ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 44ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ತಂಡದ ಪರ ನಮನ್ ಧೀರ್ 57 ರನ್‌ಗಳ ಉತ್ತಮ ಇನ್ನಿಂಗ್ಸ್ ಆಡಿದರು.

ರ್‍ಯಾನ್ ರಿಕಲ್ಟನ್ 37 ರನ್, ಸೂರ್ಯಕುಮಾರ್ ಯಾದವ್ 21, ಹಾರ್ದಿಕ್ ಪಾಂಡ್ಯ 18 ರನ್‌ಗಳ ಕೊಡುಗೆ ನೀಡಿದರು. ವಿಲ್ ಜ್ಯಾಕ್ಸ್ 1, ತಿಲಕ್ ವರ್ಮಾ 5, ರಾಬಿನ್ ಮಿನ್ಝ್ 5, ಕ್ರಿಶ್ ಭಗತ್ ಅಜೇಯ 3, ಟ್ರಂಟ್ ಬೋಲ್ಟ್ ಅಜೇಯ 7 ರನ್ ಗಳಿಸಿದರು.
ಚೆನ್ನೈ ಪರ ಬೌಲಿಂಗ್‌ನಲ್ಲಿ ಅನ್ಶುಲ್ ಕಾಂಬೊಜ್ 3 ವಿಕೆಟ್ ಪಡೆದು ಮಿಂಚಿದರೆ, ನೂರ್ ಅಹ್ಮದ್ 2 ವಿಕೆಟ್ ಪಡೆದರು. ಜಮೀ ಓವರ್ಟನ್ ಮತ್ತು ರಾಮಕೃಷ್ಣ ಘೋಷ್ ತಲಾ 1 ವಿಕೆಟ್ ಪಡೆದರು.

ಇದನ್ನೂ ಓದಿ: IPL: ಪರಾಗ್ ಸ್ಫೋಟಕ ಆಟ ವ್ಯರ್ಥ; ರಾಹುಲ್–ನಿಸ್ಸಂಕ ಜೊತೆಯಾಟಕ್ಕೆ ಡೆಲ್ಲಿಗೆ ಭರ್ಜರಿ ಗೆಲುವು
160 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್, 18.1 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 160ರನ್ ಗಳಿಸಿ ಸುಲಭ ಜಯ ಸಾಧಿಸಿತು. ಆರಂಭಿಕ ಆಟಗಾರರು ಹೆಚ್ಚು ಕಾಲ ಉಳಿಯದಿದ್ದರೂ, ನಂತರ ರುತುರಾಜ್ ಗಾಯಕ್ವಾಡ್ ಮತ್ತು ಕಾರ್ತಿಕ್ ಶರ್ಮಾ ಜೋಡಿ ಅದ್ಭುತ ಜೊತೆಯಾಟ ನಡೆಸಿತು.
ರುತುರಾಜ್ ಗಾಯಕ್ವಾಡ್ 67 ರನ್‌ಗಳ ಸಮತೋಲನದ ಇನ್ನಿಂಗ್ಸ್ ಆಡಿದರೆ, ಕಾರ್ತಿಕ್ ಶರ್ಮಾ 54 ರನ್‌ಗಳ ಮಹತ್ವದ ಕೊಡುಗೆ ನೀಡಿದರು. ಸಂಜು ಸ್ಯಾಮ್ಸನ್ 11, ಉರ್ವಿಲ್ ಪಟೇಲ್ 24 ರನ್ ಗಳಿಸಿದರು.
ಮುಂಬೈ ಪರ ಜಸ್ಪ್ರೀತ್ ಬುಮ್ರಾ ಮತ್ತು ಅಲ್ಲಾಹ್ ಗಝನ್ಫರ್ ತಲಾ 1 ವಿಕೆಟ್ ಪಡೆದರು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

