ಬಿಸಿಲ ಬೇಗೆಗೆ ವಿಜಯಪುರದ ಪ್ರತಿಭಾವಂತ ಕ್ರೀಡಾಪಟು ಬಲಿ?: ಆಟವಾಡಿ ಬಸವಳಿದಿದ್ದ 15 ವರ್ಷದ ಬಾಲಕ ಸಾವು!

ವಿಜಯಪುರ: ಜಿಲ್ಲೆಯಲ್ಲಿ ಸುಡುತ್ತಿರುವ ಬಿಸಿಲಿಗೆ ತಾಲೂಕು ಮಟ್ಟದ ಉದಯೋನ್ಮುಖ ಕ್ರೀಡಾಪಟುವೊಬ್ಬ ಬಲಿಯಾಗಿರುವ ದಾರುಣ ಘಟನೆ ಮುದ್ದೇಬಿಹಾಳ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.

ಇಂಗಳಗಿ ಗ್ರಾಮದ ನಿವಾಸಿ ಶ್ರೀಶೈಲ ಬಿರಾದಾರ (15) ಮೃತಪಟ್ಟ ಬಾಲಕ. ಬೇಸಿಗೆ ರಜೆ ಇದ್ದ ಕಾರಣ ಶ್ರೀಶೈಲ ಗೆಳೆಯರೊಂದಿಗೆ ಬಿಸಿಲಿನಲ್ಲಿ ಆಟವಾಡಿದ್ದ ಎನ್ನಲಾಗಿದೆ. ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಬಾಲಕನ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಉಂಟಾಗಿತ್ತು. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಬಾಲಕ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.

Advertisement

ಇದನ್ನೂ ಓದಿ: ಸುಳ್ಯ ಜನಾಕ್ರೋಶ ಸಭೆ; ಮಹಿಳೆಯರ ವಿರುದ್ಧ ಕೆಲಸ ಮಾಡುತ್ತಿರುವ ಕಾಂಗ್ರೆಸ್: ಶಾಸಕಿ ಭಾಗೀರಥಿ ಮುರುಳ್ಯ

ಮೃತ ಶ್ರೀಶೈಲ ಕೇವಲ ಸಾಮಾನ್ಯ ಬಾಲಕನಲ್ಲ, ಆತ ತಾಲೂಕು ಮಟ್ಟದ ಕಬಡ್ಡಿ ಮತ್ತು ಖೋಖೋ ಆಟಗಾರನಾಗಿದ್ದ. ಕ್ರೀಡೆಯಲ್ಲಿ ಸದಾ ಚುರುಕಾಗಿದ್ದ ಪ್ರತಿಭಾವಂತ ಬಾಲಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಇಂಗಳಗಿ ಗ್ರಾಮವೇ ಈ ಘಟನೆಯಿಂದ ಶೋಕಸಾಗರದಲ್ಲಿ ಮುಳುಗಿದೆ.

Advertisement

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು