IPL: ಚಕ್ರವರ್ತಿ ಸ್ಪಿನ್ ಮಾಯಾಜಾಲ, ರಘುವಂಶಿ-ರಹಾನೆ ಜೊತೆಯಾಟ; ಎಸ್‌ಆರ್‌ಎಚ್ ವಿರುದ್ಧ ಗೆದ್ದ ಕೆಕೆಆರ್

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 45ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 165 ರನ್ ಗಳಿಸಿತು. ತಂಡದ ಪರ ಟ್ರೇವಿಸ್ ಹೆಡ್ 61 ರನ್ ಗಳಿಸಿ ಅಗ್ರಸ್ಕೋರರ್ ಆಗಿ ಮಿಂಚಿದರು.

Advertisement

ಇಶಾನ್ ಕಿಶನ್ 42 ರನ್ ಕೊಡುಗೆ ನೀಡಿದರೆ, ಅಭಿಷೇಕ್ ಶರ್ಮಾ 15, ಹೆನ್ರಿಚ್ ಕ್ಲಾಸನ್ 11, ಪ್ಯಾಟ್ ಕಮ್ಮಿನ್ಸ್ 10 ರನ್ ಗಳಿಸಿದರು. ಇತರ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಸಾಧನೆ ಮಾಡಲಿಲ್ಲ.

ಇದನ್ನೂ ಓದಿ: ಚೆನ್ನೈ ಪಾಲಿಗೆ ರುತುರಾಜ್ ಗಾಯಕ್ವಾಡ್ ಕಿಂಗ್, ಮುಂಬೈಗೆ ಸೋಲು

Advertisement

ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ 3 ವಿಕೆಟ್ ಪಡೆದು ಮಿಂಚಿದರೆ, ಕಾರ್ತಿಕ್ ತ್ಯಾಗಿ ಮತ್ತು ಸುನಿಲ್ ನರೈನ್ ತಲಾ 2 ವಿಕೆಟ್ ಪಡೆದರು. ಕೆಮರಾನ್ ಗ್ರೀನ್, ಅನ್ಕುಲ್ ರಾಯ್ ಮತ್ತು ವೈಭವ್ ಅರೋರಾ ತಲಾ 1 ವಿಕೆಟ್ ಪಡೆದರು.

166 ರನ್ ಗುರಿ ಬೆನ್ನಟ್ಟಿದ ಕೋಲ್ಕತ್ತಾ ತಂಡ 18.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ ಗೆಲುವು ಸಾಧಿಸಿತು. ಅಂಗ್‌ಕ್ರಿಶ್ ರಘುವಂಶಿ 59 ರನ್ ಹಾಗೂ ಅಜಿಂಕ್ಯ ರಹಾನೆ 43 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಫಿನ್ ಅಲ್ಲೆನ್ 29 ರನ್ ಗಳಿಸಿದರೆ, ರಿಂಕು ಸಿಂಗ್ ಅಜೇಯ 22 ರನ್ ಗಳಿಸಿದರು.

ಹೈದರಾಬಾದ್ ಪರ ಸಕಿಬ್ ಹುಸೈನ್, ಪ್ಯಾಟ್ ಕಮ್ಮಿನ್ಸ್ ಮತ್ತು ಶಿವಾಂಗ್ ಕುಮಾರ್ ತಲಾ 1 ವಿಕೆಟ್ ಪಡೆದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು