Breaking News

ಕರ್ನಾಟಕದ 5 ಪ್ರವಾಸಿ ತಾಣಗಳಿಗೆ ವಿಶ್ವದರ್ಜೆ ಸ್ಪರ್ಶ: ಸಚಿವ ಯುಟಿ ಖಾದರ್ ಘೋಷಣೆ

Karnataka Tourism UT Khader Tourism Development

‌ಮಂಗಳೂರು: ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ದೃಢ ಹೆಜ್ಜೆಯಿರಿಸಿದ್ದು, ನಾಡಿನ 5 ಪ್ರಮುಖ ಪ್ರವಾಸಿ ತಾಣಗಳನ್ನು ವಿಶ್ವದರ್ಜೆಗೇರಿಸಲು ಸಮಗ್ರ ಅಭಿವೃದ್ಧಿಯ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ ಎಂದು ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್‌ ಪೋಸ್ಟ್‌ ಮಾಡಿದ ಅವರು, ಬೃಹತ್ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ ಕಲ್ಪಿಸುವ ಮೂಲಕ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಿ, ಕರ್ನಾಟಕವನ್ನು ದೇಶದಲ್ಲೇ ಅಗ್ರಗಣ್ಯ ಪ್ರವಾಸಿ ರಾಜ್ಯವನ್ನಾಗಿ ರೂಪಿಸುವುದು ನಮ್ಮ ದ್ಯೇಯವಾಗಿದೆ ಎಂದರು.

ಇದನ್ನೂ ಓದಿ: ಅಂಗನವಾಡಿ ಮಕ್ಕಳ ಆಹಾರ ಸುರಕ್ಷತೆಗೆ ಸಚಿವ ಯು.ಟಿ. ಖಾದರ್ ಸೂಚನೆ: ಮೂಡುಶೆಡ್ಡೆ MSPC ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಅಧಿಕಾರಿಗಳು

ಸಮೃದ್ಧ ಸಾಂಸ್ಕೃತಿಕ ಪರಂಪರೆ ಮತ್ತು ನೈಸರ್ಗಿಕ ವೈಭವವನ್ನು ವಿಶ್ವಮಟ್ಟದಲ್ಲಿ ಪ್ರತಿಬಿಂಬಿಸಲು ನಮ್ಮ ಸರ್ಕಾರ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *