ಏಕಾನಾ ಕ್ರಿಕೆಟ್ ಕ್ರೀಡಾಂಗಣದ ಬಿ ಮೈದಾನದಲ್ಲಿ ನಡೆದ ಐಪಿಎಲ್ 68ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ತಂಡದ ಪರ ಜೋಶ್ ಇಂಗ್ಲಿಸ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ 72 ರನ್ ಗಳಿಸಿದರು.
ಆಯುಷ್ ಬಡೋನಿ 43 ರನ್ ಸೇರಿಸಿದರೆ, ರಿಷಬ್ ಪಂತ್ 26, ಅಬ್ದುಲ್ ಸಮದ್ ಅಜೇಯ 37 ರನ್ ಗಳಿಸಿದರು. ನಿಕೋಲಸ್ ಪೂರನ್ 2 ಹಾಗೂ ಮುಕುಲ್ ಚೌಧರಿ 1 ರನ್‌ಗೆ ವಿಕೆಟ್ ಒಪ್ಪಿಸಿದರು. ಅರ್ಜುನ್ ತೆಂಡೂಲ್ಕರ್ ಅಜೇಯ 5 ರನ್ ಗಳಿಸಿದರು.
ಇದನ್ನೂ ಓದಿ: IPL: ಎಸ್‌ಆರ್‌ಹೆಚ್ ಅದ್ದೂರಿ ಬ್ಯಾಟಿಂಗ್, ಆರ್‌ಸಿಬಿಗೆ ಹೀನಾಯ ಸೋಲು
ಪಂಜಾಬ್ ಪರ ಮಾರ್ಕೊ ಜಾನ್ಸನ್ ಹಾಗೂ ಯಜುವೇಂದ್ರ ಚಹಲ್ ತಲಾ 2 ವಿಕೆಟ್ ಕಬಳಿಸಿದರು. ಶಶಾಂಕ್ ಸಿಂಗ್ ಮತ್ತು ಅಜ್ಮತುಲ್ಲಾ ಒಮರ್ಜೈ ತಲಾ 1 ವಿಕೆಟ್ ಪಡೆದರು.
197 ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು ಕೇವಲ 18 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 200 ರನ್ ಬಾರಿಸಿ ಸುಲಭ ಜಯ ಸಾಧಿಸಿತು.
ತಂಡದ ಗೆಲುವಿನಲ್ಲಿ ನಾಯಕ ಶ್ರೇಯಸ್ ಅಯ್ಯರ್ ಸ್ಫೋಟಕ ಶತಕದಾಟ ಪ್ರಮುಖ ಪಾತ್ರವಹಿಸಿತು. ಅವರು 51 ಎಸೆತಗಳಲ್ಲಿ 11 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ ಅಜೇಯ 101 ರನ್ ಸಿಡಿಸಿದರು. ಪ್ರಭಸಿಮ್ರನ್ ಸಿಂಗ್ 69 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದರು. ಕೂಪರ್ ಕಾನೋಲಿ 18 ರನ್ ಗಳಿಸಿದರೆ, ಸೂರ್ಯಾಂಶ್ ಶೆಡ್ಗೆ ಅಜೇಯ 9 ರನ್ ಸೇರಿಸಿದರು. ಪ್ರಿಯಾಂಶ್ ಆರ್ಯ ಖಾತೆ ತೆರೆಯದೇ ಔಟಾದರು.
ಲಕ್ನೋ ಪರ ಮೊಹಮ್ಮದ್ ಶಮಿ 2 ವಿಕೆಟ್ ಪಡೆದುಕೊಂಡರೆ, ಅರ್ಜುನ್ ತೆಂಡೂಲ್ಕರ್ 1 ವಿಕೆಟ್ ಪಡೆದರು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


