ಜರ್ಮನಿಯ ಐಷಾರಾಮಿ ಕಾರು ತಯಾರಕ BMW, ಭಾರತದಲ್ಲಿ ತನ್ನ ನವೀಕೃತ BMW 7 Series ಹಾಗೂ BMW i7 ಮಾದರಿಗಳ ಬುಕ್ಕಿಂಗ್ ಅನ್ನು ಅಧಿಕೃತವಾಗಿ ಆರಂಭಿಸಿದೆ. ಗ್ರಾಹಕರು ದೇಶದ BMW ಡೀಲರ್ಶಿಪ್ಗಳ ಮೂಲಕ ಅಥವಾ BMW ಇಂಡಿಯಾ ವೆಬ್ಸೈಟ್ನಲ್ಲಿ ಆಸಕ್ತಿ ನೋಂದಾಯಿಸಿ ಕಾರನ್ನು ಬುಕ್ ಮಾಡಬಹುದು. ಜಾಗತಿಕ ಮಟ್ಟದಲ್ಲಿ ಅನಾವರಣಗೊಂಡ ಮೂರು ತಿಂಗಳ ಬಳಿಕ ಈ ಫೇಸ್ಲಿಫ್ಟ್ ಮಾದರಿಗಳು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುತ್ತಿವೆ.
ಹೊಸ 7 Series ಕಾರಿನಲ್ಲಿ ಬೆಳಕು ಹೊಳೆಯುವ ಇಲ್ಯುಮಿನೇಟೆಡ್ ಕಿಡ್ನಿ ಗ್ರಿಲ್, ಹೊಸ ವಿನ್ಯಾಸದ ಸ್ಪ್ಲಿಟ್ ಎಲ್ಇಡಿ ಹೆಡ್ಲ್ಯಾಂಪ್, ಹೊಸ ಅಲಾಯ್ ವೀಲ್ ಹಾಗೂ ಹಿಂಭಾಗದಲ್ಲಿ ಸ್ಲಿಮ್ ಟೈಲ್ಲ್ಯಾಂಪ್ಗಳನ್ನು ನೀಡಲಾಗಿದೆ. ಒಳಾಂಗಣದಲ್ಲಿ ಸಂಪೂರ್ಣ ಹೊಸ ಡ್ಯಾಶ್ಬೋರ್ಡ್, 17.9 ಇಂಚಿನ ಟಚ್ಸ್ಕ್ರೀನ್, 14.6 ಇಂಚಿನ ಪ್ಯಾಸೆಂಜರ್ ಡಿಸ್ಪ್ಲೇ ಹೊಂದಿದೆ.
ವೈರ್ಲೆಸ್ Apple CarPlay ಮತ್ತು Android Auto, BMW Operating System X ಸೇರಿದಂತೆ ಹಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಹಿಂಬದಿ ಪ್ರಯಾಣಿಕರಿಗಾಗಿ 31.3 ಇಂಚಿನ ಥಿಯೇಟರ್ ಸ್ಕ್ರೀನ್, ಮಸಾಜ್ ಸೀಟ್, ಹೀಟೆಡ್ ಆರ್ಮ್ರೆಸ್ಟ್ ಹಾಗೂ Bowers & Wilkins ಸೌಂಡ್ ಸಿಸ್ಟಮ್ ಕೂಡ ಲಭ್ಯವಿದೆ.
ಇದನ್ನೂ ಓದಿ: Mahindra ಹೊಸ ದಾಖಲೆ: ಜುಲೈನಲ್ಲಿ 1.03 ಲಕ್ಷಕ್ಕೂ ಅಧಿಕ ವಾಹನ ಮಾರಾಟ, 26% ಬೆಳವಣಿಗೆ
ಎಂಜಿನ್ ವಿಭಾಗದಲ್ಲಿ 740i xDrive ಪೆಟ್ರೋಲ್ ಮತ್ತು 740d xDrive ಡೀಸೆಲ್ ಮಾದರಿಗಳು 3.0 ಲೀಟರ್ ಮಿಲ್ಡ್-ಹೈಬ್ರಿಡ್ ಎಂಜಿನ್ನೊಂದಿಗೆ ಮುಂದುವರಿಯಲಿವೆ.
ಎಲೆಕ್ಟ್ರಿಕ್ BMW i7 50 xDrive ಈಗ ಆಲ್-ವೀಲ್ ಡ್ರೈವ್ ಹಾಗೂ 112.4 kWh ಬ್ಯಾಟರಿಯೊಂದಿಗೆ 455 hp ಶಕ್ತಿಯನ್ನು ನೀಡಲಿದೆ. ಟಾಪ್ ಮಾದರಿಯಾದ i7 M70 xDrive 680 hp ಮತ್ತು ಗರಿಷ್ಠ 1,100 Nm ಟಾರ್ಕ್ ಉತ್ಪಾದಿಸಲಿದೆ. ಭಾರತದಲ್ಲಿ ಬೆಲೆ ಹಾಗೂ ಬಿಡುಗಡೆ ದಿನಾಂಕವನ್ನು BMW ಇನ್ನೂ ಘೋಷಿಸಿಲ್ಲ. ಆದರೆ ಈ ಕಾರುಗಳು Mercedes-Benz S-Class ಹಾಗೂ Mercedes EQS ಮಾದರಿಗಳಿಗೆ ಪ್ರಮುಖ ಪೈಪೋಟಿ ನೀಡಲಿವೆ.

