ಕನ್ನಡ ಮಾತ್ರವಲ್ಲದೇ ಹಲವು ಭಾಷೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ -ಚಾಪ್ಟರ್ 1 ಚಿತ್ರ ಆಸ್ಕರ್ ಸ್ಪರ್ಧೆಗೆ ಪ್ರವೇಶ ಪಡೆದುಕೊಂಡಿದೆ. ‘ಮಹಾವತಾರ್ ನರಸಿಂಹ’ ಹಾಗೂ ‘ಕಾಂತಾರ -ಚಾಪ್ಟರ್ 1 ಚಿತ್ರಗಳು ಅಧಿಕೃತವಾಗಿ ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್ ನಲ್ಲಿ ಸ್ಥಾನ ಪಡೆದುಕೊಂಡಿವೆ. ಇದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ.
ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿರುವ ಚಿತ್ರಗಳ ಅಂತಿಮ ಪಟ್ಟಿ ಜನವರಿ 22ರಂದು ಪ್ರಕಟವಾಗಲಿದ್ದು ಮಾರ್ಚ್ 15 ರಂದು ಚಿತ್ರಗಳಿಗೆ ಆಸ್ಕರ್ ಪ್ರಶಸ್ತಿ ನೀಡಲಾಗುತ್ತದೆ ಕಳೆದ ವರ್ಷ ‘ಕಾಂತಾರ -ಚಾಪ್ಟರ್ 1 ಹಾಗೂ ‘ಮಹಾವತಾರ್ ನರಸಿಂಹ’ ಚಿತ್ರಗಳು ತೆರೆಕಂಡು ಜನಪ್ರಿಯತೆ ಪಡೆದುಕೊಂಡಿದ್ದವು. ಚಿತ್ರಗಳನ್ನು ಆಸ್ಕರ್ ವೇದಿಕೆಗೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇವೆ ಎಂಬುದಾಗಿ ಹೊಂಬಾಳೆ ಸಂಸ್ಥೆ ಈಗಾಗಲೇ ಹೇಳಿತ್ತು. ಅನಿಮೇಟೆಡ್ ವಿಭಾಗದಲ್ಲಿ ‘ಮಹಾವತಾರ್ ನರಸಿಂಹ’ ಜನರಲ್ ಲಿಸ್ಟ್ ನಲ್ಲಿ ಸ್ಥಾನ ಪಡೆದಿದ್ದು, ಈ ವರ್ಷದ ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್ ನಲ್ಲಿ ಕಾಣಿಸಿಕೊಂಡ 5 ಭಾರತೀಯ ಚಿತ್ರಗಳಲ್ಲಿ ಎರಡು ಹೊಂಬಾಲೆ ಫಿಲಂಸ್ ಬ್ಯಾನರ್ ಸಿನಿಮಾ ಇರುವುದು ವಿಶೇಷವಾಗಿದೆ.

ಇದನ್ನೂ ಓದಿ : Mangalore : ‘ಹಕ್ಕಿ ಹಬ್ಬ’ ಪಕ್ಷಿ ಉತ್ಸವ : ಜ.9 ರಿಂದ ಮಂಗಳೂರಿನಲ್ಲಿ ಹಕ್ಕಿಗಳ ಚಿಲಿಪಿಲಿ ಸದ್ದು
‘ ಕಾಂತಾರ – ಚಾಪ್ಟರ್ 1 ‘ ಹಾಗೂ ‘ಮಹಾವತಾರ್’ನರಸಿಂಹ’ ಎರಡು ಚಿತ್ರಗಳು ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್ ನಲ್ಲಿ ಜಾಗ ಪಡೆದುಕೊಂಡು ಆಸ್ಕರ್ ವಿಭಾಗದಲ್ಲಿ ಪರಿಗಣನೆಗೆ ಒಳಪಟ್ಟಿದೆ. ಸಿನಿಮಾಗಳ ವಿಭಾಗದಲ್ಲಿ ಭಾರತದಲ್ಲಿ ನಿರ್ಮಾಣವಾದ ಯಾವುದೇ ಚಿತ್ರಕ್ಕೆ ಆಸ್ಕರ್ ಸಿಕ್ಕಿಲ್ಲ ಭಾರತೀಯ ಚಿತ್ರರಂಗದ ಈ ಎರಡು ಸಿನಿಮಾಗಳು ಈಗ ಹಾಲಿವುಡ್ ಸಿನಿಮಾಗಳ ಜೊತೆ ಆಸ್ಕರ್ ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿದ್ದು, ಈ ಮೊದಲು ‘ಆರ್ ಆರ್ ಆರ್’ ಚಿತ್ರದ ‘ನಾಟು ನಾಟು’ ಹಾಡು ಆಸ್ಕರ್ ಪ್ರಶಸ್ತಯನ್ನು ಗೆದ್ದು ದಾಖಲೆ ಬರೆದಿತ್ತು.
ಕಾಂತಾರ – ಚಾಪ್ಟರ್ 1 ಸಿನಿಮಾ ಆಸ್ಕರ್ ಅಂತಿಮ ನಾಮಿನೇಷನ್ ಪಟ್ಟಿಗೆ ಎಂಟ್ರಿ ಕೊಟ್ಟರು ಕೂಡ ಅದು ದೊಡ್ಡ ಸಾಧನೆ ಆಗಲಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

