ಆದಷ್ಟು ಬೇಗ ವಚನಾನಂದ ಸ್ವಾಮೀಜಿ ಮಠ ತೆರವು ಗೊಳಿಸಬೇಕು, ಇಲ್ಲವಾದ್ರೆ ಕಾನೂನು ತನ್ನ ಕೆಲ್ಸಾ ಮಾಡುತ್ತದೆ

‘ಬೆಂಗಳೂರಿನ ಶ್ವಾಸ ಯೋಗ ಪೀಠವನ್ನು ತ್ಯಜಿಸಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಪೀಠಾರೋಹಣದ ಸಂದರ್ಭದಲ್ಲಿಯೇ ವಚನಾನಂದ ಶ್ರೀಗಳಿಗೆ ಸ್ಪಷ್ಟವಾಗಿ ತಿಳಿಸಲಾಗಿತ್ತು. ಶ್ರೀಗಳು ಈ ಷರತ್ತಿಗೆ ಒಪ್ಪಿದ್ದರು. ಆದರೆ, ಇಷ್ಟು ವರ್ಷಗಳು ಕಳೆದರೂ ಅವರು ಶ್ವಾಸ ಯೋಗ ಪೀಠವನ್ನು ತ್ಯಜಿಸಲು ಮುಂದಾಗುತ್ತಿಲ್ಲ. ಈ ಬಗ್ಗೆ ಅವರಿಗೆ ಹಲವು ಬಾರಿ ಗಡುವು ನೀಡಿದ್ದರೂ, ಅವರಿಂದ ಯಾವುದೇ ಉತ್ತರ ದೊರೆಯುತ್ತಿಲ್ಲ. ಹೀಗಾಗಿ ಅವರನ್ನು ಪೀಠದಿಂದ ವಿಮುಕ್ತಿಗೊಳಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ’ ಎಂದು ಗುರುಪೀಠದ ಟ್ರಸ್ಟಿಗಳಾದ ಬಾವಿ ಬೆಟ್ಟಪ್ಪ, ಬಸವರಾಜ್ ದಿಂಡೂರು ತಿಳಿಸಿದರು.

‘ಈ ಹಿಂದೆ ಟ್ರಸ್ಟ್‌ನ ನಿರ್ಣಯವನ್ನು ಸ್ವಾಮೀಜಿಗೆ ತಿಳಿಸಿದ್ದಾಗ ಮಾರ್ಚ್‌ 24ರ ವರೆಗೆ ಸಮಯ ಕೇಳಿದ್ದರು. ಆ ಗಡುವು ಮೀರಿದೆ. ಇದೀಗ ಪೀಠ ತ್ಯಜಿಸಿ ಬೀದಿಗೆ ಬೀಳುವ ಆತಂಕದಲ್ಲಿ ಟ್ರಸ್ಟ್‌ನ ಮುಖಂಡರ ವಿರುದ್ಧ ಸಮುದಾಯದವರನ್ನು ಎತ್ತಿಕಟ್ಟುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ. ಅವರ ನಡೆ– ನುಡಿ ಸರಿಯಿಲ್ಲ. ಟ್ರಸ್ಟಿಗಳನ್ನು ಕೆಟ್ಟ ಪದಗಳಲ್ಲಿ ನಿಂದಿಸುತ್ತಿದ್ದಾರೆ’ ಎಂದು ದೂರಿದರು.

Advertisement

‘ಚಪ್ಪಲಿ ಬಿಡುವ ಜಾಗದಲ್ಲಿ ಟ್ರಸ್ಟಿಗಳನ್ನು ನಿಲ್ಲಿಸುವುದಾಗಿ ವಚನಾನಂದ ಶ್ರೀ ಹೇಳಿದ್ದರು. ಏಕವ್ಯಕ್ತಿ (ಸೊಲೊ) ಟ್ರಸ್ಟ್‌ ಮಾಡುವಂತೆ ಅವರು ಒತ್ತಾಯಿಸಿದ್ದರು. ಅದಕ್ಕೆ ಒಪ್ಪದಿದ್ದಾಗ ಬೆಂಬಲಿಗರ ಮೂಲಕ ‘ಲೆಕ್ಕ ಕೊಡಿ’ ಎಂಬ ನಾಟಕ ನಡೆಸುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಪಿತೂರಿಯೂ ಇದೆ’ ಎಂದು ಹೇಳಿದರು.

