ಸೋಮವಾರದಿಂದ 3ದಿನ ಬ್ಯಾಂಕ್ ಬಂದ್: ಭಾನುವಾರದಂದೇ ಎಲ್ಲ ವ್ಯವಹಾರಗಳನ್ನು ಮುಗಿಸಿಕೊಳ್ಳಲಿ

ಬೆಂಗಳೂರು: ದೇಶಾದ್ಯಂತ ವಿವಿಧ ಬ್ಯಾಂಕ್ ಉದ್ಯೋಗಿಗಳ ಸಂಘಟನೆಗಳು ಸೆಪ್ಟೆಂಬರ್ 28 ರಿಂದ 30ರವರೆಗೆ (2026) ಮೂರು ದಿನಗಳ ಕಾಲ ಸರಣಿ ಬ್ಯಾಂಕ್ ಮುಷ್ಕರಕ್ಕೆ (Bank Strike) ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ದೇಶದ ಅತಿದೊಡ್ಡ ಬ್ಯಾಂಕ್‌ಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಕೆನರಾ ಬ್ಯಾಂಕ್ (Canara Bank) ಹಾಗೂ ಬ್ಯಾಂಕ್ ಆಫ್ ಬರೋಡಾ (Bank of Baroda) ತಮ್ಮ ಖಾತೆದಾರರಿಗೆ ಮಹತ್ವದ ಮುನ್ನೆಚ್ಚರಿಕೆ ಸಂದೇಶಗಳನ್ನು ರವಾನಿಸಿವೆ.

ಮೂರು ದಿನಗಳ ಕಾಲ ಶಾಖೆಗಳಲ್ಲಿ ನೇರ ವಹಿವಾಟು ವ್ಯತ್ಯಯವಾಗುವ ಸಾಧ್ಯತೆಯಿರುವುದರಿಂದ, ಸಾರ್ವಜನಿಕರು ಹಾಗೂ ಗ್ರಾಹಕರು ತಮ್ಮ ತುರ್ತು ಬ್ಯಾಂಕಿಂಗ್ ಕೆಲಸಗಳನ್ನು ಮೊದಲೇ ಪೂರ್ಣಗೊಳಿಸಿಕೊಳ್ಳುವಂತೆ ಬ್ಯಾಂಕ್‌ಗಳು ಮನವಿ ಮಾಡಿವೆ. ಮುಷ್ಕರದ ಅವಧಿಯಲ್ಲಿ ಗ್ರಾಹಕರಿಗೆ ತೊಂದರೆಯಾಗದಂತೆ ತಡೆಯಲು ಡಿಜಿಟಲ್ ಹಾಗೂ ಸ್ವಯಂ ಸೇವಾ ವೇದಿಕೆಗಳನ್ನು (Self-Service Channels) ಬಳಸಿಕೊಳ್ಳುವಂತೆ ಬ್ಯಾಂಕ್‌ಗಳು ಕೋರಿವೆ:

ಮುಷ್ಕರದ ದಿನಗಳಲ್ಲಿ ಎಟಿಎಂ , ಎಡಿಡಬ್ಲ್ಯೂಎಂ , ಯೋನೋ ಆಪ್, ಇಂಟರ್ನೆಟ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಹಾಗೂ ಯುಪಿಐ ಸೇವೆಗಳು ಲಭ್ಯವಿರಲಿವೆ ಎಂದು ತಿಳಿಸಿದೆ ‘ಬಾಬ್ ವರ್ಲ್ಡ್’ , ವಾಟ್ಸಾಪ್ ಬ್ಯಾಂಕಿಂಗ್, ಯುಪಿಐ ಮತ್ತು ಕ್ಯಾಶ್ ರೀಸೈಕ್ಲರ್ ಯಂತ್ರಗಳನ್ನು ಬಳಸಲು ಸಲಹೆ ನೀಡಿದೆ. ಕೆನರಾ ‘ai1Pe’ ಯುಪಿಐ ಆಪ್, ಮೊಬೈಲ್ ಬ್ಯಾಂಕಿಂಗ್, ಬ್ಯಾಂಕಿಂಗ್ ಕರೆಸ್ಪಾಂಡೆಂಟ್‌ಗಳು ಹಾಗೂ ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳು ತಡೆರಹಿತವಾಗಿ ಸಿಗಲಿವೆ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಅಕ್ಟೋಬರ್ 1ರಿಂದ ಸಬ್ಸಿಡಿ LPGಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ; ಗ್ರಾಹಕರಿಗೆ ಮಹತ್ವದ ಸೂಚನೆ

ವಾರಾಂತ್ಯದ ಶನಿವಾರ ಹಾಗೂ ಭಾನುವಾರದ ರಜೆಯ ಜೊತೆಗೆ ಸೆಪ್ಟೆಂಬರ್ 28 ರಿಂದ 30ರವರೆಗಿನ ಮುಷ್ಕರ ಸೇರಿದರೆ, ಸತತ 5 ದಿನಗಳ ಕಾಲ ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳು ಸಂಪೂರ್ಣವಾಗಿ ಸ್ತಬ್ಧವಾಗುವ ಆತಂಕ ಮೂಡಿತ್ತು. ಆದರೆ ಗ್ರಾಹಕರಿಗಾಗುವ ಭಾರಿ ಅನನುಕೂಲವನ್ನು ತಪ್ಪಿಸಲು ಕೇಂದ್ರ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಹತ್ವದ ನಿರ್ಧಾರ ಕೈಗೊಂಡಿವೆ. ಇದರ ಪ್ರಕಾರ, ಸೆಪ್ಟೆಂಬರ್ 27ರ ಭಾನುವಾರದಂದು ದೇಶದ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಆರ್‌ಆರ್‌ಬಿಗಳು ಹಾಗೂ ಕರೆನ್ಸಿ ಚೆಸ್ಟ್‌ಗಳು ಸಾಮಾನ್ಯ ದಿನಗಳಂತೆ ಕಾರ್ಯನಿರ್ವಹಿಸಲಿವೆ. ಹೀಗಾಗಿ ಸಾರ್ವಜನಿಕರು ಸೆಪ್ಟೆಂಬರ್ 27ರ ಭಾನುವಾರವೇ ತಮ್ಮ ನೇರ ಬ್ಯಾಂಕ್ ಶಾಖೆಯ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬಹುದಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *