ಒರಾಯ್: ಈಜುಕೊಳದಲ್ಲಿ (Swimming Pool) ಹಾಯಾಗಿ ಈಜಾಡುತ್ತಿದ್ದ ಯುವಕನೊಬ್ಬನ ಒಳ ಉಡುಪಿನ (Underwear) ಒಳಗೆ ಜೀವಂತ ಹಾವೊಂದು ನುಗ್ಗಿರುವ ಅತ್ಯಂತ ವಿಲಕ್ಷಣ ಹಾಗೂ ಮೈ ಜುಂ ಎನ್ನಿಸುವ ಘಟನೆಯೊಂದು ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಒರಾಯ್ ನಗರದಲ್ಲಿ ನಡೆದಿದೆ. ಅದೃಷ್ಟವಶಾತ್ ಹಾವು ಕಚ್ಚದೇ ಇರುವುದರಿಂದ ಹಾಗೂ ಸ್ನೇಹಿತರ ಸಮಯಪ್ರಜ್ಞೆಯಿಂದಾಗಿ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಇಡೀ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ವರದಿಗಳ ಪ್ರಕಾರ, ಯುವಕ ಈಜುಕೊಳದ ನೀರಿನಲ್ಲಿ ಮಜಾ ಮಾಡುತ್ತಿದ್ದಾಗ ಹಾವೊಂದು ನೀರಿನ ಮೂಲಕ ಅವನ ಅಂಡರ್‌ವೇರ್ ಒಳಗೆ ನುಗ್ಗಿದೆ. ಒಳಗೆ ಏನೋ ಹರಿದಾಡುತ್ತಿರುವುದನ್ನು ಗಮನಿಸಿದ ಯುವಕ ತೀವ್ರ ಆತಂಕಕ್ಕೆ ಒಳಗಾಗಿದ್ದಾನೆ. ಆತುರದಲ್ಲಿ ಏನಾದರೂ ಮಾಡಲು ಹೋದರೆ ಹಾವು ಕಚ್ಚಬಹುದು ಎಂಬ ಭಯದಿಂದ ಯುವಕ ಈಜುಕೊಳದ ನಡುವೆಯೇ ಅಲುಗಾಡದೆ ನಿಂತುಬಿಟ್ಟಿದ್ದಾನೆ. ಈಜುಕೊಳದಲ್ಲಿದ್ದ ಇತರ ಜನರಿಗೂ ವಿಷಯ ತಿಳಿಯುತ್ತಿದ್ದಂತೆ ಅಲ್ಲಿ ಕೆಲಕಾಲ ಗದ್ದಲ ಹಾಗೂ ಆಫ್ರಾತಫ್ರಿ ವಾತಾವರಣ ನಿರ್ಮಾಣವಾಯಿತು.

ಇಲ್ಲಿದೆ ನೋಡಿ ವಿಡಿಯೋ:
Snake Found Inside Swimmer’s Underwear at UP Pool, Friends Help Avoid Mishap
Uttar Pradesh: A bizarre incident was reported from Orai, where a snake reportedly entered a young man’s underwear while he was swimming in a pool.
According to reports, the snake did not bite the… pic.twitter.com/PTcI2jYyMz
— Atulkrishan (@iAtulKrishan1) June 25, 2026
ಯುವಕ ತೀವ್ರವಾಗಿ ಗಾಬರಿಗೊಂಡಿದ್ದರೂ ಆತನ ಸ್ನೇಹಿತರು ಮಾತ್ರ ಧೈರ್ಯ ಹಾಗೂ ಜಾಣ್ಮೆ ಪ್ರದರ್ಶಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ನೇಹಿತರು, ಬಟ್ಟೆಯ ಹೊರಭಾಗದಿಂದಲೇ ಹಾವನ್ನು ಗಟ್ಟಿಯಾಗಿ ಹಿಡಿದುಕೊಂಡರು. ಹಾವು ಒಳಗೆ ಅಲುಗಾಡದಂತೆ ಹಾಗೂ ಯುವಕನಿಗೆ ಕಚ್ಚದಂತೆ ನಿಯಂತ್ರಿಸಿ, ಅತ್ಯಂತ ಜಾಗರೂಕತೆಯಿಂದ ಅದನ್ನು ಬಟ್ಟೆಯಿಂದ ಹೊರತೆಗೆಯಲು ಯಶಸ್ವಿಯಾದರು. ಸ್ನೇಹಿತರ ಈ ಸಾಹಸದಿಂದಾಗಿ ದೊಡ್ಡ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.
ಇದನ್ನೂ ಓದಿ: ಬಿಕಿನಿ ಧರಿಸಿ ಫೋಟೋ ಹಾಕಲು ಹೆದರುವ ಭಾರತೀಯ ಮಹಿಳೆಯರಿಗೆ ಇನ್‌ಫ್ಲುಯೆನ್ಸರ್ ರೀಟಾ ಖಡಕ್ ಸಂದೇಶ
ಈ ವಿಲಕ್ಷಣ ಘಟನೆಯನ್ನು ನೋಡಲು ಈಜುಕೊಳದ ಸುತ್ತ ಭಾರಿ ಜನಸ್ತೋಮವೇ ನೆರೆದಿತ್ತು. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಲೀಕ್ ಆಗುತ್ತಿದ್ದಂತೆ ನೆಟ್ಟಿಗರು ಆಘಾತ ವ್ಯಕ್ತಪಡಿಸುತ್ತಿದ್ದು, ಯುವಕ ಯಾವುದೇ ಗಾಯವಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.
ವೈರಲ್ ಸುದ್ದಿಗನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

