ನಾಸಿಕ್ TCS ಮತಾಂತರ ಮತ್ತು ಲೈಂಗಿಕ ಕಿರುಕುಳ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಬಂಧನ

ಮಹಾರಾಷ್ಟ್ರದ ನಾಸಿಕ್‌ನ TCS ಮತಾಂತರ ಮತ್ತು ಕಿರುಕುಳ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ನಿದಾ ಖಾನ್ ಅವರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಸುಮಾರು 25 ದಿನಗಳಿಂದ ತಲೆಮರೆಸಿಕೊಂಡಿದ್ದ ನಿದಾ ಖಾನ್ ಅವರನ್ನು ಛತ್ರಪತಿ ಸಂಭಾಜಿನಗರದಲ್ಲಿ ವಿಶೇಷ ತನಿಖಾ ತಂಡ (SIT) ಬಂಧಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಹೊಸ ಹಂದಿ ಜ್ವರ ಪ್ರಕರಣ ಪತ್ತೆ! ಹಂದಿಗಳ ಮಾರಣಹೋಮಕ್ಕೆ ಸೂಚನೆ

ಈ ಪ್ರಕರಣದಲ್ಲಿ ಉದ್ಯೋಗಿಗಳ ಮೇಲೆ ಬಲವಂತದ, ಮತಾಂತರ ಒತ್ತಡ, ಲೈಂಗಿಕ ಕಿರುಕುಳ, ಧಾರ್ಮಿಕ ಆಚರಣೆಗಳನ್ನು ಪಾಲಿಸುವಂತೆ ಒತ್ತಾಯ,ಮಾನಸಿಕ ಹಿಂಸೆಮಾಡಲಾಗಿದೆ ಎಂಬ ಆರೋಪಗಳಡಿ ಹಲವು   ಎಫ್ ಐ ಆರ್   ದಾಖಲಾಗಿವೆ. ನಿದಾ ಖಾನ್ ವಿರುದ್ಧವೂ ಗಂಭೀರ ಆರೋಪಗಳಿದ್ದು, ಅವರ ಮುಂಗಡ ಜಾಮೀನು ಅರ್ಜಿಯನ್ನು ನ್ಯಾಯಾಲಯ ಇತ್ತೀಚೆಗೆ ತಿರಸ್ಕರಿಸಿತ್ತು.

ಪೊಲೀಸರ ಪ್ರಕಾರ, ನಾಸಿಕ್ TCS ಘಟಕದಲ್ಲಿ ನಡೆದಿದ್ದ ಕಿರುಕುಳ ಮತ್ತು ಧಾರ್ಮಿಕ ಒತ್ತಡ ಪ್ರಕರಣಗಳ ಕುರಿತು SIT ತನಿಖೆ ಮುಂದುವರಿದಿದ್ದು, ಈಗಾಗಲೇ ಹಲವರನ್ನು ಬಂಧಿಸಲಾಗಿದೆ.

ಇದೀಗ ನಿದಾ ಖಾನ್ ಬಂಧನದಿಂದ ಪ್ರಕರಣದ ತನಿಖೆಗೆ ಮತ್ತಷ್ಟು ವೇಗ ಸಿಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು