Breaking News

ಪ್ರಧಾನಿ ಮೋದಿಗೆ ನೀಡಲು ತಂದಿದ್ದ ಬೆಲ್ಜಿಯಂ ಚಾಕೊಲೇಟ್ ‘ಇಂಡಿಯಾ ಗೇಟ್’ ಮಾರ್ಗಮಧ್ಯೆ ಭಗ್ನ

ದೆಹಲಿ :ಭಾರತ ಪ್ರವಾಸದಲ್ಲಿರುವ ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೇವರ್ (Bart De Wever), ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನೀಡಲು ತಂದಿದ್ದ ಅಪರೂಪದ ಹಾಗೂ ಕಲಾತ್ಮಕ ಉಡುಗೊರೆಯೊಂದು ದಾರಿಮಧ್ಯದಲ್ಲೇ ಮುರಿದುಬಿದ್ದ ವಿಚಿತ್ರ ಹಾಗೂ ಸ್ವಾರಸ್ಯಕರ ಘಟನೆ ನಡೆದಿದೆ. ಬೆಲ್ಜಿಯಂನ ಪ್ರಸಿದ್ಧ ಚಾಕೊಲೇಟ್‌ನಿಂದಲೇ ಸಂಪೂರ್ಣವಾಗಿ ನಿರ್ಮಿಸಲಾಗಿದ್ದ ‘ಇಂಡಿಯಾ ಗೇಟ್’ (India Gate) ಮಾದರಿಯ ಕಲಾಕೃತಿಯು ದೆಹಲಿಗೆ ತಲುಪುವಷ್ಟರಲ್ಲಿ ಹಾನಿಗೊಳಗಾಗಿದೆ.

ಪ್ರಧಾನಿ ಮೋದಿ ಅವರಿಗೆ ಉಡುಗೊರೆ ನೀಡಲು ಬೆಲ್ಜಿಯಂ ಮೂಲದ ಅತ್ಯುತ್ತಮ ಚಾಕೊಲೇಟ್ ಬಳಸಿ ಬೃಹತ್ ‘ಇಂಡಿಯಾ ಗೇಟ್’ ನಿರ್ಮಿಸಲಾಗಿತ್ತು. ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ತಮಾಷೆಯಾಗಿ ಮಾತನಾಡಿದ ಬೆಲ್ಜಿಯಂ ಪ್ರಧಾನಿ, “ನೈಜ ಇಂಡಿಯಾ ಗೇಟ್ ಶತಮಾನದಿಂದ ಗಟ್ಟಿಯಾಗಿ ನಿಂತಿದೆ. ಆದರೆ ನಮ್ಮ ಚಾಕೊಲೇಟ್ ಇಂಡಿಯಾ ಗೇಟ್ ಪ್ರಯಾಣದ ಕಾವು ತಾಳಲಾರದೆ ಹಾನಿಯಾಗಿದೆ. ರಾಜತಾಂತ್ರಿಕ ಸಂಬಂಧಕ್ಕೆ ಚಾಕೊಲೇಟ್ ಒಳ್ಳೆಯದು, ಆದರೆ ರಾಜತಾಂತ್ರಿಕ ಪ್ರಯಾಣಕ್ಕಲ್ಲ ಎಂಬುದು ತಿಳಿಯಿತು!” ಎಂದು ಹೇಳಿದರು.

ಇದನ್ನೂ ಓದಿ: ಸವಣಾಲು ಮತ್ತು ಅಚ್ಲಾಡಿಯಲ್ಲಿ ಬೋನಿಗೆ ಬಿದ್ದ ಚಿರತೆಗಳು: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಹಾನಿಗೊಳಗಾದ ಚಾಕೊಲೇಟ್ ಕಲಾಕೃತಿಯ ಚಿತ್ರವನ್ನು ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿರುವ ಭಾರತದಲ್ಲಿನ ಬೆಲ್ಜಿಯಂ ರಾಯಭಾರ ಕಚೇರಿ, “ಮುಂದಿನ ಬಾರಿ ಖಂಡಿತವಾಗಿಯೂ ಈ ಸಿಹಿ ಉಡುಗೊರೆಯನ್ನು ಪ್ರಧಾನಿ ಮೋದಿ ಅವರಿಗೆ ತಲುಪಿಸಲಾಗುವುದು” ಎಂದು ಸ್ಪಷ್ಟಪಡಿಸಿದೆ.ವಿಶೇಷ ಉಡುಗೊರೆಗಾಗಿ ‘ಇಂಡಿಯಾ ಗೇಟ್’ ಅನ್ನೇ ಆಯ್ಕೆ ಮಾಡಿಕೊಂಡಿದ್ದರ ಹಿಂದೆ ಆಳವಾದ ಐತಿಹಾಸಿಕ ಬಾಂಧವ್ಯವಿದೆ ಎಂದು ಬಾರ್ಟ್ ಡಿ ವೇವರ್ ತಿಳಿಸಿದ್ದಾರೆ

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *