ಸೂರ್ಯವಂಶಿ ಶತಕ ವ್ಯರ್ಥ; ಇಶಾನ್ ಕಿಶನ್ ಅಬ್ಬರಕ್ಕೆ ಗೆದ್ದ ಸನ್‌ರೈಸರ್ಸ್

ಜೈಪುರದ ಸವಾಯಿ ಮಾನ್ಸಿಂಗ್ ಕಗರೀಡಾಂಗಣದಲ್ಲಿ ನಡೆದ ಐಪಿಎಲ್ 36ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ, ರಾಜಸ್ಥಾನ ರಾಯಲ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ವೈಭವ್ ಸೂರ್ಯವಂಶಿ ಸಿಡಿಸಿದ ಅದ್ಭುತ ಶತಕವೂ ರಾಜಸ್ಥಾನಕ್ಕೆ ಜಯ ತಂದುಕೊಡಲಿಲ್ಲ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 228 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ತಂಡದ ಪರ ಮತ್ತೆ ಅಬ್ಬರಿಸಿದ ವೈಭವ್ ಸೂರ್ಯವಂಶಿ ಕೇವಲ 37 ಎಸೆತಗಳಲ್ಲಿ 5 ಬೌಂಡರಿ ಮತ್ತು 12 ಸಿಕ್ಸರ್‌ಗಳ ನೆರವಿನಿಂದ ಸ್ಫೋಟಕ 103 ರನ್ ಚಚ್ಚಿದರು. ಧ್ರುವ್ ಜುರೆಲ್ 51 ರನ್‌ಗಳ ಮಹತ್ವದ ಕೊಡುಗೆ ನೀಡಿದರು. ಡೊನೊವನ್ ಫೆರೆರಾ 33 ರನ್ ಸೇರಿಸಿದರು.

Advertisement

ಹೈದರಾಬಾದ್ ಪರ ಪ್ಯಾಟ್ ಕಮಿನ್ಸ್, ನಿತೀಶ್ ಕುಮಾರ್ ರೆಡ್ಡಿ, ಸಕಿಬ್ ಹುಸೇನ್, ಪ್ರಫುಲ್ ಹಿಂಗೆ ತಲಾ ಒಂದೊಂದು ವಿಕೆಟ್ ಪಡೆದರೆ, ಎಶಾನ್ ಮಲಿಂಗ ಎರಡು ವಿಕೆಟ್ ಕಬಳಿಸಿದರು.

229 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ 18.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆರಂಭದಲ್ಲೇ ಅಬ್ಬರಿಸಿದ ಇಶಾನ್ ಕಿಶನ್ 31 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 74 ರನ್‌ಗಳ ಮಿಂಚಿನ ಇನ್ನಿಂಗ್ಸ್ ಆಡಿದರು.

Advertisement

ಇದನ್ನೂ ಓದಿ: ರಾಹುಲ್, ರಾಣಾ ಆರ್ಭಟ ವ್ಯರ್ಥ, ಪ್ರಭಸಿಮ್ರನ್, ಶ್ರೇಯಸ್ ಭರ್ಜರಿ ಬ್ಯಾಂಟಿಗ್; ಡೆಲ್ಲಿ ವಿರುದ್ಧ ಪಂಜಾಬ್‌ಗೆ ಗೆಲುವು

ಅಭಿಷೇಕ್ ಶರ್ಮಾ 57 ರನ್‌ಗಳ ಚುರುಕು ಆಟವಾಡಿದರೆ, ನಿತೀಶ್ ಕುಮಾರ್ ರೆಡ್ಡಿ 36 ರನ್ ಸೇರಿಸಿ ಗೆಲುವಿಗೆ ಬಲ ತುಂಬಿದರು. ಹೆನ್ರಿಕ್ ಕ್ಲಾಸೆನ್ 29 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು.

ಕೊನೆಯ ಹಂತದಲ್ಲಿ ಸಲೀಲ್ ಅರೋರಾ ಮತ್ತು ಅನಿಕೇತ್ ಶರ್ಮಾ ತಂಡವನ್ನು ಗುರಿ ದಾಟಿಸಿ 5 ವಿಕೆಟ್‌ಗಳ ರೋಚಕ ಜಯ ತಂದರು. ರಾಜಸ್ಥಾನ ಪರ ಜೋಫ್ರಾ ಆರ್ಚರ್ ಮತ್ತು ಬ್ರಿಜೇಶ್ ಶರ್ಮಾ ತಲಾ ಎರಡು ವಿಕೆಟ್ ಪಡೆದರು.

ವೈಭವ್ ಸೂರ್ಯವಂಶಿಯ ಮಿಂಚಿನ ಶತಕದ ನಡುವೆಯೂ ಬೌಲರ್‌ಗಳ ವೈಫಲ್ಯ ರಾಜಸ್ಥಾನಕ್ಕೆ ದುಬಾರಿಯಾಗಿ ಪರಿಣಮಿಸಿದರೆ, ಸನ್‌ರೈಸರ್ಸ್ ಹೈದರಾಬಾದ್ ಭರ್ಜರಿ ಚೇಸಿಂಗ್ ಮೂಲಕ ಮಹತ್ವದ ಗೆಲುವು ತನ್ನದಾಗಿಸಿಕೊಂಡಿತು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ‌ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು