ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 43ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 225 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ತಂಡದ ಪರ ರಿಯಾನ್ ಪರಾಗ್ ಸ್ಫೋಟಕ ಆಟವಾಡಿ 50 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸ್‌ಗಳ ನೆರವಿನಿಂದ 90 ರನ್ ಬಾರಿಸಿದರು. ಡೊನೊವನ್ ಫೆರೀರಾ 47 ರನ್‌ಗಳೊಂದಿಗೆ ಅಜೇಯರಾಗಿದ್ದರೆ, ಧ್ರುವ್ ಜುರೆಲ್ 42 ರನ್ ಸೇರಿಸಿದರು. ಇತರರಿಂದ ದೊಡ್ಡ ನೆರವು ಸಿಗಲಿಲ್ಲ.

ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದು ಮಿಂಚಿದರೆ, ಕೈಲ್ ಜೇಮಿಸನ್, ಅಕ್ಷರ್ ಪಟೇಲ್ ಮತ್ತು ಟಿ ನಟರಾಜನ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: IPL: ಫೆರೀರಾ, ಯಶಸ್ವಿ ಬ್ಯಾಟಿಂಗ್: ಪಂಜಾಬ್ ವಿರುದ್ಧ ರಾಜಸ್ಥಾನಕ್ಕೆ ರಾಯಲ್ ಗೆಲುವು

226 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಪಾತುಮ್ ನಿಸ್ಸಂಕ ಮತ್ತು ಕೆಎಲ್ ರಾಹುಲ್ ಜವಾಬ್ದಾರಿಯುತ ಜೊತೆಯಾಟ ಕಟ್ಟಿದರು. ನಿಸ್ಸಂಕ 62 ರನ್ ಗಳಿಸಿದರೆ, ರಾಹುಲ್ 75 ರನ್‌ಗಳ ಪ್ರಮುಖ ಇನಿಂಗ್ಸ್ ಆಡಿದರು. ನಿತೀಶ್ ರಾಣಾ 33 ರನ್‌ಗಳ ಕೊಡುಗೆ ನೀಡಿದರು.
ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್ (18 ಅಜೇಯ) ಮತ್ತು ಆಶುತೋಶ್ ಶರ್ಮಾ (25 ಅಜೇಯ) ಶಾಂತವಾಗಿ ಆಟ ಮುಗಿಸಿ, 19.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.
ರಾಜಸ್ಥಾನ ಪರ ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್ ಮತ್ತು ತುಷಾರ್ ದೇಶಪಾಂಡೆ ತಲಾ ಒಂದು ವಿಕೆಟ್ ಪಡೆದರು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

