ಬರಿಯಾರ್‌ಪುರ (ಉತ್ತರ ಪ್ರದೇಶ): ಮಂಗಲ ವಾದ್ಯಗಳು ಮೊಳಗಿ ಅಕ್ಷತೆ ಬೀಳಬೇಕಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ಮದುವೆಯ ಸಡಗರದಲ್ಲಿದ್ದ ವಧು, ಅಂತಿಮವಾಗಿ ಮನೆಗೆ ಹೆಣವಾಗಿ ಹಿಂದಿರುಗಿದ ಘೋರ ದುರಂತ ಉತ್ತರ ಪ್ರದೇಶದ ಬರಿಯಾರ್‌ಪುರದಲ್ಲಿ ನಡೆದಿದೆ.
ಬರಿಯಾರ್‌ಪುರದ ಗೌರ್ ಕೋಥಿ ಗ್ರಾಮದ ನಿವಾಸಿ ರಚನಾ (22) ಎಂಬುವವರ ವಿವಾಹವು ಅದೇ ದಿನ ಸಂಜೆ ನಡೆಯಬೇಕಿತ್ತು. ಮದುವೆಯ ಸಂಭ್ರಮಕ್ಕಾಗಿ ಸಿದ್ಧವಾಗಲು ರಚನಾ ತನ್ನ ಕಿರಿಯ ಸಹೋದರನೊಂದಿಗೆ ಬೈಕ್‌ನಲ್ಲಿ ಹತ್ತಿರದ ಬ್ಯೂಟಿ ಪಾರ್ಲರ್‌ಗೆ ಹೊರಟಿದ್ದರು.

ದಾರಿ ಮಧ್ಯೆ ಬೈಕ್ ನಿಯಂತ್ರಣ ತಪ್ಪಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ದುರಾದೃಷ್ಟವಶಾತ್, ಇದೇ ವೇಳೆ ಎದುರುಗಡೆಯಿಂದ ಅತಿ ವೇಗವಾಗಿ ಬಂದ ಟ್ರಕ್ ಕೆಳಗೆ ಬಿದ್ದಿದ್ದ ರಚನಾ ಅವರ ಮೇಲೆ ಹರಿದಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಣ್ಣೆದುರೇ ಅಕ್ಕ ಸಾವನ್ನಪ್ಪಿದ್ದನ್ನು ಕಂಡ ಸಹೋದರ ಆಘಾತಕ್ಕೊಳಗಾಗಿದ್ದಾನೆ.
ಇದನ್ನೂ ಓದಿ: ಪತ್ನಿಯನ್ನು ಹೂತ ಜಾಗದಲ್ಲೇ ನಾಯಿಯ ಶವವನ್ನು ಹೂತು ಯಾಮಾರಿಸಿದ ಪಾಪಿ ಪತಿ

ಮದುವೆ ಮನೆಯಲ್ಲಿ ಸಂತೋಷದ ಬದಲು ಈಗ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಗ್ರಾಮವೇ ಈ ಘಟನೆಯಿಂದ ಕಣ್ಣೀರಲ್ಲಿ ಮುಳುಗಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

