ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬುಧವಾರ ಸುರಿದ ಧಾರಾಕಾರ ಮಳೆಯು ಕಳೆದ 25 ವರ್ಷಗಳ ಏಪ್ರಿಲ್ ತಿಂಗಳ ದಾಖಲೆಯನ್ನು ಅಳಿಸಿ ಹಾಕಿದೆ. ಒಂದೇ ದಿನದಲ್ಲಿ ದಾಖಲೆಯ 111 ಮಿಲಿ ಮೀಟರ್ ಮಳೆಯಾಗಿದ್ದು, ಇದು 2001ರ ನಂತರದ ಅತಿ ದೊಡ್ಡ ಮಳೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ನಡುವೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಮುಕ್ಕಾಲು ಭಾಗದ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? (ಪ್ರಮುಖ ಪ್ರದೇಶಗಳು):

ಸಂಪಂಗಿರಾಮನಗರ: 39 ಮಿಲಿ ಮೀಟರ್
ಪುಲಕೇಶಿನಗರ: 36.50 ಮಿಲಿ ಮೀಟರ್

ಬೊಮ್ಮನಹಳ್ಳಿ: 31 ಮಿಲಿ ಮೀಟರ್
ಕಾಟನ್ ಪೇಟೆ: 29 ಮಿಲಿ ಮೀಟರ್
ಎಚ್‌ಎಎಲ್ ವಿಮಾನ ನಿಲ್ದಾಣ: 25 ಮಿಲಿ ಮೀಟರ್
ರಾಜ್ಯಾದ್ಯಂತ ಹವಾಮಾನ ಮುನ್ನೆಚ್ಚರಿಕೆ:
ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಮೈಸೂರು, ಕೊಡಗು, ತುಮಕೂರು, ಕೋಲಾರ, ಮತ್ತು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಸರ್ಕಾರದ ಕಠಿಣ ಸೂಚನೆ:
ಮಳೆಯ ಅವಾಂತರಗಳ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಬಿಎ (GBA) ಅಧಿಕಾರಿಗಳಿಗೆ ತುರ್ತು ಸೂಚನೆಗಳನ್ನು ನೀಡಿದ್ದಾರೆ:
ಮ್ಯಾನ್‌ಹೋಲ್ ಮತ್ತು ಚರಂಡಿ: ಬ್ಲಾಕ್ ಆಗಿರುವ ಮ್ಯಾನ್‌ಹೋಲ್‌ಗಳನ್ನು ತಕ್ಷಣ ಸರಿಪಡಿಸಬೇಕು.
ಮರಗಳ ತೆರವು: ಬೀಳುವ ಹಂತದಲ್ಲಿರುವ ಮರದ ಕೊಂಬೆಗಳನ್ನು ಕೂಡಲೇ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
ಅಂಡರ್‌ಪಾಸ್ ಸುರಕ್ಷತೆ: ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು.
ದುರಂತ ತಡೆ: ಬೌರಿಂಗ್ ಆಸ್ಪತ್ರೆಯಂತಹ ಗೋಡೆ ಕುಸಿತದ ದುರ್ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಬೇಕು.
ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

