Breaking News

ಬ್ಯಾಂಕ್ ಆಫ್ ಬರೋಡಾದಿಂದ 700 ಮಿಲಿಯನ್ ಸಂಗ್ರಹ: ಅಂತಾರಾಷ್ಟ್ರೀಯ ಬಾಂಡ್ ಇಶ್ಯೂಗೆ ಜಾಗತಿಕ ಹೂಡಿಕೆದಾರರ ಬಲವಾದ ಬೆಂಬಲ

ಮಂಗಳೂರು: ಭಾರತದ ಪ್ರಮುಖ ಅಂತಾರಾಷ್ಟ್ರೀಯ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (Bank of Baroda), ತನ್ನ 4 ಬಿಲಿಯನ್ ಅಮೆರಿಕನ್ ಡಾಲರ್ Medium-Term Note ಕಾರ್ಯಕ್ರಮದಡಿ ದ್ವಿ-ಟ್ರಾಂಚ್ (Two-Tranch) ವಿದೇಶಿ ಬಾಂಡ್ ಇಶ್ಯೂ ಮೂಲಕ ಬರೋಬ್ಬರಿ 700 ಮಿಲಿಯನ್ ಅಮೆರಿಕನ್ ಡಾಲರ್ (USD 700 Million) ಬಂಡವಾಳ ಸಂಗ್ರಹಿಸಿದೆ.

ಗುಜರಾತ್‌ನ ಗಿಫ್ಟ್ ಸಿಟಿಯಲ್ಲಿ (GIFT City) ಇರುವ ಬ್ಯಾಂಕ್‌ನ ‘ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ ಬ್ಯಾಂಕಿಂಗ್ ಯುನಿಟ್’ (IFSC) ಮೂಲಕ ಈ ಬಾಂಡ್ ಇಶ್ಯೂಗಳನ್ನು ಕೈಗೊಳ್ಳಲಾಗಿತ್ತು. ಜಾಗತಿಕ ಹೂಡಿಕೆದಾರರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆರ್ಡರ್ ಬುಕ್ ಗರಿಷ್ಠ 2.67 ಬಿಲಿಯನ್ ಡಾಲರ್ ತಲುಪಿದೆ. ಇದು ಬ್ಯಾಂಕ್ ನಿರೀಕ್ಷಿಸಿದ್ದ ಅಂತಿಮ ಗಾತ್ರಕ್ಕಿಂತ ಸುಮಾರು 3.8 ಪಟ್ಟು ಹೆಚ್ಚಿನ ಬೇಡಿಕೆಯಾಗಿದೆ.

400 ಮಿಲಿಯನ್ ಡಾಲರ್ ಹಣವನ್ನು ವಾರ್ಷಿಕ 5.114% ಕೂಪನ್ ದರದಲ್ಲಿ ಸಂಗ್ರಹಿಸಲಾಗಿದೆ (3 ವರ್ಷದ US Treasury ದರದ ಮೇಲೆ 90 ಬೇಸಿಸ್ ಪಾಯಿಂಟ್‌ಗಳ ಸ್ಪ್ರೆಡ್).300 ಮಿಲಿಯನ್ ಡಾಲರ್ ಹಣವನ್ನು ವಾರ್ಷಿಕ 5.318% ಕೂಪನ್ ದರದಲ್ಲಿ ಸಂಗ್ರಹಿಸಲಾಗಿದೆ (5 ವರ್ಷದ US Treasury ದರದ ಮೇಲೆ 100 ಬೇಸಿಸ್ ಪಾಯಿಂಟ್‌ಗಳ ಸ್ಪ್ರೆಡ್).

ಹೂಡಿಕೆದಾರರ ಭಾರಿ ಬೇಡಿಕೆಯಿಂದಾಗಿ ಬ್ಯಾಂಕ್ ತನ್ನ ಆರಂಭಿಕ ಬೆಲೆಗಿಂತ (Pricing Guidance) ಗಮನಾರ್ಹವಾಗಿ ಬೆಲೆಯನ್ನು ತಗ್ಗಿಸಲು ಸಾಧ್ಯವಾಗಿದ್ದು, ತನ್ನ ಬಾಂಡ್ ಇತಿಹಾಸದಲ್ಲೇ US Treasuryಗೆ ಹೋಲಿಸಿದರೆ ಅತಿಕಡಿಮೆ ಸ್ಪ್ರೆಡ್ ಸಾಧಿಸಿದೆ.ಈ ಬಾಂಡ್‌ಗಳ ಸೆಟಲ್ಮೆಂಟ್ ಆಗಸ್ಟ್ 20, 2026 ರಂದು ನಡೆಯಲಿದ್ದು, ಮೆಚುರಿಟಿ ಅವಧಿ ಕ್ರಮವಾಗಿ ಆಗಸ್ಟ್ 2029 ಮತ್ತು ಆಗಸ್ಟ್ 2031 ಆಗಿರಲಿದೆ. ಇವುಗಳನ್ನು ಇಂಡಿಯಾ ಇಂಟರ್‌ನ್ಯಾಷನಲ್ ಎಕ್ಸ್‌ಚೇಂಜ್ (India INX), ಎನ್‌ಎಸ್‌ಇ ಐಎಕ್ಸ್‌ (NSE-IX) ಹಾಗೂ ಸಿಂಗಾಪುರ ಎಕ್ಸ್‌ಚೇಂಜ್‌ಗಳಲ್ಲಿ (SGX-ST) ಲಿಸ್ಟ್ ಮಾಡಲಾಗುತ್ತದೆ.

“ನಮ್ಮ 700 ಮಿಲಿಯನ್ ಬಾಂಡ್ ಇಶ್ಯೂಗೆ ದೊರೆತ ಈ ಭಾರಿ ಪ್ರತಿಕ್ರಿಯೆಯು ಬ್ಯಾಂಕ್ ಆಫ್ ಬರೋಡಾದ ಹಣಕಾಸಿನ ಸ್ಥಿರತೆ, ಆಡಳಿತ ಹಾಗೂ ಸ್ಪಷ್ಟ ದೃಷ್ಟಿಕೋನದ ಮೇಲೆ ಜಾಗತಿಕ ಮಾರುಕಟ್ಟೆ ಹೊಂದಿರುವ ಆಳವಾದ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಈ ಯಶಸ್ಸು ನಮ್ಮ ನಿಧಿಯ ಮೂಲವನ್ನು (Funding Base) ಮತ್ತಷ್ಟು ವೈವಿಧ್ಯಗೊಳಿಸಲು ಮತ್ತು ದೀರ್ಘಕಾಲೀನ ಬೆಳವಣಿಗೆಗೆ ಶಕ್ತಿ ತುಂಬಲು ನೆರವಾಗಲಿದೆ.” ಎಂದು ಡಾ. ದೇವದತ್ತ ಚಂದ್, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಇಒ, ಬ್ಯಾಂಕ್ ಆಫ್ ಬರೋಡಾ ಹೇಳಿದ್ದಾರೆ.

ಇದನ್ನೂ ಓದಿ: ಇಪಿಎಫ್ ಖಾತೆದಾರರೇ ಎಚ್ಚರ: ಈ ನಿಯಮ ಪಾಲಿಸದಿದ್ದರೆ ನಿವೃತ್ತಿ ಹಣಕ್ಕೆ ಸಿಗುವುದಿಲ್ಲ ಬಡ್ಡಿ

1908 ಜುಲೈ 20 ರಂದು ಸರ್ ಮಹಾರಾಜ ಸಯಾಜಿರಾವ್ ಗಾಯಕ್ವಾಡ್ (III) ಅವರಿಂದ ಸ್ಥಾಪಿತವಾದ ಬ್ಯಾಂಕ್ ಆಫ್ ಬರೋಡಾದಲ್ಲಿ ಶೇಕಡಾ 63.97 ರಷ್ಟು ಪಾಲು ಭಾರತ ಸರ್ಕಾರದ ಸ್ವಾಮ್ಯದಲ್ಲಿದೆ. 5 ಖಂಡಗಳ 15 ದೇಶಗಳಲ್ಲಿ ಸುಮಾರು 65,000 ಸಂಪರ್ಕ ಕೇಂದ್ರಗಳನ್ನು ಹೊಂದಿರುವ ಬ್ಯಾಂಕ್, ಜಾಗತಿಕವಾಗಿ 180 ಮಿಲಿಯನ್‌ಗೂ ಹೆಚ್ಚು ಗ್ರಾಹಕರಿಗೆ ಅತ್ಯಾಧುನಿಕ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *