“ಬಂಗಾಳದಲ್ಲಿ ಬಂಗಾಳಿಗಳು ಅಲ್ಪಸಂಖ್ಯಾತರಾಗಲು ಬಿಡುವುದಿಲ್ಲ”: ಟಿಎಂಸಿ ವಿರುದ್ಧ ಪ್ರಧಾನಿ ಮೋದಿ ಗುಡುಗು!

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್‌ಪುರ ಜಿಲ್ಲೆಯಲ್ಲಿ ಇಂದು ನಡೆದ ಬೃಹತ್ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತೃಣಮೂಲ ಕಾಂಗ್ರೆಸ್‌ನ ಲೂಟಿ ಮತ್ತು ಭಯದ ಆಳ್ವಿಕೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ಭವಿಷ್ಯ ನುಡಿದರು.

“ಪಶ್ಚಿಮ ಬಂಗಾಳದಲ್ಲಿ ಬಂಗಾಳಿಗಳು ಅಲ್ಪಸಂಖ್ಯಾತರಾಗಲು ಬಿಜೆಪಿ ಎಂದಿಗೂ ಅವಕಾಶ ನೀಡುವುದಿಲ್ಲ” ಎಂದು ಘೋಷಿಸಿದ ಪ್ರಧಾನಿ ಮೋದಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ತರುವ ಮೂಲಕ ಓಲೈಕೆ ರಾಜಕೀಯವನ್ನು ಶಾಶ್ವತವಾಗಿ ಕೊನೆಗೊಳಿಸುವುದಾಗಿ ಸಂಕಲ್ಪ ಮಾಡಿದರು.

Advertisement

ಟಿಎಂಸಿಗೆ ಯಾವುದೇ ಸ್ಪಷ್ಟ ಉದ್ದೇಶ ಅಥವಾ ನೀತಿ ಇಲ್ಲದ ಕಾರಣ ಇತರ ರಾಜ್ಯಗಳ ಚುನಾವಣೆಗಳಲ್ಲಿ ಆ ಪಕ್ಷ ವಿಫಲವಾಗಿದೆ. ಕಳೆದ 15 ವರ್ಷಗಳಲ್ಲಿ ಬಂಗಾಳದ ಅಭಿವೃದ್ಧಿಗಾಗಿ ಮಮತಾ ಸರ್ಕಾರ ಏನು ಮಾಡಿದೆ ಎಂದು ಹೇಳಲು ವಿಫಲವಾಗಿದ್ದು, ಕೇವಲ ಬಿಜೆಪಿಯನ್ನು ನಿಂದಿಸುವುದರಲ್ಲೇ ಕಾಲ ಕಳೆಯುತ್ತಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ನ್ಯಾಯಕ್ಕಾಗಿ ಲಕ್ನೋ ಹೈಕೋರ್ಟ್‌ ಮೇಲ್ಛಾವಣಿ ಏರಿ ಆತ್ಮಹತ್ಯೆಗೆ ಯತ್ನಿಸಿದ ಸಂತ್ರಸ್ತೆ; ಸಾಮೂಹಿಕ ಅತ್ಯಾಚಾರ, ಮತಾಂತರದ ಗಂಭೀರ ಆರೋಪ!

Advertisement

“ಇದು ಭಯವನ್ನು ಸೋಲಿಸುವ ಮತ್ತು ನಂಬಿಕೆಯ ಆಧಾರದ ಮೇಲೆ ಬಂಗಾಳವನ್ನು ಮುನ್ನಡೆಸುವ ಯುದ್ಧವಾಗಿದೆ. ಟಿಎಂಸಿಯ ಸುಳ್ಳು ಮತ್ತು ಲೂಟಿಯ ಅಂಗಡಿ ಇನ್ನೇನು ಸ್ವಲ್ಪ ದಿನಗಳಲ್ಲಿ ಮುಚ್ಚಲಿದೆ” ಎಂದು ಮೋದಿ ತಿಳಿಸಿದರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು