ಅಂಬಿಕಾ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ: ಸರ್ಕಾರಿ ಶಾಲೆಗಳ ಒಟ್ಟು 10 ವಿದ್ಯಾರ್ಥಿಗಳಿಗೆ ಉಚಿತ ಪಿಯು ಶಿಕ್ಷಣ ಘೋಷಣೆ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ತನ್ನ ರಜತ ಮಹೋತ್ಸವದ ಸವಿನೆನಪಿಗಾಗಿ ಒಂದು ಮಹತ್ವದ ಜನಪರ ನಿರ್ಧಾರ ಕೈಗೊಂಡಿದೆ. ಪುತ್ತೂರು ತಾಲೂಕಿನ ಸರ್ಕಾರಿ ಶಾಲೆಗಳ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಹತ್ತು ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಪಿಯು ಶಿಕ್ಷಣವನ್ನು ಒದಗಿಸಲು ಸಂಸ್ಥೆ ಮುಂದಾಗಿದೆ.

ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ನಡೆಸಲಾದ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಹತ್ತು ವಿದ್ಯಾರ್ಥಿಗಳನ್ನು ಈ ಯೋಜನೆಗಾಗಿ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೇವಲ ಕಾಲೇಜು ಶುಲ್ಕ ಮಾತ್ರವಲ್ಲದೆ, ನೀಟ್ (NEET), ಸಿಇಟಿ (CET) ಮತ್ತು ಜೆಇಇ (JEE) ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಚಿತ ತರಬೇತಿ ನೀಡಲಾಗುತ್ತದೆ.

ಆಯ್ಕೆಯಾದ ಪ್ರತಿಭಾನ್ವಿತ ವಿದ್ಯಾರ್ಥಿಗಳು

ಪುನೀತ್ ಕೆ (ಸವಣೂರಿನ ಶೇಖರ ಕೆ ಮತ್ತು ಶಾರದ ದಂಪತಿಯ ಪುತ್ರ).

ಯತೀಶ್ ಪಿ (ಪುಂಚಪ್ಪಾಡಿಯ ರಾಧಾಕೃಷ್ಣ ಮತ್ತು ಕುಸುಮ ಕೆ ಬಿ ದಂಪತಿಯ ಪುತ್ರ).

ಮನೀಶ್ (ಸವಣೂರಿನ ರಾಮ ಮತ್ತು ಗೀತಾ ದಂಪತಿಯ ಪುತ್ರ).

ಶ್ರಾವಣ್ಯ ರೈ ಎನ್ (ಚಿಕ್ಕಮುಡ್ನೂರಿನ ವಿಶ್ವನಾಥ ರೈ ಮತ್ತು ಸತ್ಯವತಿ ವಿ ರೈ ದಂಪತಿಯ ಪುತ್ರಿ).

ತೀಕ್ಷಾ ಎಸ್.ಪಿ (ಪಟ್ಟೆಯ ಶ್ರೀನಿವಾಸ ಬಿ ಮತ್ತು ಪದ್ಮಾವತಿ ಎಚ್ ದಂಪತಿಯ ಪುತ್ರಿ).

ಸ್ವಾತಿ ಡಿ (ಇರ್ದೆಯ ಉದಯ ಡಿ ಮತ್ತು ಪ್ರವೀಣ ಕುಮಾರಿ ದಂಪತಿಯ ಪುತ್ರಿ).

ಧನ್ವಿತಾ (ಬೆಟ್ಟಂಪಾಡಿಯ ಶೀನಪ್ಪ ಗೌಡ ಮತ್ತು ಯಶೋಧ ಬಿ ದಂಪತಿಯ ಪುತ್ರಿ).

ಭಾನುಪ್ರಿಯ ಎಮ್ (ಸೂತ್ರಬೆಟ್ಟುವಿನ ಮಂಜ ಶೆಟ್ಟಿ ಬಿ ಜಿ ಮತ್ತು ಮಾಲ ಎಚ್ ದಂಪತಿಯ ಪುತ್ರಿ).

ಜಸ್ವಿತ್ ಎಮ್ ಟಿ (ಪುಂಚಪ್ಪಾಡಿಯ ಮೋನಪ್ಪ ಗೌಡ ಮತ್ತು ಭವಾನಿ ದಂಪತಿಯ ಪುತ್ರ).

ಶಿಲ್ಪ ವಿಧಾತ್ರಿ ನಂದೇರಾ (ಕಬಕದ ಪರಮೇಶ್ವರ ಗೌಡ ಮತ್ತು ಬೇಬಿ ಕುಮಾರಿ ದಂಪತಿಯ ಪುತ್ರಿ).

ಇದನ್ನೂ ಓದಿ: ಮೇ 7 ರಂದು ಅಂಬಿಕಾ ಸಂಸ್ಥೆಗಳ ರಜತ ಮಹೋತ್ಸವ ಸಮಾರೋಪ: ಶೃಂಗೇರಿ ಶ್ರೀ ಭೇಟಿ

ಪುತ್ತೂರಿನಲ್ಲಿ ಉಚಿತ ಶಿಕ್ಷಣದ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಮೊದಲ ಸಂಸ್ಥೆ ಎಂಬ ಕೀರ್ತಿ ಅಂಬಿಕಾ ಸಂಸ್ಥೆಗೆ ಸಲ್ಲುತ್ತದೆ. 2010ರಲ್ಲಿ ನೆಲ್ಲಿಕಟ್ಟೆಯಲ್ಲಿ ಪದವಿಪೂರ್ವ ಕಾಲೇಜು ಆರಂಭವಾದಾಗಲೇ ಈ ವಿನೂತನ ವಿದ್ಯಾರ್ಥಿಸ್ನೇಹಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಪ್ರಸ್ತುತ ಸಂಸ್ಥೆಯು ಈಗಾಗಲೇ ಒಂದು ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಅರ್ಹರಿಗೆ ಸಹಕಾರಿಯೆನಿಸುವ ಯೋಜನೆಗಳನ್ನು ಜಾರಿಗೆ ತರುವುದರಲ್ಲಿ ನಮಗೆ ಆತ್ಮತೃಪ್ತಿಯಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸುಬ್ರಮಣ್ಯ ನಟ್ಟೋಜ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು