ತ್ರಿಶೂರ್: ಅನಾರೋಗ್ಯ ಪೀಡಿತ ಪ್ರಯಾಣಿಕರಿಗೆ ಸೀಟು ನೀಡಲು ನಿರಾಕರಿಸಿದ ಮತ್ತು ನಿಗದಿತ ನಿಲ್ದಾಣದಲ್ಲಿ ಬಸ್ ನಿಲ್ಲಿಸದೆ ಬೇಜವಾಬ್ದಾರಿ ತೋರಿದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (KSRTC) ಜಿಲ್ಲಾ ಗ್ರಾಹಕ ಆಯೋಗವು 30,000 ರೂ. ದಂಡ ವಿಧಿಸಿದೆ.
ಮಲಪ್ಪುರಂ ಮೂಲದ ಮೊಹಮ್ಮದ್ ಜೈನುದ್ದೀನ್ ಅವರು ತ್ರಿಶೂರ್‌ನಿಂದ ಮಲಪ್ಪುರಂಗೆ ಪ್ರಯಾಣಿಸುತ್ತಿದ್ದರು. ಬಸ್ ಹತ್ತಿದಾಗ ಸೀಟುಗಳು ಖಾಲಿ ಇರಲಿಲ್ಲ. ತಮಗೆ ಆರೋಗ್ಯ ಸರಿ ಇಲ್ಲದ ಕಾರಣ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಿಲ್ಲ ಎಂದು ನಿರ್ವಾಹಕರಿಗೆ (Conductor) ಮನವಿ ಮಾಡಿದ್ದರು. ತ್ರಿಶೂರ್ ತಲುಪಿದ ಮೇಲೆ ಸೀಟು ಕೊಡಿಸುವುದಾಗಿ ನಿರ್ವಾಹಕರು ಭರವಸೆ ನೀಡಿದ್ದರು.

ತ್ರಿಶೂರ್‌ನಲ್ಲಿ ಕೆಲವು ಸೀಟುಗಳು ಖಾಲಿಯಾದಾಗ ಜೈನುದ್ದೀನ್ ಅವರು ಕುಳಿತರು. ಆದರೆ, ಅದು ರಿಸರ್ವ್ ಆಗಿದೆ ಎಂದು ಹೇಳಿ ನಿರ್ವಾಹಕರು ಅವರನ್ನು ಎಬ್ಬಿಸಿದರು. ಪರಿಣಾಮವಾಗಿ, ಅನಾರೋಗ್ಯದ ನಡುವೆಯೂ ಅವರು ಇಡೀ ಪ್ರಯಾಣವನ್ನು ನಿಂತುಕೊಂಡೇ ಮಾಡಬೇಕಾಯಿತು.ಜೈನುದ್ದೀನ್ ಅವರು ಇಳಿಯಬೇಕಿದ್ದ ‘ಕಾಕ್ಕಾಡ್’ ನಿಲ್ದಾಣದಲ್ಲಿ ಬಸ್ ನಿಲ್ಲಿಸಲಿಲ್ಲ. ಸರ್ವಿಸ್ ರಸ್ತೆಗೆ ಹೋಗುವ ಬದಲು ರಾಷ್ಟ್ರೀಯ ಹೆದ್ದಾರಿಯಲ್ಲೇ ಸಾಗಿದ ಬಸ್, ಅವರನ್ನು ಮುಂದಿನ ನಿಲ್ದಾಣದಲ್ಲಿ ಇಳಿಸಿ ತೊಂದರೆ ನೀಡಿತು.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಅಪರಾಧಿ ಶಾರಿಕ್‌ಗೆ ನಾಳೆ ಶಿಕ್ಷೆ ಪ್ರಕಟ

ಈ ಬಗ್ಗೆ ಜೈನುದ್ದೀನ್ ಅವರು ಗ್ರಾಹಕ ಆಯೋಗದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಮಲಪ್ಪುರಂ ಜಿಲ್ಲಾ ಗ್ರಾಹಕ ಆಯೋಗವು, ಸೀಟಿನ ಬಗ್ಗೆ ಮಾಹಿತಿ ನೀಡದಿರುವುದು ಮತ್ತು ನಿಗದಿತ ನಿಲ್ದಾಣದಲ್ಲಿ ಬಸ್ ನಿಲ್ಲಿಸದಿರುವುದು “ಸೇವೆಯಲ್ಲಿನ ನ್ಯೂನತೆ” ಎಂದು ತೀರ್ಪು ನೀಡಿದೆ.ಪ್ರಯಾಣಿಕರಿಗೆ ಆದ ಮಾನಸಿಕ ಮತ್ತು ದೈಹಿಕ ತೊಂದರೆಗೆ 25,000 ರೂ. ಪರಿಹಾರ.ಕಾನೂನು ಹೋರಾಟದ ವೆಚ್ಚವಾಗಿ 5,000 ರೂ.30,000 ರೂ. ಹಣವನ್ನು 45 ದಿನಗಳೊಳಗೆ ಪಾವತಿಸಲು ಸೂಚಿಸಿದೆ. ತಪ್ಪಿದಲ್ಲಿ ಶೇ. 9 ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

