ಸಿಎಸ್‌ಕೆ ಕೋಟೆಯಲ್ಲಿ ಜಿಟಿ ದರ್ಬಾರ್: ರುತುರಾಜ್ ಗಾಯಕ್ವಾಡ್ ಹೋರಾಟ ವ್ಯರ್ಥ; ಸಾಯಿ ಸುದರ್ಶನ್ ಬ್ಯಾಟಿಂಗ್‌ಗೆ ಚೆನ್ನೈ ತತ್ತರ!

ಚೆನ್ನೈ: ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಪ್ರಾಬಲ್ಯ ಮೆರೆದ ಜಿಟಿ, ಚೆನ್ನೈ ಅಭಿಮಾನಿಗಳಿಗೆ ತವರಿನಲ್ಲೇ ನಿರಾಶೆ ಮೂಡಿಸಿದೆ. ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ರುತುರಾಜ್ ಗಾಯಕ್ವಾಡ್ ಏಕಾಂಗಿ ಹೋರಾಟ ನಡೆಸಿ 74 (60 ಎಸೆತ) ರನ್ ಗಳಿಸಿದರು. ಶಿವಂ ದುಬೆ (22) ಮತ್ತು ಜೆಮಿ ಓವರ್ಟನ್ (18) ರನ್ ನೆರವಿನಿಂದ ಸಿಎಸ್‌ಕೆ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು.

Advertisement

ಇದನ್ನೂ ಓದಿ: IPL: ಸಾಯಿ ಸುದರ್ಶನ್ ಶತಕ ವ್ಯರ್ಥ; ಗುಜರಾತ್ ವಿರುದ್ಧ ಆರ್‌ಸಿಬಿಗೆ ಭರ್ಜರಿ ಗೆಲುವು

ಗುಜರಾತ್ ಪರ ಕಗಿಸೊ ರಬಾಡ 3 ವಿಕೆಟ್ ಪಡೆದು ಮಿಂಚಿದರೆ, ಅರ್ಶದ್ ಖಾನ್ 2 ವಿಕೆಟ್ ಕಬಳಿಸಿದರು.159 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಕೇವಲ 16.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ. ಸಾಯಿ ಸುದರ್ಶನ್ ಕೇವಲ 46 ಎಸೆತಗಳಲ್ಲಿ 87 ರನ್ (4 ಬೌಂಡರಿ, 7 ಸಿಕ್ಸರ್) ಸಿಡಿಸಿ ಜಯ ಸುಲಭಗೊಳಿಸಿದರು. ನಾಯಕ ಶುಭಮನ್ ಗಿಲ್ 33 ರನ್ ಮತ್ತು ಜೋಸ್ ಬಟ್ಲರ್ ಅಜೇಯ 39 ರನ್ ಗಳಿಸಿದರು.

Advertisement

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು