“5 ನಿಮಿಷ ಮನೆ ಒಳಗೆ ಬರಲಾ?”: ಬಾಗಿಲು ತಟ್ಟಿದ ‘ಜೆಪ್ಟೋ’ ಡೆಲಿವರಿ ಬಾಯ್‌ನಿಂದ ಕಿರುಕುಳ, ವೈರಲ್ ವೀಡಿಯೊಗೆ ಮಹಿಳೆ ಕಣ್ಣೀರು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಡೆಲಿವರಿ ಬಾಯ್‌ಗಳಿಂದ ಮಹಿಳೆಯರ ಮೇಲಾಗುತ್ತಿರುವ ಕಿರುಕುಳದ ಸರಣಿ ಘಟನೆಗಳು ಆತಂಕ ಹೆಚ್ಚಿಸಿವೆ. ‘ಜೆಪ್ಟೋ’ (Zepto) ಸಂಸ್ಥೆಯ ಡೆಲಿವರಿ ಏಜೆಂಟ್ ಒಬ್ಬ ಗ್ರಾಹಕಿ ಮನೆಗೆ ಆರ್ಡರ್ ತಲುಪಿಸಿದ ನಂತರ, ‘ಕುಡಿಯಲು ನೀರು ಬೇಕು’ ಎಂದು ಕೇಳಿ, ಬಳಿಕ ನಿರಂತರವಾಗಿ ‘5 ನಿಮಿಷ ಮನೆ ಒಳಗಡೆ ಬರಲು ಅನುಮತಿ ಕೊಡಿ’ ಎಂದು ಪೀಡಿಸಿ ಕಿರುಕುಳ ನೀಡಿದ ಆಘಾತಕಾರಿ ಘಟನೆ ನಡೆದಿದೆ.

ಸಂತ್ರಸ್ತ ಯುವತಿ ತನಗಾದ ಭಯಾನಕ ಅನುಭವವನ್ನು ಇನ್‌ಸ್ಟಾಗ್ರಾಮ್ ವೀಡಿಯೊ ಮೂಲಕ ಹಂಚಿಕೊಂಡಿದ್ದು, ಈ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ನಿಜಕ್ಕೂ ನಡೆದಿದ್ದೇನು?

ಯುವತಿಯ ಹೇಳಿಕೆಯಂತೆ, ಡೆಲಿವರಿ ಏಜೆಂಟ್ ಮೊದಲು ಕುಡಿಯಲು ನೀರು ಕೇಳಿದ್ದಾನೆ. ಆಕೆ ಬಾಟಲಿ ನೀರು ಕೊಟ್ಟು ಅದನ್ನು ನೀವೇ ಇಟ್ಟುಕೊಳ್ಳಿ ಎಂದು ಹೇಳಿದ್ದಾಳೆ. ನೀರು ಕುಡಿದ ನಂತರ ಮತ್ತೆ ಖಾಲಿ ಬಾಟಲಿಗೆ ನೀರು ತುಂಬಿಸಿಕೊಡುವಂತೆ ಕೇಳಿದ್ದಾನೆ. ಯುವತಿ ನೀರು ತಂದುಕೊಟ್ಟಾಗ, “ನಾನು ಕೇವಲ 5 ನಿಮಿಷ ನಿಮ್ಮ ಮನೆ ಒಳಗಡೆ ಬರಬಹುದೇ?” ಎಂದು ಪದೇ ಪದೇ ವಿನಂತಿಸಿದ್ದಾನೆ. ಯುವತಿ ಆತನ ವಿನಂತಿಯನ್ನು ಕಡ್ಡಾಯವಾಗಿ ತಿರಸ್ಕರಿಸಿ, ಹೊರಗೆ ಕುಳಿತುಕೊಳ್ಳಲು ಜಾಗವಿದೆ ಎಂದು ಹೇಳಿದರೂ ಆತ ಜಾಗದಿಂದ ಕದಲಿಲ್ಲ.

ಇಲ್ಲಿದೆ ನೋಡಿ ವಿಡಿಯೋ

 

View this post on Instagram

 

ಆತ ಒಳಗಡೆ ಬರಲು ಒತ್ತಾಯಿಸುತ್ತಲೇ ಇದ್ದಾಗ, ಯುವತಿ ಗೇಟ್ ಹಾಕಿ ಡೋರ್ ಮುಚ್ಚಲು ಯತ್ನಿಸಿದ್ದಾಳೆ. ಈ ವೇಳೆ ಆತ ನಿರಂತರವಾಗಿ ಕಾಲಿಂಗ್ ಬೆಲ್ ಬಾರಿಸಿ, “ಐದೇ ಐದು ನಿಮಿಷ ಒಳಗೆ ಬರ್ತೀನಿ” ಎಂದು ಹಠ ಹಿಡಿದಿದ್ದಾನೆ. ಭೀತಿಗೊಂಡ ಯುವತಿ ಬಾಗಿಲು ಮುಚ್ಚಿಕೊಂಡಾಗ ಗೇಟ್ ಹಾಗೂ ಬಾಗಿಲನ್ನು ಜೋರಾಗಿ ಬಡಿದಿದ್ದಾನೆ.

ಆತ ಒಳಗಡೆ ಬರಲು ಒತ್ತಾಯಿಸುತ್ತಲೇ ಇದ್ದಾಗ, ಯುವತಿ ಗೇಟ್ ಹಾಕಿ ಡೋರ್ ಮುಚ್ಚಲು ಯತ್ನಿಸಿದ್ದಾಳೆ. ಈ ವೇಳೆ ಆತ ನಿರಂತರವಾಗಿ ಕಾಲಿಂಗ್ ಬೆಲ್ ಬಾರಿಸಿ, “ಐದೇ ಐದು ನಿಮಿಷ ಒಳಗೆ ಬರ್ತೀನಿ” ಎಂದು ಹಠ ಹಿಡಿದಿದ್ದಾನೆ. ಭೀತಿಗೊಂಡ ಯುವತಿ ಬಾಗಿಲು ಮುಚ್ಚಿಕೊಂಡಾಗ ಗೇಟ್ ಹಾಗೂ ಬಾಗಿಲನ್ನು ಜೋರಾಗಿ ಬಡಿದಿದ್ದಾನೆ.

ಇದನ್ನೂ ಓದಿ:Viral Video: ಬಣ್ಣ ಎರಚಿದ ಪುಟ್ಟ ಬಾಲಕನ ಮೇಲೆ ಬಿಸಿಬಿಸಿ ನೀರು ಸುರಿದ ಅಜ್ಜಿ! ಬಾಲಕನ ನರಳಾಟ

ಜೆಪ್ಟೋ ಸಂಸ್ಥೆಯಿಂದ ಚಾಲಕನ ಐಡಿ ವಜಾ:

ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ತೀವ್ರ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಜೆಪ್ಟೋ ಸಂಸ್ಥೆಯು ಸದರಿ ಡೆಲಿವರಿ ಏಜೆಂಟ್ ವಿರುದ್ಧ ‘Restraining Order’ ಹೊರಡಿಸಿದ್ದು, ಆತನ ಖಾತೆಯನ್ನು (ID) ತಕ್ಷಣವೇ ವಜಾಗೊಳಿಸಿದೆ (Terminated).

ಸಾರ್ವಜನಿಕರು ಆನ್‌ಲೈನ್ ಡೆಲಿವರಿ ಆ್ಯಪ್‌ಗಳು ತಮ್ಮ ಉದ್ಯೋಗಿಗಳ ಹಿನ್ನೆಲೆ ಪರಿಶೀಲನೆ (Background Verification) ಕಡ್ಡಾಯವಾಗಿ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *