ದೆಹಲಿ: ಯುವ ಜನತೆಯಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ರಾಜಕೀಯ ವಿಡಂಬನಾತ್ಮಕ ಮತ್ತು ವ್ಯಂಗ್ಯದ ಅಭಿಯಾನ ಆರಂಭಿಸಿದ್ದ ‘ಕಾಕ್ರಾಚ್ ಜನತಾ ಪಾರ್ಟಿ’ (Cockroach Janta Party – CJP) ಆನ್‌ಲೈನ್ ಒಕ್ಕೂಟದ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯನ್ನು ಭಾರತದಲ್ಲಿ ಅಮಾನತುಗೊಳಿಸಲಾಗಿದೆ (Withheld).
ಈ ಆನ್‌ಲೈನ್ ಅಭಿಯಾನದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಭಾರತ ಸರ್ಕಾರದ ಕಾನೂನು ಆದೇಶದ ಮೇರೆಗೆ (Due to an order of law) ಈ ಎಕ್ಸ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ ಎಂದು ಎಕ್ಸ್ ಸಂಸ್ಥೆಯು ತಿಳಿಸಿದೆ. ಭಾರತದಲ್ಲಿ ಬ್ಯಾನ್ ಆಗುವ ಮುನ್ನ ಈ ಖಾತೆಯು ಬರೋಬ್ಬರಿ 1,65,500ಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿತ್ತು.
ಮೇ 16 ರಂದು ಆರಂಭವಾದ ಈ ಡಿಜಿಟಲ್ ಅಭಿಯಾನವು ದೇಶಾದ್ಯಂತ ಅತ್ಯಂತ ಕಡಿಮೆ ಅವಧಿಯಲ್ಲಿ ಭಾರಿ ಸದ್ದು ಮಾಡಿತ್ತು. ಯುವಕರಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಅತ್ಯಂತ ಚುರುಕಾದ ರಾಜಕೀಯ ವಿಡಂಬನೆ ಹಾಗೂ ವಿನೂತನ ಸಂದೇಶಗಳ ಮೂಲಕ ಈ ವೇದಿಕೆ ಪ್ರಶ್ನಿಸಿತ್ತು. ಕೇವಲ ಕೆಲವೇ ದಿನಗಳಲ್ಲಿ ಈ ಪ್ಲಾಟ್‌ಫಾರ್ಮ್‌ನಲ್ಲಿ 6 ಲಕ್ಷಕ್ಕೂ ಹೆಚ್ಚು ಯುವಕರು ನೋಂದಣಿ (Registrations) ಮಾಡಿಕೊಂಡಿದ್ದಾರೆ ಎಂದು ಸಂಸ್ಥಾಪಕರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳ್ತಂಗಡಿಯ ದಿಡುಪೆ ಜಲಪಾತದಲ್ಲಿ ಪ್ರವಾಸಿ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಸರಗೋಡಿನ ಮೂವರು ಕಾಮುಕರು ಅರೆಸ್ಟ್!
ಎಕ್ಸ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದ್ದರೂ, ಈ ಒಕ್ಕೂಟದ ಅಧಿಕೃತ ಇನ್‌ಸ್ಟಾಗ್ರಾಮ್ (Instagram) ಖಾತೆಯು ಸದ್ಯ ಸಕ್ರಿಯವಾಗಿದ್ದು, ಭಾರಿ ವೇಗವಾಗಿ ಮುನ್ನುಗ್ಗುತ್ತಿದೆ. ಪ್ರಸ್ತುತ ಇದರ ಇನ್‌ಸ್ಟಾಗ್ರಾಮ್ ಖಾತೆಯು ಬರೋಬ್ಬರಿ 1.2 ಕೋಟಿಗೂ ಹೆಚ್ಚು (12 Million) ಫಾಲೋವರ್ಸ್‌ಗಳನ್ನು ದಾಟುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ದಾಖಲೆ ಬರೆದಿದೆ. ಇಂಟರ್ನೆಟ್ ಕಂಟೆಂಟ್ ನಿಯಂತ್ರಣ ಮತ್ತು ಡಿಜಿಟಲ್ ಅಭಿವ್ಯಕ್ತಿ ಸ್ವಾತಂತ್ರ್ಯದ ದೃಷ್ಟಿಯಿಂದ ಈ ವಿದ್ಯಮಾನವು ಈಗ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಿಜೆಐ ಸೂರ್ಯಕಾಂತ್ ಅವರ “ಜಿರಳೆ” ಹೇಳಿಕೆಗೆ ಆಕ್ರೋಶ: ಇಂಟರ್ನೆಟ್‌ನಲ್ಲಿ ಹುಟ್ಟಿಕೊಂಡಿತು ‘ಕಾಕ್ರೋಚ್ ಜನತಾ ಪಾರ್ಟಿ
ರಾಜಕೀಯದಲ್ಲಿ ಅಧಿಕಾರದ ಆಸೆ, ಸಿದ್ಧಾಂತಗಳ ಬದಲಾವಣೆ ಹೊಸದೇನಲ್ಲ. ಆದರೆ ಇತ್ತೀಚೆಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು ಪ್ರಕರಣವೊಂದರ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ ನಿರುದ್ಯೋಗಿ ಯುವಕರನ್ನು ಕುರಿತು ಬಳಸಿದ ವಿಭಿನ್ನ ಶಬ್ದಗಳು ಈಗ ದೇಶಾದ್ಯಂತ ಭಾರಿ ಚರ್ಚೆಗೆ ಹಾಗೂ ಹೊಸದೊಂದು ಆನ್‌ಲೈನ್ ಆಂದೋಲನಕ್ಕೆ ಕಾರಣವಾಗಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


