ಲಾಕಪ್ ಕೀ ನುಂಗಿದ ಯುವಕ: ಹೊಟ್ಟೆಯಿಂದ ಹೊರತರಲು 10ಕೆಜಿ ಬಾಳೆ ಹಣ್ಣು ನೀಡಿದ ವೈದ್ಯರು

ಬೆಂಗಳೂರು: ಸಮೀಪದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಿತ್ರ ಘಟನೆೊಂದು ನಡೆದಿದೆ. 17 ವರ್ಷದ ಬಾಲಕಿ ನಾಪತ್ತೆ ಪ್ರಕರಣದಲ್ಲಿ ವಿಚಾರಣೆಗೆ ಕರೆತರಲಾದ ಯುವಕನೊಬ್ಬ, ತನ್ನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಬಹುದು ಎಂಬ ಭಯದಿಂದ ಲಾಕ್‌ಅಪ್ ಕೀಲಿಯನ್ನು ನುಂಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳ್ಳಾರಿ ಮೂಲದ ಕಾರ್ತಿಕ್ ಅಲಿಯಾಸ್ ರಾಮು ಎಂಬ ಯುವಕನನ್ನು ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಪೊಲೀಸರು ಪತ್ತೆಹಚ್ಚಿದ್ದರು. ವಿಚಾರಣೆ ವೇಳೆ ಆತ ಗಾಬರಿಗೊಂಡು ಕೀಲಿಯನ್ನು ನುಂಗಿದ್ದಾನೆ ಎನ್ನಲಾಗಿದೆ. ಬಳಿಕ ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಇದನ್ನೂ  ಓದಿ : ನಾಸಿಕ್ TCS ಮತಾಂತರ ಮತ್ತು ಲೈಂಗಿಕ ಕಿರುಕುಳ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಬಂಧನ

ವೈದ್ಯರು ಶಸ್ತ್ರಚಿಕಿತ್ಸೆ ಮಾಡದೇ, ಕೀಲಿಯು ಸಹಜವಾಗಿ ಹೊರಬರುವಂತೆ ಮೂರು ದಿನಗಳಲ್ಲಿ ಸುಮಾರು 10 ಕೆಜಿ ಬಾಳೆಹಣ್ಣು ತಿನ್ನಿಸಿದ್ದಾರೆ ಎಂದು ವರದಿಯಾಗಿದೆ. ಕೊನೆಗೆ ಕೀ ಸಹಜ ವಿಸರ್ಜನೆಯ ಮೂಲಕ ಹೊರಬಂದಿದೆ.

ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಯುವಕನ ವಿರುದ್ಧ ಆತ್ಮಹತ್ಯೆ ಯತ್ನ ಪ್ರಕರಣವೂ ದಾಖಲಾಗಿದೆ ಎಂದು ವರದಿಯಾಗಿದೆ. ನಾಪತ್ತೆ ಬಾಲಕಿ ಪ್ರಕರಣದ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು