T20 Worldcup: ಬಲಿಷ್ಠ ಆಸ್ಟ್ರೇಲಿಯಾಗೆ ಶಾಕ್ ನೀಡಿದ ಜಿಂಬಾಬ್ವೆ

ಕೊಲೊಂಬೊ: ಟಿ-20 ವಿಶ್ವಕಪ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾಗೆ ಜಿಂಬಾಬ್ವೆ ಶಾಕ್ ನೀಡಿದೆ. ‘ಬಿ’ ಗುಂಪಿನ ಪಂದ್ಯದಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಬ್ವೆ 24 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿ ಅಚ್ಚರಿಯ ಫಲಿತಾಂಶ ನೀಡಿದೆ.

ಇದನ್ನೂ ಓದಿ: “ನಿಮ್ಮ ಮಗಳನ್ನು ಮದುವೆಯಾಗಿ ಮತಾಂತರ ಮಾಡುತ್ತೇನೆ”: ಹಿಂದೂ ಕುಟುಂಬಕ್ಕೆ ಬೆದರಿಕೆ ಹಾಕಿದ ಮುಸ್ಲಿಂ ವ್ಯಕ್ತಿ

Advertisement

ಇಲ್ಲಿನ‌ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ಪರ ಬ್ರಿಯಾನ್ ಬೆನ್ನಟ್ ಅಜೇಯ 64, ತಡಿವನಶೆ ಮರುಮನಿ ಮತ್ತು ರೆಯಾನ್ ಬರ್ಲ್ ತಲಾ 35 ರನ್ ಮತ್ತು ನಾಯಕ ಸಿಕಂದರ್ ರಾಜಾ ಅಜೇಯ 25 ರನ್ ಗಳಿಸಿದರು‌. ಜಿಂಬಾಬ್ವೆ ತಂಡ ನಿಗದಿತ 20 ಓವರ್‌ಗಳಲ್ಲಿ 169 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

ಬಲಿಷ್ಠ ಆಸ್ಟ್ರೇಲಿಯಾ ಒಂದು ಹಂತದಲ್ಲಿ ಸುಲಭವಾಗಿ ಗುರಿ ಬೆನ್ನತ್ತನಹುದು ಎಂದು ಭಾವಿಸಲಾಗಿತ್ತು. ಆದರೆ ಜಿಂಬಾಬ್ವೆ ಬೌಲರ್‌ಗಳ ಕರಾರುವಕ್ಕು ದಾಳಿಗೆ ಸಿಲುಕಿ 19.3 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 146 ರನ್ ಗಳಿಸಿ 23 ರನ್‌ಗಳ ಅಂತರದಿಂದ ಸೋಲು ಕಂಡಿತು‌.

Advertisement

ಆಸ್ಟ್ರೇಲಿಯಾ ಪರ ಮ್ಯಾಟ್ ರಿನ್ಶ 65, ಗ್ಲೆನ್ ಮ್ಯಾಕ್ಸ್ ವೆಲ್ 31, ಟ್ರಾವಿಸ್ ಹೆಡ್ 17 ರನ್ ಗಳಿಸಿ ಕೊಂಚ ಮಟ್ಟಿನ ಪ್ರತಿರೋಧ ಒಡ್ಡಿದರು. ಜಿಂಬಾಬ್ವೆ ಪರ ಬ್ಲೆಸಿಂಗ್ ಮುಜರ್ಬಾನಿ 4, ಬ್ರಾಡ್ ಈವನ್ಸ್ 3, ವೆಲ್ಲಿಂಗ್ಟನ್ ಮಸಕಡ್ಜ ಮತ್ತು ರಾಯನ್ ಬರ್ಲ್ ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು