Beauty : ಕಣ್ಣಿನ ಕೆಳಭಾಗದ ಚರ್ಮದ ಆರೈಕೆಗೆ ಅಂಡರ್-ಐ ಪ್ಯಾಚ್ ಬೆಸ್ಟ್

ಫ್ಯಾಶನ್ : ಅಂಡರ್ ಐ ಪ್ಯಾಚ್ ಬ್ಯೂಟಿ (Under-Eye Patch Beauty) ಅಂದರೆ ಕಣ್ಣಿನ ಕೆಳಭಾಗದ ಚರ್ಮದ ಆರೈಕೆಗಾಗಿ ಬಳಸುವ ಜೆಲ್ ಅಥವಾ ಸಿಲಿಕೋನ್ ಪ್ಯಾಚ್‌ಗಳ ಮೂಲಕ ತಕ್ಷಣದ ಸೌಂದರ್ಯ ಮತ್ತು ತಾಜಾತನ ಪಡೆಯುವ ಟ್ರೆಂಡ್ ಆಗಿದೆ.

ಅಂಡರ್-ಐ ಪ್ಯಾಚ್‌ಗಳು ನಿಶ್ಯಬ್ದವಾಗಿ ಬಾಲಿವುಡ್‌ನ ಅತ್ಯಂತ ಜನಪ್ರಿಯ ಬ್ಯೂಟಿ ಆಕ್ಸೆಸರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದಕ್ಕೆ ಕಾರಣ ಸರಳ ಅಂತ ಹೇಳ್ಬೋದು. ಹೌದು… ಇವು ಸ್ವಯಂ ಆರೈಕೆ ಅನ್ನೋ ಫೀಲಿಂಗ್ ಕೊಡುತ್ತವೆ ಮತ್ತು ಎಂಟು ಗಂಟೆ ನಿದ್ದೆ ಮಾಡಿದ್ದೇನೆ ಅನ್ನುವ ತಾಜಾತನದ ಲುಕ್ ಅನ್ನು ತಕ್ಷಣ ಕೊಡುತ್ತವೆ.

Advertisement

ಅಂಡರ್ ಐ ಪ್ಯಾಚ್ ಗಳು ಮುಖ್ಯವಾಗಿ, ಡಾರ್ಕ್ ಸರ್ಕಲ್ ಕಡಿಮೆ ಮಾಡುತ್ತವೆ, ಚರ್ಮಕ್ಕೆ ತೇವಾಂಶ ನೀಡುವುದು, ತಕ್ಷಣ ಫ್ರೆಶ್ ಲುಕ್ ನ ಅನುಭವವಾಗುತ್ತದೆ. ಈ ಪ್ಯಾಚ್‌ಗಳಲ್ಲಿ ಹೈಯಾಲುರಾನಿಕ್ ಆಸಿಡ್, ನೈಸಿನಮೈಡ್, ರೆಟಿನಾಲ್ ಮುಂತಾದ ಉಪಯುಕ್ತ ಅಂಶಗಳು ಸೇರಿರುತ್ತವೆ. ಇದರಿಂದ ಕಣ್ಣಿನ ಕೆಳಭಾಗದ ಚರ್ಮಕ್ಕೆ ಉತ್ತಮ ತೇವಾಂಶ ಸಿಗುತ್ತದೆ, ಡಾರ್ಕ್ ಸರ್ಕಲ್‌ಗಳು ಕಡಿಮೆಯಾಗುತ್ತವೆ ಮತ್ತು ಮುಖ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. ಅತ್ಯುತ್ತಮ ವಿಷಯವೇನೆಂದರೆ ; ಇದರ ಬಳಕೆ ತುಂಬಾ ಸುಲಭ ! ಹಾಗಾಗಿ, ಅನೇಕ ಸೆಲೆಬ್ರಿಟಿಗಳು ತಮ್ಮ ಗ್ಲೋ ರೂಟೀನ್‌ನ ಭಾಗವಾಗಿ ಅಂಡರ್-ಐ ಪ್ಯಾಚ್‌ಗಳನ್ನು ಬಳಸುತ್ತಿರುವುದು ಈಗ ಸಾಮಾನ್ಯ ದೃಶ್ಯವಾಗಿದೆ.

ಇದನ್ನು ಉಪಯೋಗಿಸುವ ಮುನ್ನ ಚೆನ್ನಾಗಿ ಮುಖ ತೊಳೆಯಬೇಕು. ನಂತರ ಪ್ಯಾಚ್‌ಗಳನ್ನು ಕಣ್ಣಿನ ಕೆಳಗೆ ಅಂಟಿಸಿ, 10–20 ನಿಮಿಷ ಬಿಡಿ ಆನಂತರ ತೆಗೆದು ಉಳಿದ ಸೀರಂ ಅನ್ನು ಸಣ್ಣದಾಗಿ ಮಸಾಜ್ ಮಾಡಿ. ಇತ್ತೀಚೆಗೆ ಬಾಲಿವುಡ್ ನಟಿಯರಿಂದ ಹಿಡಿದು ಸಾಮಾನ್ಯ ಜನರವರೆಗೆ “quick glow”ಗಾಗಿ ಇದನ್ನು ಹೆಚ್ಚಾಗಿ ಬಳಸುತ್ತಿದ್ದಾರೆ – ಅದಕ್ಕೇ ಇದನ್ನು Under-Eye Patch Beauty Trend ಎಂದು ಕರೆಯುತ್ತಾರೆ.

Advertisement

ಇದನ್ನೂ ಓದಿ : Bangalore: ಮದುವೆಯಾದರೆ ನಿನ್ನನ್ನೇ ಆಗುತ್ತೇನೆ!! ಮುಂದೇನಾಯ್ತು ನೋಡಿ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು