ಬೆಂಗಳೂರು: ಸೋಶಿಯಲ್ ಮೀಡಿಯಾ ಸ್ಟಾರ್ ಹಾಗೂ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾಗಿರುವ ಮಲ್ಲಮ್ಮ (Mallama) ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದು ಇಂದು ತಮ್ಮ ಸ್ವಂತ ಪರಿಶ್ರಮದ ಮೂಲಕ ಹೊಸ ಕಾರೊಂದನ್ನು ಖರೀದಿಸಿ, ಸಾಧನೆಯ ಮುಕುಟಕ್ಕೆ ಹೊಸ ಗರಿಯನ್ನು ಸೇರಿಸಿಕೊಂಡಿದ್ದಾರೆ.
ತಮ್ಮ ಜೀವನದ ಈ ಅತ್ಯಂತ ಸಂತಸದ ಕ್ಷಣವನ್ನು ಮಲ್ಲಮ್ಮ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಸಂಭ್ರಮಿಸಿದ್ದಾರೆ. ಅವರು ‘ಮಾರುತಿ ಸುಜುಕಿ ಡಿಸೈರ್ ಟೂರ್’ (Maruti Suzuki Dzire Tour) ಕಾರನ್ನು ಖರೀದಿಸಿದ್ದು, ಶೋರೂಮ್‌ನಲ್ಲಿ ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಕೇಕ್ ಕತ್ತರಿಸಿ ಹೊಸ ಕಾರಿನ ಕೀ ಸ್ವೀಕರಿಸಿರುವ ಇವರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಇಲ್ಲಿದೆ ನೋಡಿ ವಿಡಿಯೋ:
View this post on Instagram
ಮಲ್ಲಮ್ಮ ಅವರ ಈ ಸಾಧನೆಯ ಹಿಂದೆ ದೊಡ್ಡ ಪರಿಶ್ರಮ ಅಡಗಿದೆ. ಆರಂಭದಲ್ಲಿ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ಗಳಲ್ಲಿ ತಮ್ಮ ವಿಶಿಷ್ಟ ಕಂಟೆಂಟ್, ಹಳ್ಳಿ ಸೊಗಡಿನ ನಿಷ್ಕಲ್ಮಷ ಮಾತುಗಳು ಹಾಗೂ ರೀಲ್ಸ್‌ಗಳ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದರು. ಇವರ ಅದ್ಭುತ ಜನಪ್ರಿಯತೆಯನ್ನು ಗುರುತಿಸಿ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ಗೆ ಸ್ಪರ್ಧಿಯಾಗಿ ಬರುವ ಸುವರ್ಣ ಅವಕಾಶ ಸಿಕ್ಕಿತು. ಬಿಗ್ ಬಾಸ್ ಮನೆಯಲ್ಲೂ ತಮ್ಮ ನೈಜ ವ್ಯಕ್ತಿತ್ವ, ಮುಗ್ಧತೆ ಹಾಗೂ ಚುರುಕಾದ ಆಟದ ಮೂಲಕ ಕೋಟ್ಯಂತರ ಕನ್ನಡಿಗರ ಮನ ಗೆದ್ದು ದೊಡ್ಡ ಮಟ್ಟದ ಹೆಸರು ಮಾಡಿದರು.
ಇದನ್ನೂ ಓದಿ: ಮದುವೆಯಾದ ನಾಲ್ಕೇ ವರ್ಷಕ್ಕೆ ದೂರಾಗಲಿದ್ದಾರೆ ನಟಿ ಶುಭಾ ಪೂಂಜಾ-ಸುಮಂತ್ ದಂಪತಿ!; ಕೋರ್ಟ್ ಮೆಟ್ಟಿಲೇರಿದ ಜೋಡಿ!
ಯಾವುದೇ ಗಾಡ್‌ಫಾದರ್ ಇಲ್ಲದೆ, ಕೇವಲ ಸ್ವಂತ ಪ್ರತಿಭೆ ಮತ್ತು ಪರಿಶ್ರಮದಿಂದ ಇಂದು ಹೊಸ ಕಾರು ಖರೀದಿಸಿರುವ ಮಲ್ಲಮ್ಮ ಅವರ ಲೈಫ್ ಜರ್ನಿ ನಿಜಕ್ಕೂ ಅನೇಕರಿಗೆ ಪ್ರೇರಣೆಯಾಗಿದೆ. ಸದ್ಯ ಮಲ್ಲಮ್ಮ ಅವರ ಸಾಧನೆಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ಸಹ-ಸ್ಪರ್ಧಿಗಳಿಂದ ವ್ಯಾಪಕ ಪ್ರಶಂಸೆ ಮತ್ತು ಹಾರೈಕೆಗಳ ಮಹಾಪೂರವೇ ಹರಿದುಬರುತ್ತಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