‘ಲೆಕ್ಕ ಕೇಳುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಪ್ರತಿಯೊಂದರ ಲೆಕ್ಕವನ್ನೂ ಪೀಠದ ನೋಟಿಸ್‌ ಬೋರ್ಡ್‌ನಲ್ಲಿ ಹಾಕಿದ್ದೇವೆ. ಯಾರು ಬೇಕಾದರೂ ಬಂದು ಪರಿಶೀಲಿಸಬಹುದು’ ಎಂದರು.

Advertisement

ವಚನಾನಂದ ಶ್ರೀಗಳು ಪೀಠಾರೋಹಣ ಮಾಡುವಾಗ ಬೆಂಗಳೂರಿನ ‘ಶ್ವಾಸ ಯೋಗ ಪೀಠ’ವನ್ನು ತ್ಯಜಿಸಬೇಕೆಂಬ ಷರತ್ತಿಗೆ ಒಪ್ಪಿದ್ದರು. ಆದರೆ ವರ್ಷಗಳು ಕಳೆದರೂ ಅದನ್ನು ಬಿಡದ ಕಾರಣ ಟ್ರಸ್ಟಿಗಳು ಅಸಮಾಧಾನಗೊಂಡಿದ್ದಾರೆ.ಟ್ರಸ್ಟ್ ನೀಡಿದ್ದ ಮಾರ್ಚ್ 24ರ ಗಡುವು ಈಗಾಗಲೇ ಮುಗಿದಿದೆ. ಶ್ರೀಗಳು ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟಿಸದ ಹಿನ್ನೆಲೆಯಲ್ಲಿ ಅವರನ್ನು ಪೀಠದಿಂದ ವಿಮುಕ್ತಿಗೊಳಿಸುವ ನಿರ್ಣಯಕ್ಕೆ ಟ್ರಸ್ಟ್ ಬಂದಿದೆ.

ಇದನ್ನೂ ಓದಿ: 801 ಕೋಟಿ ವ್ಯವಹಾರ ನಡೆಸಿದ ಶ್ರೀ ಸರಸ್ವತಿ ಸೌಹಾರ್ದ ಸಹಕಾರಿ ಸಂಘಕ್ಕೆ 7.27 ಕೋಟಿ ನಿವ್ವಳ ಲಾಭ

Advertisement

ಶ್ರೀಗಳು ಸಮುದಾಯದವರನ್ನು ಟ್ರಸ್ಟಿಗಳ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಮತ್ತು ಕೆಟ್ಟ ಪದಗಳಿಂದ ನಿಂದಿಸುತ್ತಿದ್ದಾರೆ. ಪೀಠವನ್ನು ‘ಏಕವ್ಯಕ್ತಿ ಟ್ರಸ್ಟ್’ ಮಾಡಲು ಒತ್ತಡ


ಹೇರುತ್ತಿದ್ದಾರೆ.ಶ್ರೀಗಳ ಬೆಂಬಲಿಗರು ಲೆಕ್ಕ ಕೇಳುತ್ತಿರುವುದು ಕೇವಲ ಒಂದು “ನಾಟಕ” ಮತ್ತು ಇದರ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಟ್ರಸ್ಟಿಗಳಾದ ಬಾವಿ ಬೆಟ್ಟಪ್ಪ ಹಾಗೂ ಬಸವರಾಜ್ ದಿಂಡೂರು ಆರೋಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

 

 

 

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು