ಮೋದಿ-ಮೆಲೋನಿ ‘Melodi’ ವೈರಲ್ ಟ್ರೆಂಡ್ ಎಫೆಕ್ಟ್: ಪಾರ್ಲೆ ಇಂಡಸ್ಟ್ರೀಸ್ ಷೇರು ಶೇ. 5ರಷ್ಟು ದಿಢೀರ್ ಜಿಗಿತ! ಆದರೆ ಅಸಲಿ ಟ್ವಿಸ್ಟ್ ಇಲ್ಲಿದೆ!

ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗುವ ಟ್ರೆಂಡ್‌ಗಳು ಷೇರು ಮಾರುಕಟ್ಟೆಯ ಮೇಲೂ ಹೇಗೆ ಪ್ರಭಾವ ಬೀರುತ್ತವೆ ಎಂಬುದಕ್ಕೆ ಸದ್ಯ ಒಂದು ಅತ್ಯಂತ ಸ್ವಾರಸ್ಯಕರ ಉದಾಹರಣೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇಟಲಿ ಪ್ರವಾಸದ ವೇಳೆ ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ‘ಪಾರ್ಲೆ ಮೆಲೋಡಿ’ (Melody) ಟಾಫಿ ಪ್ಯಾಕೆಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಬೆನ್ನಲ್ಲೇ ಇಂಟರ್ನೆಟ್‌ನಲ್ಲಿ ಹಳೇ “Melodi” (Madi + Meloni) ಟ್ರೆಂಡ್ ಮತ್ತೆ ಜಾಗೃತಗೊಂಡಿದ್ದು, ಷೇರು ಮಾರುಕಟ್ಟೆಯಲ್ಲಿ ‘ಪಾರ್ಲೆ ಇಂಡಸ್ಟ್ರೀಸ್’ (Parle Industries) ಕಂಪನಿಯ ಷೇರುಗಳು ಮಂಗಳವಾರ ಭಾರಿ ಏರಿಕೆ ಕಂಡಿವೆ.

ಪ್ರಧಾನಿ ಮೋದಿ ಅವರ ಈ ಅಪರೂಪದ ಗಿಫ್ಟ್ ವೈರಲ್ ಆಗುತ್ತಿದ್ದಂತೆ, ಹೂಡಿಕೆದಾರರು ಪಾರ್ಲೆ ಕಂಪನಿಯ ಷೇರುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಇದರಿಂದಾಗಿ ಪಾರ್ಲೆ ಇಂಡಸ್ಟ್ರೀಸ್ ಷೇರುಗಳು ಒಂದೇ ದಿನದಲ್ಲಿ ಶೇಕಡಾ 5 ರಷ್ಟು ಇಂಟ್ರಾಡೇ ಜಿಗಿತ ಕಂಡು 5.25 ರೂಪಾಯಿಗೆ ತಲುಪಿವೆ. ಅಷ್ಟೇ ಅಲ್ಲದೆ, ಕಳೆದ ಕೇವಲ ಒಂದು ವಾರದಲ್ಲಿ ಈ ಸ್ಟಾಕ್ ಸುಮಾರು ಶೇಕಡಾ 7 ರಷ್ಟು ಮೌಲ್ಯವನ್ನು ವೃದ್ಧಿಸಿಕೊಂಡಿದೆ.

ಇದನ್ನೂ ಓದಿ: ವಿದೇಶಿ ಪ್ರವಾಸ ಮಾಡುವವರಿಗೆ ಬಿಗ್ ರಿಲೀಫ್: ಹೊಸ ತೆರಿಗೆ ವದಂತಿಗಳನ್ನು ನೇರವಾಗಿ ತಳ್ಳಿಹಾಕಿದ ಪ್ರಧಾನಿ ಮೋದಿ!

ಇಲ್ಲಿದೆ ನೋಡಿ ವಿಡಿಯೋ

ಷೇರು ಮಾರುಕಟ್ಟೆಯಲ್ಲಿ ಈ ಪಾರ್ಲೆ ಇಂಡಸ್ಟ್ರೀಸ್ ಷೇರುಗಳ ಮೌಲ್ಯವೇನೋ ಹೆಚ್ಚಾಗಿದೆ, ಆದರೆ ಹೂಡಿಕೆದಾರರು ಮಾಡಿರುವ ಒಂದು ದೊಡ್ಡ ಎಡವಟ್ಟು ಅಥವಾ ಇಲ್ಲಿರುವ ಅಸಲಿ ಟ್ವಿಸ್ಟ್ ಏನೆಂದರೆ— ಪ್ರಸ್ತುತ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ‘ಪಾರ್ಲೆ ಇಂಡಸ್ಟ್ರೀಸ್’ ಕಂಪನಿಗೂ ಮತ್ತು ನಾವು ತಿನ್ನುವ ಜಗತ್ಪ್ರಸಿದ್ಧ ‘ಮೆಲೋಡಿ’ (Melody Chocolates) ಚಾಕೊಲೇಟ್‌ಗೂ ಯಾವುದೇ ಸಂಬಂಧವಿಲ್ಲ! ಹೌದು, ಮೆಲೋಡಿ ಟಾಫಿಗಳನ್ನು ಪ್ರಸಿದ್ಧ ‘ಪಾರ್ಲೆ ಪ್ರೊಡಕ್ಟ್ಸ್’ (Parle Products) ಕಂಪನಿ ತಯಾರಿಸುತ್ತದೆ, ಆದರೆ ಅದು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿಲ್ಲ (Unlisted). ಕೇವಲ ಹೆಸರಿನ ಗೊಂದಲದಿಂದಾಗಿ ಹೂಡಿಕೆದಾರರು ಪಾರ್ಲೆ ಇಂಡಸ್ಟ್ರೀಸ್ ಷೇರುಗಳನ್ನು ಖರೀದಿಸಿದ್ದು, ಆ ಕಂಪನಿಯ ಅದೃಷ್ಟ ಖುಲಾಯಿಸಿದೆ!

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು