ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಅಗ್ನಿ ಅವಘಡ: ಆಳದಂಗಡಿ ಭಾಗದಲ್ಲಿ ಧಗಧಗ

Kuduremukha Fire accident

ಕಾರ್ಕಳ: ಕುದುರೆಮುಖ ರಾಷ್ಟ್ರೀಯ ಉದ್ಯಾನದ ವನ್ಯಜೀವಿ ವಿಭಾಗದ ಆಳದಂಗಡಿ ಶ್ರೇಣಿಯ ಪಾದಭಾಗದಲ್ಲಿ ಶನಿವಾರ ಸಂಜೆ ಭಾರೀ ಕಾಡು ಬೆಂಕಿ ಕಾಣಿಸಿಕೊಂಡಿದ್ದು, ಪರಿಸ್ಥಿತಿ ಆತಂಕಕಾರಿ ರೂಪ ಪಡೆದುಕೊಂಡಿತು.

ಬೆಂಕಿಯ ತೀವ್ರತೆ ಆಳದಂಗಡಿ ಪಟ್ಟಣದಿಂದಲೇ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದು, ಸ್ಥಳೀಯರು ಮತ್ತು ಸಂಚಾರಿಗರಲ್ಲಿ ಆತಂಕ ಉಂಟುಮಾಡಿತ್ತು.

Advertisement

ಇದನ್ನೂ ಓದಿ: ಬಂಟ್ವಾಳ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತ್ರಿವಳಿಗಳ ಕಮಾಲ್; ಸಾಧನೆಯಲ್ಲೂ ಒಬ್ಬರಿಗೊಬ್ಬರು ಪೈಪೋಟಿ!

ಘಟನೆಯ ಮಾಹಿತಿ ತಿಳಿದ ತಕ್ಷಣವೇ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿದ್ದಾರೆ.  ಈ ಕುರಿತು ಮಾತನಾಡಿದ ಡಿಎಫ್‌ಒ ಶಿವರಾಮ್ ಬಾಬು, “ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಇಲಾಖೆ ತೀವ್ರವಾಗಿ ಕಾರ್ಯನಿರ್ವಹಿಸಿದೆ ಎಂದು ತಿಳಿಸಿದ್ದಾರೆ.

Advertisement

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು