ನೀಡಲಾಗಿದೆ.

ಇದು ಪೂರ್ವ ಮಳೆಗಾಲದ ಆರಂಭದ ಸೂಚನೆಗಳಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಸಿಲು ಮತ್ತು ಆದ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ಬಿಸಿಲು-ಆದ್ರತೆ ಹೆಚ್ಚಳದಿಂದ ಅಸ್ವಸ್ಥಕರ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು