ಪುತ್ತೂರು: ಅಪಘಾತದಲ್ಲಿ ಗಾಯಗೊಂಡ ವಿಶಾಲ್‌ಗೆ ಅರುಣ ಸಾರಥಿ ಸಂಘಟನೆಯಿಂದ ಧನಸಹಾಯ

ಪುತ್ತೂರು: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಬಂಗಾರಡ್ಕ ನಿವಾಸಿ ವಿಶಾಲ್ ಅವರಿಗೆ “ಅರುಣ ಸಾರಥಿ” ಸಂಘಟನೆಯ ವತಿಯಿಂದ ₹10,000 ಧನಸಹಾಯ ವಿತರಿಸಲಾಯಿತು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ ಹಿಂದವಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧನಸಹಾಯದ ಚೆಕ್‌ನ್ನು ವಿಶಾಲ್ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಇದನ್ನೂ ಓದಿ: ಪುತ್ತೂರು: ನರಿಮೊಗರಿನಲ್ಲಿ ಮತ್ತೆ ಪುತ್ತಿಲ ಪರಿವಾರದಿಂದ ಪ್ರತಿಭಟನೆ, ಗುಡುಗಿದ ಅರುಣ್ ಕುಮಾರ್ ಪುತ್ತಿಲ

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಸಂದೇಶ್ ನಾಯಕ್ ಕೆಯ್ಯೂರು, ಸಚಿನ್ ವಳತ್ತಡ್ಕ, ಸುರೇಶ್ ಬಂಗಾರಡ್ಕ, ಶಿವಪ್ರಸಾದ್ ಆಚಾರ್ಯ ಮುಕ್ರಂಪಾಡಿ ಹಾಗೂ ಪ್ರಜ್ವಲ್ ಘಾಟೆ ಉಪಸ್ಥಿತರಿದ್ದರು.

ಗಮನಾರ್ಹವಾಗಿ, ‘ಅರುಣ ಸಾರಥಿ’ ಸಂಘಟನೆಯು ಇದುವರೆಗೆ ಅನಾರೋಗ್ಯ ಹಾಗೂ ಸಂಕಷ್ಟದಲ್ಲಿರುವ ವಿವಿಧ ಕುಟುಂಬಗಳಿಗೆ ಒಟ್ಟು ₹2,40,000 ಧನಸಹಾಯವನ್ನು ನೀಡಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *