ಡಿಕೆಶಿಗೆ ಮೊಮ್ಮಗಳ ಸಂಭ್ರಮ: ಐಶ್ವರ್ಯಾ-ಅಮರ್ತ್ಯ ದಂಪತಿಗೆ ಹೆಣ್ಣು ಮಗು ಜನನ!

ಬೆಂಗಳೂರು: ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿ ಈಗ ಸಂಭ್ರಮದ ವಾತಾವರಣ ಮನೆಮಾಡಿದೆ. ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಹೆಗ್ಡೆ ಅವರು ಇಂದು (ಮೇ 1) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ತಾತನಾಗಿ ಬಡ್ತಿ ಪಡೆದಿದ್ದಾರೆ.

ಮಗಳು ಐಶ್ವರ್ಯಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ ಸುದ್ದಿ ತಿಳಿಯುತ್ತಿದ್ದಂತೆಯೇ ಡಿ.ಕೆ. ಶಿವಕುಮಾರ್ ಅವರು ಸಂಭ್ರಮದಿಂದ ಮಗಳು ಮತ್ತು ಮೊಮ್ಮಗಳನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

Advertisement

ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ಧಾರ್ಥ ಅವರ ಪುತ್ರ ಅಮರ್ತ್ಯ ಹೆಗ್ಡೆ ಮತ್ತು ಐಶ್ವರ್ಯಾ ಅವರು 2021ರ ಫೆಬ್ರವರಿ 14 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹವಾದ ಸುಮಾರು ಐದು ವರ್ಷಗಳ ಬಳಿಕ ಈ ದಂಪತಿಗೆ ಈಗ ಚೊಚ್ಚಲ ಮಗು ಜನಿಸಿದೆ.

ಇದನ್ನೂ ಓದಿ:ಮೇ ಕೊನೆಯಲ್ಲಿ ಸಿಎಂ ಬದಲಾವಣೆ ಪಿಕ್ಸ್? ದೆಹಲಿಯಲ್ಲಿ ಸಚಿವ ಕೆ.ಹೆಚ್. ಮುನಿಯಪ್ಪ ಹೈಕಮಾಂಡ್ ಮುಂದೆ ಹೇಳಿದ್ದೇನು?

Advertisement

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯಾ ಅವರು ಭಾಗವಹಿಸಿದ್ದಾಗ, ಅವರು ಗರ್ಭಿಣಿಯಾಗಿರುವ ವಿಷಯ ಸಾರ್ವಜನಿಕವಾಗಿ ಗಮನ ಸೆಳೆದಿತ್ತು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು