ಕರಾವಳಿಯಲ್ಲಿ ಹೀಟ್ ಅಲರ್ಟ್: ದಕ್ಷಿಣ ಕನ್ನಡದಲ್ಲಿ ಹೆಚ್ಚಿದ ಚರ್ಮದ ಸಮಸ್ಯೆ; ಆಸ್ಪತ್ರೆಗಳಲ್ಲಿ ವಿಶೇಷ ಬೆಡ್ ಮೀಸಲು!

ಮಂಗಳೂರು: ಕರಾವಳಿ ಭಾಗದಲ್ಲಿ ಸುಡುತ್ತಿರುವ ಬಿಸಿಲಿನ ಜೊತೆಗೆ ಹೆಚ್ಚುತ್ತಿರುವ ಆರ್ದ್ರತೆ (Humidity) ಜನರನ್ನು ಹೈರಾಣಾಗಿಸಿದೆ. ಹವಾಮಾನ ಇಲಾಖೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಿದ್ದು, ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ, ತಾಲ್ಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವಿಶೇಷ ಬೆಡ್‌ಗಳನ್ನು ಮೀಸಲಿಟ್ಟಿದೆ.

ಆರೋಗ್ಯ ಇಲಾಖೆಯ ಪ್ರಮುಖ ಸಿದ್ಧತೆಗಳು:

Advertisement

ಬೆಡ್‌ಗಳ ಮೀಸಲಾತಿ: ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 5 ಬೆಡ್‌ಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 2 ಬೆಡ್‌ಗಳನ್ನು ಬಿಸಿಲು ಸಂಬಂಧಿತ ಪ್ರಕರಣಗಳಿಗಾಗಿ ಮೀಸಲಿಡಲಾಗಿದೆ.

ORS ಕಾರ್ನರ್‌ಗಳು: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಜಿಲ್ಲಾ ಆಸ್ಪತ್ರೆಯವರೆಗೆ ಓಆರ್‌ಎಸ್ (ORS) ಪಾಕೆಟ್‌ಗಳ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

Advertisement

ಮಾಹಿತಿ ದಾಖಲೀಕರಣ: ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಿಸಿಲು ಸಂಬಂಧಿತ ಅಥವಾ ಹೀಟ್ ಸ್ಟ್ರೋಕ್ ಪ್ರಕರಣಗಳ ವಿವರಗಳನ್ನು ತಕ್ಷಣವೇ ಇಲಾಖೆಯ ವೆಬ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: ಕರಾವಳಿಗೆ ಡಬಲ್ ಶಾಕ್!‌ ಬೀಸಲಿದೆ ಬಿಸಿಲು ಗಾಳಿ, ಆಕಸ್ಮಿಕ ಗುಡುಗು-ಮಿಂಚು ಮಳೆಯ ಎಚ್ಚರಿಕೆ

ಹೆಚ್ಚುತ್ತಿರುವ ಚರ್ಮದ ಸಮಸ್ಯೆಗಳು:

ಜಿಲ್ಲೆಯಲ್ಲಿ ವಿಪರೀತ ಬೆವರುವಿಕೆಯಿಂದಾಗಿ ತುರಿಕೆ, ಚರ್ಮದ ಮೇಲೆ ಗುಳ್ಳೆಗಳು ಮತ್ತು ಸ್ಕೇಬೀಸ್ ಮಾದರಿಯ ಚರ್ಮದ ಕಿರಿಕಿರಿ ಪ್ರಕರಣಗಳು ಹೆಚ್ಚುತ್ತಿವೆ. ಪ್ರತಿದಿನ ಸರಾಸರಿ 3 ರಿಂದ 5 ರೋಗಿಗಳು ಇಂತಹ ಲಕ್ಷಣಗಳೊಂದಿಗೆ ಚಿಕಿತ್ಸೆಗೆ ಬರುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಅವರು ಮಾತನಾಡಿ, “ಜಿಲ್ಲೆಯಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿದಾಗ ಆರೋಗ್ಯ ಸಮಸ್ಯೆಗಳು ತೀವ್ರಗೊಳ್ಳಬಹುದು. ಸದ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ಹೀಟ್ ಸ್ಟ್ರೋಕ್ ಪ್ರಕರಣ ದಾಖಲಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು