IPL: ಲಕ್ನೋ ವಿರುದ್ಧ ಕೃಷ್ಣನ ಪರಾಕ್ರಮ: ಗುಜರಾತ್‌ಗೆ ಭರ್ಜರಿ ಗೆಲುವು

ಏಕಾನಾ ಕ್ರಿಕೆಟ್ ಕ್ರೀಡಾಂಗಣದ ಬಿ ಮೈದಾನದಲ್ಲಿ ನಡೆದ ಐಪಿಎಲ್‌ನ 19ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 164 ರನ್‌ಗಳನ್ನು ಗಳಿಸಿತು. ತಂಡದ ಪರ ಐಡೆನ್ ಮಾರ್ಕ್ರಾಮ್ 30 ರನ್‌ಗಳೊಂದಿಗೆ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದರು.

Advertisement

ನಿಕೋಲಸ್ ಪೂರನ್ 19, ರಿಷಭ್ ಪಂತ್ 18, ಅಬ್ದುಲ್ ಸಮದ್ 18, ಮುಕುಲ್ ಚೌಧರಿ 18, ಜಾರ್ಜ್ ಲಿಂಡೆ 16 ರನ್‌ಗಳನ್ನು ಸೇರಿಸಿದರು. ಅಂತಿಮ ಓವರ್‌ಗಳಲ್ಲಿ ಮೊಹಮ್ಮದ್ ಶಮಿ 12* ಹಾಗೂ ಆವೇಶ್ ಖಾನ್ 4* ರನ್‌ಗಳೊಂದಿಗೆ ತಂಡದ ಮೊತ್ತ ಹೆಚ್ಚಿಸಿದರು.

ಇದನ್ನೂ ಓದಿ: IPL: ಸಂಜು ಸ್ಯಾಮ್ಸನ್ ಸ್ಫೊಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಎಂಎಸ್ ಧೋನಿ ದಾಖಲೆ ಪುಡಿ

Advertisement

ಗುಜರಾತ್ ಪರ ಬೌಲಿಂಗ್‌ನಲ್ಲಿ ಪ್ರಸಿದ್ಧ್ ಕೃಷ್ಣ ಅದ್ಭುತ ಪ್ರದರ್ಶನ ನೀಡಿ 4 ವಿಕೆಟ್‌ಗಳನ್ನು ಕಬಳಿಸಿ ಎದುರಾಳಿಗಳ ರನ್‌ಗಳಿಗೆ ಕಡಿವಾಣ ಹಾಕಿದರು. ಅಶೋಕ್ ಶರ್ಮಾ 2 ವಿಕೆಟ್ ಪಡೆದರೆ, ಕಗಿಸೊ ರಬಾಡ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡರು.

165 ರನ್‌ಗಳ ಗುರಿ ಬೆನ್ನತ್ತಿದ ಗುಜರಾತ್ ಜೈಂಟ್ಸ್ ತಂಡ 18.4 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು 165 ರನ್‌ಗಳಿಸಿ ಸುಲಭ ಜಯ ಸಾಧಿಸಿತು. ತಂಡದ ಪರ ಜೋಸ್ ಬಟ್ಲರ್ 60 ರನ್‌ಗಳ ಭರ್ಜರಿ ಅರ್ಧಶತಕ ಬಾರಿಸಿದರೆ, ನಾಯಕ ಶುಭಮನ್ ಗಿಲ್ 56 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರು.

Advertisement

ಸಾಯಿ ಸುದರ್ಶನ್ 15, ವಾಷಿಂಗ್ಟನ್ ಸುಂದರ್ 21 ಹಾಗೂ ರಾಹುಲ್ ತೆವಾಟಿಯಾ 10 ರನ್‌ಗಳನ್ನು ಸೇರಿಸಿ ತಂಡದ ಗೆಲುವಿಗೆ ನೆರವಾದರು.

ಲಕ್ನೋ ಪರ ದಿಗ್ವೇಶ್ ರಥಿ, ಪ್ರಿನ್ಸ್ ಯಾದವ್ ಹಾಗೂ ಮೊಹಮ್ಮದ್ ಶಮಿ ತಲಾ ಒಂದೊಂದು ವಿಕೆಟ್‌ಗಳನ್ನು ಪಡೆದುಕೊಂಡರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು