ಆಹಾರವನ್ನು ಚೆನ್ನಾಗಿ ಜಗಿದು ತಿನ್ನುವುದರಿಂದ ಆಗುವ ಪ್ರಯೋಜನಗಳು ಇಲ್ಲಿವೆ

food chewing brain health

ಇಂದಿನ ವೇಗದ ಜೀವನಶೈಲಿಯಲ್ಲಿ ಅನೇಕರು ಮೊಬೈಲ್ ನೋಡುತ್ತಾ, ಟಿವಿ ವೀಕ್ಷಿಸುತ್ತಾ ಅಥವಾ ಕೆಲಸ ಮಾಡುತ್ತಲೇ ತುರ್ತಾಗಿ ಊಟ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಆದರೆ, ಆಹಾರವನ್ನು ಸರಿಯಾಗಿ ಜಗಿದು ತಿನ್ನುವುದು ಕೇವಲ ಜೀರ್ಣಕ್ರಿಯೆಗೆ ಮಾತ್ರವಲ್ಲ, ಎಚ್ಚರಿಕೆ, ಏಕಾಗ್ರತೆ ಹಾಗೂ ಮೆದುಳಿನ ಕಾರ್ಯಕ್ಷಮತೆಯನ್ನೂ ಸುಧಾರಿಸಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಹಾರವನ್ನು ಚೆನ್ನಾಗಿ ಜಗಿಯುವ ವೇಳೆ ದವಡೆಯ ಸ್ನಾಯುಗಳು ಮತ್ತು ನರಗಳು ಸಕ್ರಿಯಗೊಳ್ಳುತ್ತವೆ. ಇವು ಮೆದುಳಿನ ವಿವಿಧ ಭಾಗಗಳಿಗೆ ಸಂದೇಶ ಕಳುಹಿಸುವ ಮೂಲಕ ರಕ್ತಪ್ರವಾಹವನ್ನು ಹೆಚ್ಚಿಸಿ ಕೆಲಕಾಲ ಎಚ್ಚರಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

“ಆಹಾರವನ್ನು ಸರಿಯಾಗಿ ಜಗಿದಾಗ, ದವಡೆಯ ಚಲನೆಯಿಂದ ಮೆದುಳಿನ ಹಲವು ಭಾಗಗಳು ಚುರುಕುಗೊಳ್ಳುತ್ತವೆ. ಇದರಿಂದ ಆಮ್ಲಜನಕಯುಕ್ತ ರಕ್ತಪ್ರವಾಹ ಹೆಚ್ಚಾಗಿ ಏಕಾಗ್ರತೆ ಹಾಗೂ ಗಮನ ಕೇಂದ್ರೀಕರಣಕ್ಕೆ ಸಹಕಾರಿಯಾಗಬಹುದು,” ಎಂದು ಅವರು ಹೇಳಿದ್ದಾರೆ.

ತಜ್ಞರ ಪ್ರಕಾರ, ಜಗಿಯುವ ಕ್ರಿಯೆ ಮೆದುಳಿಗೆ ಸಣ್ಣ ಮಟ್ಟಿನ ಸಂವೇದನಾತ್ಮಕ ಉತ್ತೇಜನ ನೀಡುವ ಮೂಲಕ ಗಮನ, ಸ್ಮರಣೆ ಮತ್ತು ಏಕಾಗ್ರತೆ ಸಂಬಂಧಿತ ಕಾರ್ಯಗಳಿಗೆ ಸಹಕಾರಿ ಆಗಬಹುದು.

BioMed Research International ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನವೂ ಈ ವಿಚಾರಕ್ಕೆ ಬೆಂಬಲ ನೀಡಿದ್ದು, ನಿಯಮಿತ ಜಗಿಯುವ ಕ್ರಿಯೆಯಿಂದ ಎಚ್ಚರಿಕೆ ಹಾಗೂ ನಿರಂತರ ಗಮನ ಕೇಂದ್ರೀಕರಣ ಸುಧಾರಿಸಬಹುದು ಎಂದು ತಿಳಿಸಿದೆ. ದವಡೆಯ ಲಯಬದ್ಧ ಚಲನೆಯಿಂದ ತಲೆಯ ಭಾಗಕ್ಕೆ ರಕ್ತಸಂಚಾರ ಹೆಚ್ಚಾಗಿ ಮೆದುಳಿನ ಪ್ರಮುಖ ಜಾಲಗಳು ಸಕ್ರಿಯಗೊಳ್ಳಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮಾನಸಿಕ ಒತ್ತಡದಿಂದ ನರಮಂಡಲದ ಮೇಲೆ ಗಂಭೀರ ಪರಿಣಾಮ: ಇಲ್ಲಿದೆ ಆರೋಗ್ಯ ತಜ್ಞರ ಅಭಿಪ್ರಾಯ!

ಒತ್ತಡ, ಮೊಬೈಲ್ ಬಳಕೆ ಹಾಗೂ ಟಿವಿ ವೀಕ್ಷಣೆ ನಡುವೆಯೇ ತುರ್ತಾಗಿ ಊಟ ಮಾಡುವ ಅಭ್ಯಾಸ ಜೀರ್ಣಕ್ರಿಯೆಗೆ ಹಾನಿ ಉಂಟುಮಾಡಿ ಊಟದ ಮೇಲಿನ ಗಮನವನ್ನೂ ಕಡಿಮೆ ಮಾಡಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

“ನಿಧಾನವಾಗಿ ಜಗಿದು ತಿನ್ನುವುದರಿಂದ ಹಸಿವು ಮತ್ತು ಹೊಟ್ಟೆತುಂಬಿದ ಸೂಚನೆಗಳನ್ನು ದೇಹ ಸುಲಭವಾಗಿ ಗುರುತಿಸುತ್ತದೆ. ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಾಯಕ. ಆದರೆ, ಆಹಾರ ಜಗಿಯುವುದೇ ಮೆದುಳಿನ ಕಾಯಿಲೆಗಳಿಗೆ ಚಿಕಿತ್ಸೆ ಅಲ್ಲ ಎಂಬುದನ್ನು ವೈದ್ಯರು ಸ್ಪಷ್ಟಪಡಿಸಿದ್ದಾರೆ. ದೀರ್ಘಕಾಲದ ಆರೋಗ್ಯಕ್ಕಾಗಿ ನಿಧಾನವಾಗಿ ಊಟ ಮಾಡುವುದು, ಊಟದ ವೇಳೆ ಪರದೆಗಳಿಂದ ದೂರವಿರುವುದು, ಸಮತೋಲನ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು, ವ್ಯಾಯಾಮ ಮತ್ತು ಸಮರ್ಪಕ ನಿದ್ರೆ ಅಗತ್ಯ ಎಂದು ಸಲಹೆ ನೀಡಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು