ನಾರಿ ಶಕ್ತಿ ವಂದನ್ ಸಮ್ಮೇಳನ: ಮಹಿಳೆಯರ ಧ್ವನಿಗೆ ಸಂಸತ್ತಿನಲ್ಲಿ ಶಕ್ತಿ ತುಂಬುವ ಭರವಸೆ ನೀಡಿದ ಕ್ಯಾ. ಬ್ರಿಜೇಶ್ ಚೌಟ

ಮಂಗಳೂರು: ದೇಶದ ರಾಜಕೀಯ ಇತಿಹಾಸದಲ್ಲಿ ಮಹಿಳೆಯರಿಗೆ ಹೊಸ ಭಾಷ್ಯ ಬರೆಯಲಿರುವ ‘ನಾರಿ ಶಕ್ತಿ ವಂದನ್ ಅಧಿನಿಯಮ’ದ ಕುರಿತು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಂಗಳೂರಿನಲ್ಲಿ ವಿಶೇಷ ಸಂವಾದ ಹರಿಹರ ಹಮ್ಮಿಕೊಂಡಿದ್ದರು. ವಿವಿಧ ಕ್ಷೇತ್ರಗಳ ಗಣ್ಯ ಮಹಿಳೆಯರು ಪಾಲ್ಗೊಂಡಿದ್ದ ಈ ಸಮ್ಮೇಳನದಲ್ಲಿ ಕಾಯ್ದೆಯ ಜಾರಿ ಕುರಿತು ವ್ಯಾಪಕ ಬೆಂಬಲ ವ್ಯಕ್ತವಾಯಿತು.

ವೈದ್ಯರು, ಶಿಕ್ಷಕರು, ಉದ್ಯಮಿಗಳು, ಕ್ರೀಡಾಪಟುಗಳು, ಪತ್ರಕರ್ತೆಯರು ಹಾಗೂ ಮೀನುಗಾರ ಮತ್ತು ಕಾರ್ಮಿಕ ಸಮುದಾಯದ ಮಹಿಳೆಯರು ಸಮ್ಮೇಳನದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು.

ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಬಿಲ್‌ಗೆ ಮರುಜೀವ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ದೃಢ ಸಂಕಲ್ಪಕ್ಕೆ ಮಹಿಳೆಯರು ಅಭಿನಂದನೆ ಸಲ್ಲಿಸಿದರು.

ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ತಮ್ಮ ಅನಿಸಿಕೆಗಳನ್ನು ಪೋಸ್ಟ್ ಕಾರ್ಡ್ ಮೂಲಕ ನೇರವಾಗಿ ಪ್ರಧಾನಮಂತ್ರಿಯವರಿಗೆ ಬರೆದು ಕಳುಹಿಸುವ ಮೂಲಕ ತಮ್ಮ ಬೆಂಬಲ ಸೂಚಿಸಿದರು.

ಇದನ್ನೂ ಓದಿ:ಲೋಕಸಭೆ ಬಲ 850ಕ್ಕೆ ಏರಿಕೆ? ಗದ್ದಲದ ನಡುವೆಯೇ ‘ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ’ ವಿಧೇಯಕ ಮಂಡನೆ!

“ಸಭೆಯಲ್ಲಿ ಮಹಿಳೆಯರು ವ್ಯಕ್ತಪಡಿಸಿದ ಸಂತಸ, ಶ್ಲಾಘನೆ ಮತ್ತು ಅಮೂಲ್ಯ ಸಲಹೆಗಳನ್ನು ನಾನು ಸಂಸತ್ತಿನಲ್ಲಿ ಧ್ವನಿಸುತ್ತೇನೆ ಹಾಗೂ ಪ್ರಧಾನಿಯವರಿಗೆ ತಲುಪಿಸುತ್ತೇನೆ” ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಭರವಸೆ ನೀಡಿದರು.

ಇನ್ನಷ್ಟೂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು