6,6,6,6: ಯಾರ ಹೆಸರಲ್ಲೂ ಇಲ್ಲದ ದಾಖಲೆ ಬರೆದ ವೈಭವ್ ಸೂರ್ಯವಂಶಿ

ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 36ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಪರ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದರು. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲ ಓವರ್‌ನಲ್ಲೇ ನಾಲ್ಕು ಸತತ ಸಿಕ್ಸರ್‌ಗಳನ್ನು ಬಾರಿಸಿ ಐಪಿಎಲ್ ಇತಿಹಾಸದಲ್ಲೇ ಅಪೂರ್ವ ದಾಖಲೆ ನಿರ್ಮಿಸಿದರು.

ಪಂದ್ಯದ ಮೊದಲ ಓವರ್ ಎಸೆದ ಪ್ರಫುಲ್ ಹಿಂಗೆ ವಿರುದ್ಧ ಆರಂಭದಲ್ಲೇ ರಾಜಸ್ಥಾನ್ ಅಬ್ಬರಿಸಿತು. ಮೊದಲ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಸಿಂಗಲ್ ಕದ್ದರೆ, ಎರಡನೇ ಎಸೆತವನ್ನು ವೈಭವ್ ಡಾಟ್ ಮಾಡಿದರು. ಆದರೆ ಬಳಿಕದ ನಾಲ್ಕು ಎಸೆತಗಳಲ್ಲಿ ಸತತ ನಾಲ್ಕು ಸಿಕ್ಸರ್ ಸಿಡಿಸಿ ಕೇವಲ ಐದು ಎಸೆತಗಳಲ್ಲಿ 24 ರನ್ ಕಲೆಹಾಕಿದರು. ಹಿಂದಿನ ಪಂದ್ಯದಲ್ಲಿ ತನ್ನ ವಿಕೆಟ್ ಪಡೆದಿದ್ದ ಹಿಂಗೆ ವಿರುದ್ಧ ಈ ಮೂಲಕ ಸೇಡು ತೀರಿಸಿಕೊಂಡರು.

Advertisement

ಇದನ್ನೂ ಓದಿ: ಕೆ ಎಲ್ ರಾಹುಲ್ ರನ್ ಮಳೆ; 152 ಸಿಡಿಸಿ ಐಪಿಎಲ್‌ನಲ್ಲಿ ದಾಖಲೆಗಳ ಸರಮಾಲೆ ಬರೆದ ಕನ್ನಡಿಗ

ಈ ಅಬ್ಬರದೊಂದಿಗೆ ವೈಭವ್ ಸೂರ್ಯವಂಶಿ ಐಪಿಎಲ್ ದಾಖಲೆ ಪುಸ್ತಕದಲ್ಲೂ ಸ್ಥಾನ ಪಡೆದರು. ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ನಾಲ್ಕು ಸಿಕ್ಸರ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದುವರೆಗೆ 2009ರಲ್ಲಿ ನಮನ್ ಓಜ್ಹ್ ಮೊದಲ ಓವರ್‌ನಲ್ಲಿ ಮೂರು ಸಿಕ್ಸರ್ ಬಾರಿಸಿದ್ದು ದಾಖಲೆ ಆಗಿತ್ತು. ಅದನ್ನು ವೈಭವ್ ಮುರಿದು ಹೊಸ ಇತಿಹಾಸ ಬರೆದರು.

Advertisement

ರಾಜಸ್ಥಾನ್ ಪರ ಸ್ಫೋಟಕ ಆರಂಭ ಒದಗಿಸಿದ ಈ ಇನ್ನಿಂಗ್ಸ್ ಪಂದ್ಯಕ್ಕೆ ರೋಚಕತೆ ತುಂಬಿದ್ದು, ಯುವ ಆಟಗಾರನ ಬ್ಯಾಟಿಂಗ್ ಬಗ್ಗೆ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆ ಹುಟ್ಟಿಸಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು