ಜೈಲಿನಲ್ಲೇ ಮಕ್ಕಳಿಗೆ ಶಾಲೆ, ಸುರಕ್ಷತೆ: ಕರ್ನಾಟಕ ಸರ್ಕಾರದ ಹೊಸ ಹೆಜ್ಜೆ

ಕರ್ನಾಟಕ ಸರ್ಕಾರವು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮಹಿಳಾ ವಿಭಾಗದಲ್ಲಿ ಭಾರತದ ಮೊದಲ “ಸರ್ಕಾರಿ ವಿಶೇಷ ಶಿಶುಪಾಲನಾ ಸಂಸ್ಥೆ (GSCCI)” ಅನ್ನು ಆರಂಭಿಸಿದೆ. “ರೇ ಆಫ್ ಹೋಪ್” ಎಂಬ ಈ ಯೋಜನೆ ಜೈಲಿನಲ್ಲಿರುವ ತಾಯಂದಿರೊಂದಿಗೆ ಬದುಕುತ್ತಿರುವ ಆರು ವರ್ಷದೊಳಗಿನ ಮಕ್ಕಳ ಶಿಕ್ಷಣ, ಸುರಕ್ಷತೆ ಮತ್ತು ಮಾನಸಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಲಾಗಿದೆ.

ಈ ಕೇಂದ್ರದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ, ಸಂಖ್ಯೆಗಳು, ರೈಮ್ಸ್, ಚಿತ್ರಕಲೆ ಹಾಗೂ ಸೃಜನಾತ್ಮಕ ಚಟುವಟಿಕೆಗಳನ್ನು ಕಲಿಸಲಾಗುತ್ತಿದೆ. ಜೊತೆಗೆ ಮಕ್ಕಳಲ್ಲಿ ಶಿಸ್ತು, ಒಳ್ಳೆಯ ಅಭ್ಯಾಸಗಳು ಮತ್ತು ಶಾಲಾ ಸಿದ್ಧತೆಯನ್ನೂ ಬೆಳೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ತಾಯಿ-ಮಗು ಆರೋಗ್ಯ ಮೇಲ್ವಿಚಾರಣೆಗೆ ಕೇಂದ್ರದ ಹೊಸ ಡಿಜಿಟಲ್ ವ್ಯವಸ್ಥೆ

ಪ್ರಸ್ತುತ ಇಲ್ಲಿ ಒಂಬತ್ತು ಮಕ್ಕಳಿಗೆ ಆರೈಕೆ ನೀಡಲಾಗುತ್ತಿದೆ. ಅವರಿಗೆ ಪೌಷ್ಟಿಕ ಆಹಾರ, ಆರೋಗ್ಯ ತಪಾಸಣೆ ಹಾಗೂ ಮಕ್ಕಳಿಗೆ ಸೂಕ್ತವಾದ ಕಲಿಕಾ ವಾತಾವರಣ ಒದಗಿಸಲಾಗಿದೆ. ತರಗತಿ ಕೊಠಡಿಗಳ ಗೋಡೆಗಳನ್ನು ಬಣ್ಣದ ಚಿತ್ರಗಳಿಂದ ಅಲಂಕರಿಸಿ, ಜೈಲಿನ ಭಯಾನಕ ವಾತಾವರಣವನ್ನು ಮಕ್ಕಳಿಗೆ ಅನುಭವವಾಗದಂತೆ ಮಾಡುವ ಪ್ರಯತ್ನ ಮಾಡಲಾಗಿದೆ.

ಅಧಿಕಾರಿಗಳ ಪ್ರಕಾರ, ಈ ಯೋಜನೆ “ಮಿಷನ್ ವಾತ್ಸಲ್ಯ”, ಬಾಲ ನ್ಯಾಯ ಕಾಯ್ದೆ  ಹಾಗೂ ಮಕ್ಕಳ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ ಸಮಾವೇಶ  (UNCRC) ಮಾರ್ಗಸೂಚಿಗಳಿಗೆ ಅನುಗುಣವಾಗಿ ಜಾರಿಗೊಂಡಿದೆ. ಮುಂದಿನ ಹಂತದಲ್ಲಿ ಮಕ್ಕಳಿಗೆ ಹೆಚ್ಚುವರಿ ಪೌಷ್ಠಿಕಾಂಶ ಮತ್ತು ಸಮಗ್ರ ಬೆಳವಣಿಗೆ ಕಾರ್ಯಕ್ರಮಗಳನ್ನು ಕೂಡ ಪರಿಚಯಿಸುವ ಯೋಜನೆ ಇದೆ.

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು