Breaking News

3 ವಿಕೆಟ್‌ಗಳಿಂದ ರೋಚಕ ಗೆಲುವು ಸಾಧಿಸಿದ ಮಹಿಳಾ ಆರ್‌ಸಿಬಿ

RCB

ಮಹಿಳಾ ಪ್ರೀಮಿಯರ್ ಲೀಗ್ ಈಗಾಗಲೇ ಪ್ರಾರಂಭವಾಗಿದ್ದು, ಸ್ಟಾರ್ ಆಲ್ ರೌಂಡರ್ ನಾಡಿನ್  ಡಿ ಕ್ಲರ್ಕ್ ‍‍‍ ಆಲ್ ರೌಂಡರ್ ಆಟದಿಂದ 3 ವಿಕೆಟ್ ನಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳಾ ಪ್ರೀಮಿಯರ್ ಲೀಗ್ ಗೆ ಒಳ್ಳೆಯ ಶುಭಾರಂಭ ನೀಡಿದೆ.

ಮೊದಲ ಟಾಸ್ ಗೆದ್ದ ಆರ್ ಸಿಬಿ ತಂಡ ಬೌಲಿಂಗ್ ಆಯ್ದುಕೊಂಡಿತು.ಅದರಂತೆ, ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡ, ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಬಾರಿಸಿತು . ಗುರಿ ಬೆನ್ನಟ್ಟಿದ ಆರ್ ಸಿ ಬಿ, 7 ವಿಕೆಟ್ ಕಳೆದುಕೊಂಡು 157 ರನ್ ಬಾರಿಸಿ ಗೆಲುವಿನ ನಗೆ ಬೀರಿತು.

Advertisement

ಮುಂಬೈ ಪರವಾಗಿ ಉತ್ತಮವಾದ  ಬ್ಯಾಟಿಂಗ್ ಪ್ರದರ್ಶನ ನೀಡಿದ ಸಜೀವನ್ ಸಜನಾ (45 ಎಸೆತಗಳಲ್ಲಿ 25 ರನ್,) ಮತ್ತು ನಿಕೋಲಾ ಕೇರಿ (40 ಎಸೆತಗಳಲ್ಲಿ 29 ರನ್) 5ನೇ ವಿಕೆಟ್‌ಗೆ 82 ರನ್‌ಗಳ ನೆರವಿನಿಂದಾಗಿ ಮುಂಬೈ ತಂಡವು 154ರನ್ ಗಳಿಸಿತು .ಆರ್‌ಸಿಬಿ ಯಿಂದ ಬೌಲಿಂಗ್ ನಡೆಸಿದ  ನಾಡಿನ್ ಡಿ ಕ್ಲರ್ಕ್ 4 ಓವರ್‌ಗಳಲ್ಲಿ 26 ರನ್ ನೀಡಿ 4 ವಿಕೆಟ್ ಪಡೆದು ತಮ್ಮ ಬೌಲಿಂಗ್ ಪ್ರದರ್ಶನವನ್ನೂ ಕೂಡ  ಮಾಡಿದ್ದಾರೆ. ಲಾರೆನ್ ಬೆಲ್ ಕೇವಲ 1 ವಿಕೆಟ್ ಪಡೆದು ಗಮನ ಸೆಳೆದರು.

155 ರನ್ ಗಳ ಗುರಿಯನ್ನು ಇಟ್ಟುಕೊಂಡು ಉತ್ತಮವಾದ ಪ್ರದರ್ಶನ ನೀಡಲು ಪ್ರಾರಂಭಿಸಿದರು. ಗ್ರೇಸ್  ಹ್ಯಾರಿಸ್ (25 ರನ್) ಮತ್ತು ಸ್ಮೃತಿ ಮಂದಾನ (18 ರನ್) ಅದ್ಭುತವಾದ  ಬ್ಯಾಟಿಂಗ್ ಮಾಡುವ ಮೂಲಕ  6 ಓವರ್‌ಗಳಲ್ಲಿ 57 ರನ್ ಗಳಿಸಿ ಮುಂಬೈ ತಂಡದ ಬೌಲರ್  ಪಂದ್ಯದ ಮೇಲೆ ನಿಯಂತ್ರಣವನ್ನು ಗಳಿಸಿದರು. ಅಮೇಲಿಯಾ ಕೇರ್ 4 ಓವರ್‌ಗಳಲ್ಲಿ 13 ರನ್ ನೀಡಿ 2 ವಿಕೆಟ್ ಪಡೆದುಕೊಂಡರು.

ಇದನ್ನೂ ಓದಿ: ಅತಿ ಬಿಸಿ ಪಾನೀಯ ಸೇವನೆ ಅನ್ನನಾಳದ ಕ್ಯಾನ್ಸರ್‌ಗೆ ಕಾರಣ: ಅಧ್ಯಯನ

ಆರ್‌ಸಿಬಿ ತಂಡವು 7 ವಿಕೆಟ್ ನಿಂದ 121 ರನ್ ಗಳಿಸಿ ಕಷ್ಟಕ್ಕೆ ಸಿಲುಕ್ಕಿತ್ತು. ಪಂದ್ಯ ಅದೃಷ್ಟದ ಏರಿಳಿತವನ್ನು ಕಾಣುತ್ತಿದ್ದರೂ,  ನಾಡಿನ್ ಡಿ ಕ್ಲರ್ಕ್ ಕೇವಲ 44 ಎಸೆತಗಳಲ್ಲಿ 63 ರನ್ (7 ಬೌಂಡರಿ, 2 ಸಿಕ್ಸರ್) ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಕೊನೆಯಲ್ಲಿ ಪ್ರೇಮಾ ರಾವತ್ ಅವರು 4 ಎಸೆತಗಳಲ್ಲಿ 8 ರನ್ ಗಳಿಸಿ ಸಹಾಯ ಮಾಡಿದರು, ಕೊನೆಯ ಹಂತದಲ್ಲಿ ಆರ್‌ಸಿಬಿ  ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ಗೆ 157 ರನ್ ಗಳಿಸಿ 3 ವಿಕೆಟ್‌ಗಳಲ್ಲಿ ರೋಚಕ ಗೆಲುವನ್ನು ಸಾಧಿಸಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು