Breaking News

ತನ್ನನ್ನು ಮದುವೆಯಾಗಲಿರುವ ಯುವಕನೊಂದಿಗೆ ರಾತ್ರಿ ಕಳೆದ ಯುವತಿಗೆ ಚಡಿ ಏಟಿನ ಶಿಕ್ಷೆ!

ಇಂಡೋನೇಷ್ಯಾದ ಆಚೆ (Aceh) ಪ್ರಾಂತ್ಯದಲ್ಲಿ ಮನುಷ್ಯ ಸಮುದಾಯವೇ ತಲೆ ತಗ್ಗಿಸುವ ಘಟನೆಯೊಂದು ನಡೆದಿದೆ. ಹೇಳಿ ಕೇಳಿ ಇಂಡೋನೇಷ್ಯಾದ ಈ ಭಾಗದಲ್ಲಿ ಕಟ್ಟುನಿಟ್ಟಾದ ಇಸ್ಲಾಮಿಕ್ ಷರಿಯಾ ಕಾನೂನು ಜಾರಿಯಲ್ಲಿದೆ. 30 ವರ್ಷದ ಮಹಿಳೆಯೊಬ್ಬರು ಪುರುಷನೊಂದಿಗೆ ರಾತ್ರಿ ವೇಳೆ ಏಕಾಂತದ ಸಮಯ ಕಳೆದಿದ್ದಳು (ಅಕ್ರಮ ಸಂಬಂಧದ ಆರೋಪ)ಎಂದು ಆಚೆ ಪ್ರಾಂತ್ಯದ ಕಾನೂನಿನ ಪ್ರಕಾರ, ಮದುವೆಗೆ ಹೊರತಾದ ದೈಹಿಕ ಸಂಬಂಧ ಅಥವಾ ಅತಿಯಾದ ಆಪ್ತತೆ ದೊಡ್ಡ ಅಪರಾಧವಾಗಿದೆ. ಈ ತಪ್ಪು ಮಾಡಿದಕ್ಕೆ ಆಕೆಗೆ ಸಾರ್ವಜನಿಕವಾಗಿ 100 ಚಡಿ ಏಟುಗಳನ್ನು ನೀಡಿ ಶಿಕ್ಷೆ ಕೊಟ್ಟಿದ್ದಾರೆ.

ಮಹಿಳೆ ಸಾರ್ವಜನಿಕವಾಗಿ ಚಡಿ ಏಟುಗಳನ್ನು ನೀಡಿದ್ದು, ಈ ವೇಳೆ ಮಹಿಳೆ ನೋವಿನಿಂದ ಒದ್ದಾಡಿದ್ದಾಳೆ, ಕಿರುಚಾಡಿದ್ದಾಳೆ. ನೋವು ತಡೆಯಲಾಗದೇ ಪ್ರಜ್ಞೆ ತಪ್ಪಿದ್ದಾಳೆ. ಶಿಕ್ಷೆಯ ನಂತರ ಆಕೆಯ ಬೆನ್ನಿನ ಭಾಗ ಉದಿಕೊಂಡಿತು. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಶಿಕ್ಷೆಯನ್ನು ಸಾವಿರಾರು ಜನರ ಸಮ್ಮುಖದಲ್ಲಿ ನೀಡಲಾಯಿತು. ಆಕೆಯೊಂದಿಗೆ ಇದ್ದ ಪುರುಷನಿಗೂ ಶಿಕ್ಷೆ ವಿಧಿಸಲಾಗಿದ್ದರೂ, ಮಹಿಳೆಯ ಸ್ಥಿತಿ ಹೆಚ್ಚು ಗಂಭೀರವಾಗಿದೆ.

Advertisement

ಇದನ್ನೂ ಓದಿ: ದುಬೈಗೆ ಹೋಗುವ ಮುನ್ನ ಒಮ್ಮೆ ಈ ಸ್ಟೋರಿ ಓದಿ! ಸಂಬಳ ಜತೆಗೆ ಈ ಬಗ್ಗೆಯೂ ಗಮನಿಸಿ

ಇಂಡೋನೇಷ್ಯಾದಲ್ಲಿ ಆಚೆ ಮಾತ್ರ ಇಂತಹ ಕಠಿಣ ಷರಿಯಾ ಕಾನೂನುಗಳನ್ನು ಅನುಸರಿಸುವ ಪ್ರಾಂತ್ಯವಾಗಿದೆ. ಇಲ್ಲಿ ಮದ್ಯಪಾನ, ಜೂಜು, ಮತ್ತು ಪರಸ್ತ್ರೀ/ಪುರುಷರ ಸಂಬಂಧಕ್ಕೆ ಸಾರ್ವಜನಿಕವಾಗಿ ಚಡಿ ಏಟು ನೀಡುವ ಶಿಕ್ಷೆ ಇಂದಿಗೂ ಜಾರಿಯಲ್ಲಿದೆ. ಮಾನವ ಹಕ್ಕುಗಳ ಸಂಘಟನೆಗಳು ಈ ಶಿಕ್ಷೆಯ ವಿರುದ್ಧ ದನಿ ಎತ್ತಿದ್ದರೂ, ಅಲ್ಲಿನ ಸ್ಥಳೀಯ ಸರ್ಕಾರ ಇದನ್ನು ತನ್ನ ಸಂಪ್ರದಾಯ ಎಂದು ಸಮರ್ಥಿಸಿಕೊಳ್ಳುತ್ತಿದೆ.

ಮತ್ತಷ್ಟು ಸುದ್ದಿಗಳಿಗಾಗ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು