ವಡೋದರಾ: ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಭಾರತವು 4 ವಿಕೆಟ್‌ಗಳ ಗೆಲುವು ಸಾಧಿಸಿದೆ. ಪಂದ್ಯದಲ್ಲಿ ವಿರಾಟ್ ಕೊಹ್ಲಿ 91 ಎಸೆತಗಳಲ್ಲಿ 93 ರನ್ ಮತ್ತು ನಾಯಕ ಶುಭ್ಮನ್ ಗಿಲ್ 56 ರನ್ ಗಳಿಸಿ ಮತ್ತೊಮ್ಮೆ ಅಮೋಘ ಪ್ರದರ್ಶನ ನೀಡಿದರು.
ಟಾಸ್ ಸೋತು ಬ್ಯಾಟ್ ನಡೆಸಿದ ನ್ಯೂಜಿಲ್ಯಾಂಡ್, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 300 ರನ್‌ಗಳನ್ನು ಬಾರಿಸಿತು. 301 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, 49 ಓವರ್‌ಗಳಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡು 306 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಉತ್ತಮ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ 91 ಎಸೆತಗಳಲ್ಲಿ 93 ರನ್ ಬಾರಿಸಿದ್ದು, ತಮ್ಮ 54 ನೇ ಏಕದಿನ ಶತಕವನ್ನು ತಲುಪಲು ಕೆಲವು ರನ್‌ಗಳ ಕೊರತೆಯನ್ನು ಅನುಭವಿಸಿದರು.
ದಾಖಲೆ ಬರೆದ ವಿರಾಟ್ ಕೊಹ್ಲಿ
ಶತಕಕ್ಕೆ ಕೆಲವು ರನ್‌ಗಳ ಕೊರತೆಯಿದ್ದರೂ, ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 28,000 ರನ್‌ಗಳನ್ನು ವೇಗವಾಗಿ ತಲುಪಿದ ಮತ್ತು ಈಗ ದಂತಕಥೆ ಸಚಿನ್ ತೆಂಡೂಲ್ಕರ್ ನಂತರ ಎರಡನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ, ಶ್ರೀಲಂಕಾದ ದಂತಕಥೆ ಕುಮಾರ್ ಸಂಗಕ್ಕಾರ ಅವರನ್ನು ಹಿಂದಿಕ್ಕಿದ್ದಾರೆ.
ಇದನ್ನೂ ಓದಿ: 3 ವಿಕೆಟ್‌ಗಳಿಂದ ರೋಚಕ ಗೆಲುವು ಸಾಧಿಸಿದ ಮಹಿಳಾ ಆರ್‌ಸಿಬಿ
ಭಾರತದ ನಾಯಕ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 16 ನೇ ಅರ್ಧಶತಕವನ್ನು ಗಳಿಸಲು ಸಮಯ ತೆಗೆದುಕೊಂಡರು. 71 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 56 ರನ್ ಗಳಿಸಿದರು.
ರೋಹಿತ್ ಶರ್ಮಾ 26, ಶ್ರೀಯಸ್ ಅಯ್ಯರ್ 49, ರವೀಂದ್ರ ಜಡೆಜಾ 4, ಕೆಎಲ್ ರಾಹುಲ್ 29 (ಅಜೇಯ), ಹರ್ಷಿತ್ ರಾಣಾ 29 ರನ್ ಹಾಗೂ ವಾಶಿಂಗ್ಟನ್ ಸುಂದರ್ 7 ರನ್ ಬಾರಿಸಿದರು. ತಂಡದ ಪರ ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ತಲಾ 2, ಕುಲದೀಪ್ ಯಾದವ್ 1 ವಿಕೆಟ್ ಪಡೆದರು.
ಡೆವೊನ್ ಕಾನ್ವೇ 67 ಎಸೆತಗಳಲ್ಲಿ 56 ರನ್ (6 ಬೌಂಡರಿ, 1 ಸಿಕ್ಸರ್) ಮತ್ತು ಹೆನ್ರಿ ನಿಕೋಲ್ಸ್ 69 ಎಸೆತಗಳಲ್ಲಿ 62 ರನ್ (8 ಬೌಂಡರಿ) ಗಳಿಸಿದರು. ಮಿಚೆಲ್ ಅವರು 71 ಎಸೆತಗಳಲ್ಲಿ ಐದು ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 84 ರನ್ ಗಳಿಸಿದರು. ಕೈಲ್ ಜಮಿಸನ್ ಅವರು ನಾಲ್ಕು ವಿಕೆಟ್ ಪಡೆದು ಮಿಂಚಿದರು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

