Breaking News

WPL: ಡೆಲ್ಲಿ ವಿರುದ್ಧ ಗುಜರಾತ್‌ಗೆ 4 ರನ್‌ಗಳ ಜಯ

WPL Gujarat won against Delhi by 4 runs

ನವಿ ಮುಂಬೈನಲ್ಲಿ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವಿರುದ್ಧ ಗುಜರಾತ್‌ ಜೈಂಟ್‌ ತಂಡವು 4 ವಿಕೆಟ್‌ಗಳ ಗೆಲುವು ಸಾಧಿಸಿದೆ. ಸೋಫಿ ಡೆವೈನ್‌ ಅವರ ಅಮೋಘ ಪ್ರದರ್ಶನದಿಂದಾಗಿ ಗುಜರಾತ್‌ ಗೆಲುವಿನ ನಗೆ ಬೀರಿತು.

ಟಾಸ್‌ ಸೋತು ಬ್ಯಾಟ್‌ ಮಾಡಿದ ಗುಜರಾತ್‌,  ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 209 ರನ್‌ ಗಳಿಸಿತು. ತಂಡದ ಪರ, ಸೋಫಿ ಡಿವೈನ್‌ ಅವರು 42 ಎಸೆತಗಳಲ್ಲಿ 95 ರನ್‌ (2 ಬೌಂಡರಿ, 8 ಸಿಕ್ಸ್) ಬಾರಿಸಿದರು.‌ ಬೆತ್‌ ಮೂನಿ 19, ಅಶ್ಲೇ ಗಾರ್ಡ್ನರ್‌ 49, ಜಾರ್ಜಿಯಾ ವೇರ್ಹ್ಯಾಮ್ 3, ಅನುಷ್ಕ ಬ್ರಿಜ್‌ಮೋಹನ್‌ ಶರ್ಮಾ 13, ಭಾರ್ತಿ 3, ಕಶ್ವಿ ಗೌತಮ್‌ 14, ಕನಿಕ ಅಹುಜ 4, ತನುಜ ಜನ್ವರ್‌ 1 ರನ್‌ ಗಳಿಸಿದರೆ, ರಾಜೇಶ್ವರಿ ಗಾಯಕ್ವಾಡ್‌ ಹಾಗೂ ರೇಣುಕಾ ಸಿಂಗ್‌ ರನ್‌ ಗಳಿಸುವಲ್ಲಿ ವಿಫಲರಾದರು.

Advertisement

ಇದನ್ನೂ ಓದಿ: IND vs NZ ODI:‌ ನ್ಯೂಜಿಲ್ಯಾಂಡ್‌ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಗೆಲುವು

210 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ, 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 205 ರನ್‌ ಗಳಿಸಿ ಸೋಲುಂಡಿತು. ತಂಡದ ಪರ ಲಿಜೆಲ್ಲೆ ಲೀ 86 ರನ್‌ ಹಾಗೂ ಲಾರಾ ವೋಲ್ವಾರ್ಡ್ 77 ರನ್‌ಗಳ ಕೊಡುಗೆ ನೀಡಿದರು.  ಶಫಲಿ ಶರ್ಮಾ 14, ಚಿನೆಲ್ಲೆ ಹೆನ್ರಿ 7, ಜೆಮಿಮ ರೋಡ್ರಿಗಸ್‌ 15 ರನ್‌ ಗಳಿಸಿದರು.

ಗುಜರಾತ್‌ ಪರ ರಾಜೇಶ್ವರಿ ಗಾಯಕ್ವಾಡ್‌ 2 ಹಾಗೂ ಸೋಫೀ ಡಿವೈನ್‌ ತಲಾ 2, ಕಶ್ವೀ ಗೌತಮ್‌ 1 ವಿಕೆಟ್‌ ಪಡೆದರು. ಡೆಲ್ಲಿ ಪರ ನಂದನಿ ಶರ್ಮಾ 5 ವಿಕೆಟ್‌ ಪಡೆದು ಮಿಂಚಿದರು. ನಲ್ಲಪುರೆಡ್ಡಿ ಚರನಿ, ಚಿನೆಲ್ಲೆ ಹೆನ್ರಿ ತಲಾ 2 ಹಾಗೂ ಶಫಾಲಿ ಶರ್ಮಾ 1 ವಿಕೆಟ್‌ ಕಬಳಿಸಿದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು